ETV Bharat / entertainment

ವೈರಲ್​ ಆಯ್ತು ಅನಂತ್​ - ರಾಧಿಕಾ ಪ್ರಿ ವೆಡ್ಡಿಂಗ್​ ಫೋಟೋ; ರಾಜಕುಮಾರಿಯಂತೆ ಕಂಗೊಳಿಸಿದ ಜೋಡಿ - Anant Radhika Pre Wedding Cruise party photo - ANANT RADHIKA PRE WEDDING CRUISE PARTY PHOTO

Radhika Anant Pre Wedding Cruise party: ಇಟಲಿಯಿಂದ ಫ್ರಾನ್ಸ್​ವರೆಗೆ ಐಷಾರಾಮಿ ಹಡಗಿನಲ್ಲಿ ನಡೆದ ನಾಲ್ಕು ದಿನದ ಅದ್ದೂರಿ ವಿವಾಹ ಪೂರ್ವ ಸಮಾರಂಭದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

radhika-merchant-looks-like-a-princess-in-new-pics-with-anant-ambani-from-pre-wedding-cruise-party
ರಾಧಿಕಾ ಮರ್ಚೆಂಟ್​ - ಅನಂತ್​ ಅಂಬಾನಿ ((ಸಂಗ್ರಹ ಚಿತ್ರ) ETV Bharat)
author img

By ETV Bharat Karnataka Team

Published : Jun 6, 2024, 2:05 PM IST

ಮುಂಬೈ: ರಾಧಿಕಾ ಮರ್ಚೆಂಟ್​ ಮತ್ತು ಅನಂತ್​ ಅಂಬಾನಿಯ ಅದ್ದೂರಿ ಮತ್ತು ಐಷಾರಾಮಿ ಪ್ರಿ ವೆಡ್ಡಿಂಗ್​ ಮುಗಿದಿದ್ದು, ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನಂತ್​ ರಾಧಿಯ ಅವರ ಈ ಕಾರ್ಯಕ್ರಮದ ವಿಶೇಷ ಫೋಟೋವೊಂದರಲ್ಲಿ ರಾಧಿಕಾ- ಅನಂತ್​ ಡಿಸ್ನಿ ರಾಜಕುಮಾರ- ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ ಎಂಬ ಹೋಲಿಕೆಯನ್ನು ಜನರು ಮಾಡುತ್ತಿದ್ದಾರೆ.

ಮುಖದ ತುಂಬ ಹೂ ನಗು ತುಂಬಿದ ಜೋಡಿಗಳು ಪರಸ್ಪರ ಕೈ ಹಿಡಿದು ನಿಂತಿರುವುದು ಕಾಣಬಹುದು. ಅನಂತ್​ ಕಡು ನೀಲಿ ಬಣ್ಣದ ಬ್ಲೇಜರ್​ ಸೂಟ್​ನಲ್ಲಿ ಮಿಂಚಿದ್ದಾರೆ, ಈ ಸೂಟ್​ನ ವಿಶೇಷ ಎಂದರೆ, ಬ್ಲೇಜರ್​ನ ವಜ್ರದ ಬ್ರೊಚ್​ನಿಂದ ಸಿಂಗರಿಸಲಾಗಿದೆ. ಸೂಟ್​ನ ಕಾಲರ್​ ಅನ್ನು ಕ್ರಿಸ್ಟಲ್​ನಿಂದ ಅಲಂಕರಿಸಲಾಗಿದೆ. ರಾಧಿಕಾ ಮರ್ಚೆಂಟ್​​ ಆಕಾಶ ನೀಲಿ ಬಣ್ಣದ ಸ್ಟ್ರಪ್ಲೆಸ್​ನ ಬಾಡಿಕಾನ್​ ಗೌನ್​ನಲ್ಲಿ ಕಂಡಿದ್ದಾರೆ. ಧಿರಿಸಿಗೆ ಒಪ್ಪುವ ಬಣ್ಣದ ವಜ್ರದ ಸರ ಮತ್ತು ಕಿವಿ ಒಲೆ ತೊಟ್ಟಿದ್ದು, ಕೂದಲನ್ನು ಬನ್​ನಿಂದ ಸುತ್ತಿದ್ದಾರೆ. ರಾಧಿಕಾರನ್ನು ನೋಡಿದವರು ಸಿಂಡ್ರೆಲಾಗೆ ಹೋಲಿಕೆ ಮಾಡಿದ್ದಾರೆ.

ಮೇ 28ರಿಂದ 31ರವರೆಗೆ ಇಟಲಿಯಿಂದ ಫ್ರಾನ್ಸ್​ವರೆಗೆ ಐಷಾರಾಮಿ ಹಡಗಿನಲ್ಲಿ ನಡೆದ ನಾಲ್ಕು ದಿನದ ಅದ್ದೂರಿ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್​ ನಟ - ನಟಿಯರು ಭಾಗಿಯಾಗಿದ್ದರು. ಶಾರುಖ್​ ಖಾನ್​ ಮತ್ತು ಅವರ ಮಕ್ಕಳು, ಜಾಹ್ನವಿ ಕಪೂರ್​, ಕರೀನಾ ಕಪೂರ್​ ಖಾನ್​, ರಣಬೀರ್​ ದಂಪತಿ, ಕರಣ್​ ಜೋಹರ್​, ಅನನ್ಯಾ ಪಾಂಡೆ, ಸಾರಾ ಆಲಿ ಖಾನ್​ ಸೇರಿದಂತೆ 800 ಗಣ್ಯರು ಭಾಗಿಯಾಗಿದ್ದರು.

ಇದಕ್ಕೆ ಮುನ್ನ ಮಾರ್ಚ್​ನಲ್ಲಿ ಜಾಮ್​ನಗರನಲ್ಲಿ ನಡೆದ ಮೊದಲ ಪ್ರಿ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ರಾಧಿಕಾ ಗುಲಾಬಿ ಬಣ್ಣದ ಧಿರಿಸಿನಲ್ಲಿ ಕಂಡಿದ್ದರು.

ಎರಡು ವಿವಾಹ ಪೂರ್ವ ಮದುವೆ ಸಮಾರಂಭ ಮುಗಿಸಿರುವ ಈ ಜೋಡಿ ಮುಂಬೈನಲ್ಲಿ ಜುಲೈ 12ರಂದು ಸಪ್ತಪದಿ ತುಳಿಯಲಿದ್ದಾರೆ. ಅಂಬಾನಿಯವರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಮದುವೆ ಆಮಂತ್ರಣ ಪತ್ರಿಕೆ ಕೂಡ ವೈರಲ್​ ಆಗಿದೆ. ಇದಾದ ಎರಡು ದಿನದ ಬಳಿಕ ಅಂದರೆ, ಜುಲೈ 14ರಂದು ಅದ್ದೂರಿ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅತಿಥಿಗಳಿಗೆ ಇಂಡಿಯನ್​ ಚಿಕ್​ ಔಟ್​ಫಿಟ್​​ ಧರಿಸುವಂತೆ ಕೇಳಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಕೂಡ ಬಾಂದ್ರಾದ ಜಿಯೋ ವರ್ಲ್ಡ್​​ ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಅನಂತ್-ರಾಧಿಕಾ ವೈಭವೋಪೇತ ಕ್ರೂಸ್‌ ಪ್ರೀ ವೆಡ್ಡಿಂಗ್‌ ಪಾರ್ಟಿಗೆ ತೆರಳಿದ ಶಾರುಖ್ ಖಾನ್​ ಕುಟುಂ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.