ETV Bharat / entertainment

ಮಿಥ್ಯ ಯಾಕಾಗಬಾರದು ಸತ್ಯ! ಕಾಮಿಡಿ ಶೋನಲ್ಲಿ ಪುನೀತ್​​ ಸ್ಮರಣೆ: ಒದ್ದೆಯಾಯ್ತು ಕನ್ನಡಿಗರ ಕಣ್ಣಾಲಿಗಳು - Puneeth Rajkumar - PUNEETH RAJKUMAR

ಕಿರುತೆರೆ ಕಾಮಿಡಿ ಕಾರ್ಯಕ್ರಮವೊಂದರಲ್ಲಿ ಥೇಟ್​ ಪುನೀತ್​ ರಾಜ್​​ಕುಮಾರ್​​​ ಅವರಂತೆ ಕಾಣುವ ವ್ಯಕ್ತಿಯ ಎಂಟ್ರಿಯಾಗಿದ್ದು, ಪ್ರೋಮೋ ಕಂಡ ಕನ್ನಡಿಗರು ಕಣ್ಣೀರಿಟ್ಟಿದ್ದಾರೆ.

Puneeth Rajkumar
ಪುನೀತ್ ರಾಜ್​ಕುಮಾರ್ (ETV Bharat)
author img

By ETV Bharat Karnataka Team

Published : Jul 26, 2024, 4:56 PM IST

ನಗುಮೊಗದ ಒಡೆಯ ಪುನೀತ್ ರಾಜ್​ಕುಮಾರ್​​​​ ನಮ್ಮೆಲ್ಲರನ್ನಗಲಿ ಎರಡೂವರೆ ವರ್ಷಗಳು ಉರುಳಿವೆ. ಆದರೆ ಅವರ ನೆನಪು ಕನ್ನಡಿಗರೆದೆಯಲ್ಲಿ ಸದಾ ಜೀವಂತ. ಇಂದಿಗೂ ಕರುನಾಡಿನ ಪರಮಾತ್ಮನ ಸ್ಮರಣೆ ಮುಂದುವರಿದಿದೆ. ಅಪ್ಪು ಹೆಸರಿನಲ್ಲಿ ಮಾನವೀಯ ಕಾರ್ಯಗಳು ನಡೆಯುತ್ತಲೇ ಇದೆ. ಇದೀಗ ಟಿವಿ ಶೋ ಒಂದರಲ್ಲಿ ಅಪ್ಪು ಆಗಮನವಾಗಿದೆ. ಹೌದು, ಥೇಟ್​ ಪುನೀತ್​ ರಾಜ್​​ಕುಮಾರ್​​​ ಅವರಂತೆ ಕಾಣುವ ವ್ಯಕ್ತಿಯ ಎಂಟ್ರಿಯಾಗುತ್ತಿದ್ದಂತೆ ವೇದಿಕೆ ಬಳಿ ಇದ್ದವರ ಕಣ್ಣು ತುಂಬಿ ಬಂದಿದೆ. ಈ ವಿಡಿಯೋ ಹೊರಬೀಳುತ್ತಿದ್ದಂತೆ ಇಡೀ ಕರುನಾಡಿನ ಮನ ಕರಗಿದೆ.

ಜನಪ್ರಿಯ ಕಿರುತೆರೆ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಪ್ರೀಮಿಯರ್​​ ಲೀಗ್​ ಶೋನ ಸಣ್ಣ ಪ್ರೋಮೋ ಒಂದನ್ನು ನಿರೂಪಕಿ ಅನುಶ್ರೀ ಹಂಚಿಕೊಂಡಿದ್ದಾರೆ. ವಾರಾಂತ್ಯದ ರಾತ್ರಿ ಪ್ರಸಾರ ಆಗುವ ಈ ಫೇಮಸ್​​ ಶೋನಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್​ ರಾಜ್​ಕುಮಾರ್​ ಅವರ ಸ್ಮರಣೆಯಾಗಿದೆ.

ತಂಡವೊಂದು ನಟನೆ ಮಾಡಲು ಶುರು ಮಾಡುತ್ತದೆ. ಟೈಮ್​​ ಮಷಿನ್​​​ ಕಾನ್ಸೆಪ್ಟ್​ ಮೂಲಕ, ಏ ಬುಜ್ಜಿ 2021ಕ್ಕೆ ಹೋಗು ಅಂತಾ ಹೇಳಿದ್ದಾರೆ. ಕಾಲಚಕ್ರ ಹಿಂದಕ್ಕೆ ಹೋಗಿ ಪುನೀತ್​​ ರಾಜ್​ಕುಮಾರ್​ ಅವರಂತೆ ಕಾಣುವ ವ್ಯಕ್ತಿಯ ಎಂಟ್ರಿಯಾಗುತ್ತಿದ್ದಂತೆ ತೀರ್ಪುಗಾರರು ಅಚ್ಚರಿಗೊಂಡಿದ್ದಾರೆ. ಅದರಲ್ಲೂ ನಿರೂಪಕಿ ಅನುಶ್ರೀ ಅವರಿಗೆ ಒಮ್ಮೆಲೆ ಶಾಕ್​ ಆದಂತೆ ಆಗಿದೆ. ಕತ್ತಲ ಬಳಿಕ, ಬೆಳದಿಂಗಳ ನಡುವೆ ಬಂದ ವ್ಯಕ್ತಿಯನ್ನು ಕಂಡ ಎಲ್ಲರೂ ಏನಾಗ್ತಿದೆ ಎಂದು ಕಣ್ಣು ಮಿಟುಕಿಸದೇ ನೋಡಿದ್ದಾರೆ.

