ETV Bharat / entertainment

ಅಲ್ಲು ಅರ್ಜುನ್ ಬರ್ತ್​ಡೇಗೆ 'ಪುಷ್ಪ 2' ಮಾಸ್ ಟೀಸರ್ ರಿಲೀಸ್ - Pushpa 2 Teaser - PUSHPA 2 TEASER

Pushpa 2 Teaser Released: ಟಾಲಿವುಡ್​ನ ಐಕಾನ್​ ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಟೈಲಿಶ್ ಸ್ಟಾರ್ ಬರ್ತ್​ಡೇಗಾಗಿ ಪುಷ್ಪ 2 ಮಾಸ್ ಟೀಸರ್ ಬಿಡುಗಡೆ ಮಾಡಲಾಗಿದೆ.

PUSHPA 2 MOVIE  PUSHPA 2 MASS TEASER REVEALED  STYLISH STAR ALLU ARJUN

author img

By ETV Bharat Karnataka Team

Published : Apr 8, 2024, 6:49 PM IST

ಟಾಲಿವುಡ್ ಸಿನಿಮಾ ಇಂಡಸ್ಟ್ರಿಯ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಪುಷ್ಪ 2: ದಿ ರೂಲ್‌' ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಪಕ್ಕಾ ಮಾಸ್ ಶೈಲಿಯಲ್ಲಿದೆ. ಅಲ್ಲು ಅರ್ಜುನ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ.

ಅಲ್ಲು ಅರ್ಜುನ್ ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿದ್ದಾರೆ. ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವಿದೆ. ಕಾಲಿಗೆ ಗಜ್ಜೆ ಕಟ್ಟಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ತ್ರಿಶೂಲ ಹಿಡಿದುಕೊಂಡು ಫೈಟ್ ಮಾಡಿದ್ದಾರೆ. ಜಾತ್ರೆಯ ಬ್ಯಾಗ್ರೌಂಡ್‌ನಲ್ಲಿ ಟೀಸರ್ ಮೂಡಿಬಂದಿದೆ.

  • " class="align-text-top noRightClick twitterSection" data="">

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೀಸರ್ ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಲಕ್ಷಾಂತರ ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಫಹಾದ್ ಫಾಸಿಲ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್‌, ಡಾಲಿ ಧನಂಜಯ, ಜಗದೀಶ್‌ ಮುಂತಾದವರು ಅಭಿನಯಿಸಿದ್ದಾರೆ.

ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ, ಭೋಜಪುರಿ ಭಾಷೆಗಳಲ್ಲೂ ಸಿನಿಮಾ ತೆರೆಗೆ ಬರುತ್ತಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಕುಮಾರ್ ನಿರ್ದೇಶಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 1,000 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹಿಸಬಹುದು ಎಂಬ ಲೆಕ್ಕಾಚಾರ ಸಿನಿ ಪಂಡಿತರದ್ದು. ಪುಷ್ಪ 2 ಆಗಸ್ಟ್ 15ರಂದು ತೆರೆಕಾಣುತ್ತಿದೆ.

ಇದನ್ನೂ ಓದಿ: 42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ​; ಅಲ್ಲು ಅರ್ಜುನ್ ಸಿನಿ ಪಯಣ ಕುರಿತಾದ ಮಾಹಿತಿ ಇಲ್ಲಿದೆ - ALLU ARJUN BIRTHDAY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.