ETV Bharat / entertainment

ಪ್ರಿಯಾಂಕಾ ಚೋಪ್ರಾ ಸ್ಟನ್ನಿಂಗ್​​​ ಲುಕ್​​​​ಗೆ ಫ್ಯಾನ್ಸ್​ ಫಿದಾ​: ದೇಸಿ ಗರ್ಲ್​​ ಕೈ ಮೇಲಿದೆ ಮಗಳ ಹಚ್ಚೆ - Priyanka Chopra Stunning Pictures - PRIYANKA CHOPRA STUNNING PICTURES

ಪ್ರಿಯಾಂಕಾ ಚೋಪ್ರಾ ತಮ್ಮ ಫ್ರೆಂಚ್ ವೆಕೇಶನ್​​ ಫೋಟೋಗಳೊಂದಿಗೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡಿದ್ದಾರೆ. ನಟಿ ಸರಣಿ​​ ಫೋಟೋಗಳನ್ನು ಶೇರ್​ ಮಾಡಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Priyanka Chopra Family
ಪ್ರಿಯಾಂಕಾ ಚೋಪ್ರಾ ಕುಟುಂಬ (Photo: IANS)
author img

By ETV Bharat Entertainment Team

Published : Sep 14, 2024, 2:42 PM IST

ಹೈದರಾಬಾದ್: ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಗುಣಮಟ್ಟದ ಸಮಯ ಕಳೆದಿದ್ದಾರೆ. ವೆಕೇಶನ್​ನ ಸರಣಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡಿದ್ದಾರೆ. ದೇಸಿ ಗರ್ಲ್​​ ಸಮುದ್ರತೀರದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ. ಗಂಡ, ಮಗಳೊಂದಿಗಿನ ಈ ಕ್ಷಣ ನಟಿಯ ಉತ್ತಮ ಕ್ಷಣಗಳಲ್ಲೊಂದಾಗಿದೆ ಎಂಬುದನ್ನು ಪ್ರತೀ ಫೋಟೋಗಳು ಒತ್ತಿ ಹೇಳುತ್ತಿವೆ.

2022ರ ಜನವರಿಯಲ್ಲಿ, ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿ ಮೇರಿಯನ್ನು ಸ್ವಾಗತಿಸಿದರು. ಪ್ರಸ್ತುತ ಪವರ್​ಫುಲ್​ ಸೆಲೆಬ್ರಿಟಿ ಕಪಲ್​​ ಫ್ರಾನ್ಸ್‌ನಲ್ಲಿ ಸಮಯ ಕಳೆಯುತ್ತಿದೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಮೈಮೇಲಿದ್ದ ಮಗಳ ಟ್ಯಾಟೂ ನೆಟ್ಟಿಗರ ಗಮನ ಸೆಳೆದಿದೆ.

