ETV Bharat / entertainment

'ದಿ ಬ್ಲಫ್' ಶೂಟಿಂಗ್ ವೇಳೆ ನಟಿ ಪ್ರಿಯಾಂಕಾ ಚೋಪ್ರಾಗೆ ಗಾಯ - Priyanka Chopra Injured - PRIYANKA CHOPRA INJURED

'ದಿ ಬ್ಲಫ್' ಶೂಟಿಂಗ್​ ಸೆಟ್​ನಲ್ಲಿ ಪ್ರಿಯಾಂಕಾ ಚೋಪ್ರಾ ಗಾಯಗೊಂಡಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ (IANS)
author img

By ETV Bharat Karnataka Team

Published : Jun 19, 2024, 6:01 PM IST

ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿ. ಇವರ ಬಳಿ ಹಲವು ಪ್ರೊಜೆಕ್ಟ್​ಗಳಿದ್ದು, ಒಂದೊಂದನ್ನೇ ಪೂರ್ಣಗೊಳಿಸುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಮ್ಮ ಮುಂಬರುವ ಚಿತ್ರ 'ದಿ ಬ್ಲಫ್' (The Bluff) ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೀಗ, ಶೂಟಿಂಗ್​ ಸೆಟ್‌ನಲ್ಲಿ ಗಾಯಗೊಂಡಿದ್ದು, ಫೋಟೋ ಹಂಚಿಕೊಂಡಿದ್ದಾರೆ.

Priyanka Chopra Instagram story
ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಮ್​ ಸ್ಟೋರಿ (Priyanka Chopra Instagram)

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಇರುವ ನಟಿ. ವೃತ್ತಿ ಮತ್ತು ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಸಿನಿಮಾ ಅಪ್‌ಡೇಟ್ಸ್ ಕೊಡುತ್ತಿರುತ್ತಾರೆ. ಇದೀಗ ತಮ್ಮ ವೃತ್ತಿಪರ ಸಾಹಸಗಳ ಒಂದು ನೋಟವನ್ನು ಒದಗಿಸಿದ್ದಾರೆ. ಜೊತೆಗೆ, ಮಗಳ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ.

ಇಂದು ಪ್ರಿಯಾಂಕಾ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನ ಸ್ಟೋರಿ ಸೆಕ್ಷನ್​​ನಲ್ಲಿ ಕೆಲವು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ನಟಿ ಗಾಯಗೊಂಡಿರುವುದನ್ನು ಕಾಣಬಹುದು. ಕತ್ತಿನ ಭಾಗದಲ್ಲಿ ಉದ್ದವಾದ ಗಾಯವಾಗಿದೆ. 'ದಿ ಬ್ಲಫ್' ಚಿತ್ರದ ಸೆಟ್‌ನಲ್ಲಿ ಸ್ಟಂಟ್ ಸೀಕ್ವೆನ್ಸ್ ಶೂಟಿಂಗ್​​​ ಮಾಡುವಾಗ ಗಾಯಗೊಂಡಿರುವುದಾಗಿ ನಟಿಯೇ ತಿಳಿಸಿದ್ದಾರೆ.

ಇದಲ್ಲದೇ, ಪ್ರಿಯಾಂಕಾ ತಮ್ಮ ಪ್ರೀತಿಯ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್​ಳ ಸುಂದರ ಚಿತ್ರವನ್ನೂ ಸಹ ಶೇರ್ ಮಾಡಿದ್ದಾರೆ. ಇದರಲ್ಲಿ, ಮಾಲ್ತಿ ತನ್ನ ಫ್ರೆಂಡ್ ಥಿಯಾನ್ ದತ್ ಜೊತೆ ಕಾಣಿಸಿಕೊಂಡಿದ್ದಾಳೆ. ಮಕ್ಕಳಿಬ್ಬರೂ ಪೇಂಟಿಂಗ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾಲ್ತಿ ರೈನ್​ಬೋ ಡಿಸೈನ್​ ಡ್ರೆಸ್​ನಲ್ಲಿ ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಫೋಟೋ ಹಂಚಿಕೊಂಡ ನಟಿ, ರಿಯುನೈಟೆಡ್ ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಲ್ಮಾನ್-ರಶ್ಮಿಕಾ 'ಸಿಖಂದರ್' ಶೂಟಿಂಗ್‌: ಸೆಟ್​​ನಿಂದ ಸಲ್ಲು ನ್ಯೂ ಲುಕ್ ರಿವೀಲ್​​ - Sikandar

ಪ್ರಿಯಾಂಕಾ ಸಿನಿಮಾ ವಿಚಾರ ಗಮನಿಸುವುದಾದರೆ, 'ದಿ ಬ್ಲಫ್' ಚಿತ್ರದಲ್ಲಿ ಸಾಹಸಮಯ ಸೀನ್​​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 'ಹೆಡ್ಸ್ ಆಫ್ ಸ್ಟೇಟ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ರಿಚರ್ಡ್ ಮ್ಯಾಡೆನ್ ಜೊತೆ ತೆರೆ ಹಂಚಿಕೊಂಡಿರುವ ಆ್ಯಕ್ಷನ್ ಥ್ರಿಲ್ಲರ್ ಸರಣಿ ಸಿಟಾಡೆಲ್ ಏಪ್ರಿಲ್​ ಕೊನೆಗೆ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಯ್ತು.

ಇದನ್ನೂ ಓದಿ: 'ಕಲ್ಕಿ 2898 ಎಡಿ': ಭರ್ಜರಿ ಪ್ರೀ-ಬುಕಿಂಗ್‌, ಆರ್​ಆರ್​ಆರ್ ದಾಖಲೆ ಪುಡಿ ಪುಡಿ - Kalki 2898 AD

ETV Bharat Logo

Copyright © 2025 Ushodaya Enterprises Pvt. Ltd., All Rights Reserved.