ETV Bharat / entertainment

ಹಸೆಮಣೆ ಏರಲು ಸಜ್ಜಾದ್ರಾ ಕೃತಿ ಖರಬಂದ - ಪುಲ್ಕಿತ್ ಸಾಮ್ರಾಟ್?! - Kriti Kharbanda

ಪ್ರೇಮಪಕ್ಷಿಗಳಾದ ಕೃತಿ ಖರಬಂದ ಹಾಗೂ ಪುಲ್ಕಿತ್ ಸಾಮ್ರಾಟ್ ಮದುವೆಯಾಗಲಿದ್ದಾರೆ ಎಂದು ಕೆಲ ವರದಿಗಳು ಸೂಚಿಸಿವೆ.

Pulkit Samrat - Kriti Kharbanda
ಪುಲ್ಕಿತ್ ಸಾಮ್ರಾಟ್​ - ಕೃತಿ ಖರಬಂದ
author img

By ETV Bharat Karnataka Team

Published : Feb 15, 2024, 10:54 AM IST

ಬಾಲಿವುಡ್​ ಅಂಗಳದಲ್ಲಿರುವ ಪ್ರೇಮಪಕ್ಷಿಗಳಾದ ಕೃತಿ ಖರಬಂದ ಹಾಗೂ ಪುಲ್ಕಿತ್ ಸಾಮ್ರಾಟ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ರಿಲೇಶನ್​​​ಶಿಪ್​​ನಲ್ಲಿರೋ ಈ ಜೋಡಿ ತಮ್ಮ ಸಂಬಂಧವನ್ನು 'ಮದುವೆ' ಕಾನ್ಸೆಪ್ಟ್ ಮೂಲಕ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿರುವಂತೆ ತೋರುತ್ತಿದೆ. ಪ್ರೇಮಿಗಳ ದಿನದಂದು ಸೋಷಿಯಲ್​ ಮೀಡಿಯಾ ಪೋಸ್ಟ್‌ ಮೂಲಕ ತಮ್ಮ ಮ್ಯಾರೇಜ್​​ ಪ್ಲ್ಯಾನ್ಸ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಪುಲ್ಕಿತ್ ಸಾಮ್ರಾಟ್ ಅವರು ಕೃತಿ ಖರಬಂದ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ, "ಡ್ಯಾನ್ಸಿಂಗ್​ ಆನ್​ ದಿ ಎಡ್ಜ್ ಆಫ್​​ ಲೀಪ್, ಐ ಡು, ಐ ಲವ್​​ ಯೂ'' ಎಂದು ಬರೆದುಕೊಂಡು, ಹಾರ್ಟ್ ಎಮೋಜಿ ಹಾಕಿದ್ದಾರೆ.

ಮತ್ತೊಂದೆಡೆ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಸುಂದರ ಫೋಟೋವನ್ನು ಕೃತಿ ಖರಬಂದ ಕೂಡ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಜೋಡಿಯು ಪರಸ್ಪರರ ಕೈಗಳನ್ನು ಬಿಗಿಯಾಗಿ ಹಿಡಿದಿರುವುದನ್ನು ಕಾಣಬಹುದು. ನಟಿ ಗೆಳೆಯನನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದು, ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಬ್ಯೂಟಿಫುಲ್ ಫೋಟೋ ಶೇರ್ ಮಾಡಿದ ನಟಿ, "ಲೆಟ್ಸ್ ಮಾರ್ಚ್ ಟುಗೆದರ್, ಹ್ಯಾಂಡ್​ ಇನ್​ ಹ್ಯಾಂಡ್​​'' ಎಂದು ಲವ್​ ಸಿಂಬಲ್​​ನೊಂದಿಗೆ ಕ್ಯಾಪ್ಸನ್​​​ ಕೊಟ್ಟಿದ್ದಾರೆ.

ಇದರರ್ಥ, ಜೋಡಿ ಇದೇ ಸಾಲಿನ ಮಾರ್ಚ್‌ನಲ್ಲಿ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಎಂದರ್ಥವೇ?. ಇಬ್ಬರ ಪೋಸ್ಟ್‌ಗಳ ಕಾಮೆಂಟ್ ಸೆಕ್ಷನ್​​ ಅವರ ಅಭಿಮಾನಿಗಳ ಲವೆಬಲ್​​ ಕಾಮೆಂಟ್‌ಗಳಿಂದ ತುಂಬಿ ತುಳುಕುತ್ತಿದೆ. ಈ ಹಿಂದೆ 'ಹೌಸ್‌ಫುಲ್ 4' ಮತ್ತು 'ಯಮ್ಲಾ ಪಗ್ಲಾ ದೀವಾನಾ: ಫಿರ್ ಸೆ' ಸಿನಿಮಾಗಳಲ್ಲಿ ನಟಿ ಜೊತೆ ಕೆಲಸ ಮಾಡಿರುವ ಬಾಬಿ ಡಿಯೋಲ್, ಈ ಕ್ಯೂಟ್​ ಕಪಲ್​​​ಗೆ ವಿಶ್​​ ಮಾಡಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಾಯಗೊಂಡ ಹೃತಿಕ್​ ರೋಷನ್​​: ನೋವಿದ್ದರೂ 'ಪುರುಷರು ಶಕ್ತಿ ಪ್ರದರ್ಶಿಸಬೇಕಾಗಿದೆ' ಎಂದ ನಟ

ಅನೀಸ್ ಬಾಜ್ಮೀ ಅವರ 'ಪಾಗಲ್ಪಂತಿ' ಶೂಟಿಂಗ್​​ ಸೆಟ್‌ನಲ್ಲಿ ಈ ಇಬ್ಬರ ಪ್ರೇಮಾಂಕುರವಾಯಿತು. ಚಿತ್ರದ ಪ್ರಮೋಶನ್​ ಈವೆಂಟ್​ನಲ್ಲಿ ನಟಿ ತಮ್ಮ ಸಂಬಂಧವನ್ನು ದೃಢಪಡಿಸಿದರು. ಸಂದರ್ಶನದಲ್ಲಿ ತಮ್ಮ ಸಂಬಂಧದ ಸುತ್ತಲಿನ ವದಂತಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಕೃತಿ ಖರಬಂದ, "ಇಲ್ಲ, ಅವು ಕೇವಲ ವದಂತಿಗಳಲ್ಲ" ಎಂದು ಪರೋಕ್ಷವಾಗಿ ತಾವು ಸಂಬಂಧದಲ್ಲಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಯಶ್​ ರಾಧಿಕಾ ವ್ಯಾಲಂಟೈನ್ ಡೇ: ಅಭಿಮಾನಿಗಳ ಮನಮುಟ್ಟಿದ ಫ್ಯಾಮಿಲಿ ಫೋಟೋಗಳಿವು

ಕಳೆದ ತಿಂಗಳ ಅಂತ್ಯದಲ್ಲಿ, ಸಮಾರಂಭವೊಂದರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಅವರ ನಿಶ್ಚಿತಾರ್ಥದ ವದಂತಿಗಳು ಎದ್ದವು. ವೈರಲ್​ ಫೋಟೋಗಳಲ್ಲಿ ಜೋಡಿ ಎಂಗೇಜ್​ಮೆಂಟ್​​ ರಿಂಗ್ಸ್ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಾಲಿನಲ್ಲಿ ಹಸೆಮಣೆ ಏರೋದು ನಿಜವೇ ಆಗಿದ್ದಲ್ಲಿ, ಈ ಬಗ್ಗೆ ಅಧಿಕೃತ ಘೋಷಣೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.