ಫೋಟೋವೊಂದರಲ್ಲಿ, ಪ್ರಿಯಾಂಕಾ ಅವರು ವಿಹಾರ ನೌಕೆಯಲ್ಲಿ ವಿಶ್ರಾಂತಿ ಪಡೆಯುತ್ತಿರೋದನ್ನು ಕಾಣಬಹುದು. ಬ್ರೌನ್, ಕ್ರೀಮ್​ ಕಲರ್​ ಔಟ್​​ಫಿಟ್, ಹ್ಯಾಟ್​​, ಸನ್‌ಗ್ಲಾಸ್‌ ಧರಿಸಿದ್ದರು. ನಟಿ ತಮ್ಮ ಮೊಣಕಾಲಿನ ಮೇಲೆ ಕೈ ಇರಿಸಿದ್ದು, ತೋಳಿನ ಮೇಲೆ ಹಚ್ಚೆ ಗೋಚರಿಸಿದೆ. ಟ್ಯಾಟೂ ಮಗಳು ಮಾಲ್ತಿಗೆ ಸಂಬಂಧಪಟ್ಟಿದ್ದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ಪ್ರಿಯಾಂಕಾ ಅವರ ಪೋಸ್ಟ್ ಅಭಿಮಾನಿಗಳನ್ನು ಸೆಳೆದಿದ್ದು, ನೆಟ್ಟಿಗರು ಕಾಮೆಂಟ್​ ಸೆಕ್ಷನ್​​​ನಲ್ಲಿ ಬ್ಯಸಿಯಾಗಿದ್ದಾರೆ. ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಸೋಷಿಯಲ್​ ಮೀಡಿಯಾ ಬಳಕೆದಾರರೋರ್ವರು "ಹೊಸ ಟ್ಯಾಟೂ, ಇದು ಮೇರಿ" ಎಂದು ಹೇಳಿದ್ರೆ, ಮತ್ತೋರ್ವರು "ಪ್ರಿಯಾಂಕಾ ಚೋಪ್ರಾ ಅವರ ತೋಳಿನ ಮೇಲೆ ಮಾಲ್ತಿ ಟ್ಯಾಟೂವನ್ನು ಯಾರು ಗಮನಿಸಿದ್ರಿ?" ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷವೇ ಈ ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಕೆಲವರು ಗಮನ ಸೆಳೆದಿದ್ದಾರೆ. ಓರ್ವರು ಕಾಮೆಂಟ್​ ಮಾಡಿ, "ಅಯ್ಯೋ, ಆ ಟ್ಯಾಟೂವನ್ನು ನೋಡಿ. ಮುದ್ದಾಗಿದೆ. ಸೋ ಸ್ವೀಟ್​" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳಮುಖಿಯರದ್ದೇ ಕಥೆ, ನಟನೆ, ಸಹನಿರ್ಮಾಣ: 6 ಭಾಷೆಗಳಲ್ಲಿ ಬರಲಿದೆ ಜೋಗತಿ ಮಂಜಮ್ಮ ನಟನೆಯ 'ಶಿವಲೀಲಾ' - Transgenders Shivaleela movie

ಪ್ರಿಯಾಂಕಾ ಚೋಪ್ರಾ ಅವರ ಟ್ಯಾಟೂ ಪ್ರಯಾಣವು ಹಲವು ಮಹತ್ವದ ಘಟನೆಗಳನ್ನು ಒಳಗೊಂಡಿದೆ. 2012ರಲ್ಲಿ, ತಂದೆ ಡಾ.ಅಶೋಕ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ 'ಡ್ಯಾಡಿಸ್ ಲಿಲ್ ಗರ್ಲ್' ಎಂಬ ಹಚ್ಚೆ ಹಾಕಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮ ಬಲ ಕಾಲಿನ ಕೆಳಭಾಗದಲ್ಲಿ ಮೂರು ಹೆಜ್ಜೆಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ಬಹುಶಃ ಅವು ಅವರ ಸಾಕು ನಾಯಿಗಳಾದ ಡಯಾನಾ, ಗಿನೋ ಮತ್ತು ಪಾಂಡಾಗಳ ಕುರಿತಾಗಿರಬಹುದು. ಇನ್ನೂ ತಮ್ಮ ತೋಳಿನ ಮೇಲೆ ವಿಶ್ವ ಭೂಪಟದ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಡ್ ಕಾಮೆಂಟ್ ಮಾಡೋರಿಗೆ ಬಿಗ್ ಬಾಸ್ ಇಶಾನಿ ಕೊಟ್ರು ಸಖತ್​ ಗೂಸಾ: ಸೋಷಿಯಲ್​​ ಮೀಡಿಯಾದ 'ಅಸಲಿ ಬಣ್ಣ' ಅನಾವರಣ - Asali Banna Song

ಪ್ರಿಯಾಂಕಾ ಮತ್ತು ನಿಕ್ 2018ರ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ರಾಜಸ್ಥಾನದಲ್ಲಿ ಅದ್ಧೂರಿ ವಿವಾಹ ಬಂಧಕ್ಕೂ ಒಳಗಾಗಿದ್ದರು. ಮಗಳು ಮಾಲ್ತಿ 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.