ಇದನ್ನೂ ಓದಿ: ಟಿ.ಎಸ್ ನಾಗಾಭರಣರ ಪತ್ನಿ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ'ನಿಗೆ ಚಿನ್ನಾರಿಮುತ್ತ ಸಾಥ್ - Genius Mutta

ಹೌದು, ಥೇಟ್​ ಪುನೀತ್​ ರಾಜ್​ಕುಮಾರ್​ ಅವರಂತೇ ಕಾಣುವ ವ್ಯಕ್ತಿಯೋರ್ವರು ಸೂಟು ಬೂಟು, ಗ್ಲಾಸ್​ ಧರಿಸಿ ಸಖತ್​ ಸ್ಟೈಲಿಶ್​ ಆಗಿ ವೇದಿಕೆಗೆ ಎಂಟ್ರಿ ಕೊಡ್ತಾರೆ. ಈ ವೇಳೆ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ ಎಂಬ ಹಾಡು ಪ್ಲೇ ಆಗಿದೆ. ತರುಣ್​ ಸುಧೀರ್​ ಸೇರಿದಂತೆ ವೇದಿಕೆಯಲ್ಲಿದ್ದ ತಿರ್ಪುಗಾರರು, ನಿರೂಪಕಿ ಸೇರಿ ತಂಡ ಎದ್ದು ನಿಂತು ನಮನ ಸಲ್ಲಿಸಿದ್ದಾರೆ. ಅನುಶ್ರೀ ಅವರಿಗೆ ಕಣ್ಣೀರು ತಡೆಯಲಾಗಿಲ್ಲ. ಉಳಿದವರ ಕಣ್ಣಾಲಿಗಳೂ ತೇವವಾಗಿದೆ. ಒಟ್ಟಾರೆ ಕಾಮಿಡಿ ಶೋಗೆ ಬಂದ ಎಲ್ಲರೂ ಕಣ್ಣೀರಿಟ್ಟು ಭಾವುಕರಾಗಿದ್ದಾರೆ. ನಂತರ ಆ ವ್ಯಕ್ತಿ ಥೇಟ್​ ಅಪ್ಪುವಿನಂತೆಯೇ ಮಾತನಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಅಪ್ಪು ಶೈಲಿಯಲ್ಲೇ ಅದ್ಭುತ ನಡೆ ನುಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಜು.29ಕ್ಕೆ 'ಕೆಡಿ' ಸಿನಿಮಾದಿಂದ ಸಿಗಲಿದೆ ಬಿಗ್​ ಅಪ್ಡೇಟ್​​: ಧ್ರುವ ಅರ್ಜಾ ಅಭಿಮಾನಿಗಳಲ್ಲಿ ಕಾತರ - KD Movie

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಂಡ ನಿರೂಪಕಿ ಅನುಶ್ರೀ ''ಇಂಥದ್ದೊಂದು ದಿನ ಅಭಿಮಾನಿಗಳ ಜೀವನದಲ್ಲಿ ಒಮ್ಮೆ ಬರಬಾರದೇ ?. ನಮ್ಮ ಅಪ್ಪು ಅಪ್ಪುಗೆ ನಮಗೆ ಸಿಗಬಾರದೇ! ಇದು ವಾಸ್ತವ ಅಲ್ಲ, ಆದರೆ ಈ ಮಿಥ್ಯ ಯಾಕಾಗಬಾರದು ಸತ್ಯ! ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ ಈ ಸಂಚಿಕೆ. ಕೊಂಚ ಕಾಲ ಆದರೂ ಸರಿ ನಮಗೆ ಇಂಥ ಒಂದು ಕ್ಷಣ ಕೊಟ್ಟ ಝೀ ಕನ್ನಡ ಮತ್ತು ಕಾಮಿಡಿ ಕಿಲಾಡಿ ಪ್ರೀಮಿಯರ್​ ಲೀಗ್​​ ತಂಡಕ್ಕೆ ಕೋಟಿ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಿಸ್​ ಯೂ ಅಪ್ಪು ಸರ್​​, ಎಂದೆಂದಿಗೂ ಅಪ್ಪು ಫ್ಯಾನ್​ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.