ETV Bharat / entertainment

ಹಾಲಿವುಡ್​ನ ಆರಂಭದ ದಿನಗಳು ಭೀತಿ ಮೂಡಿಸಿದ್ದವು; ನಟಿ ಪ್ರಿಯಾಂಕಾ ಚೋಪ್ರಾ - Priyanka talks her Hollywood days

ಭಾರತದಲ್ಲಿನ ಬಾಲಿವುಡ್​ನಲ್ಲಿ ಗಳಿಸಿದ ಯಶಸ್ಸಿನ ಹೊರತಾಗಿ ಹಾಲಿವುಡ್​ನಲ್ಲಿ ತಾವು ಅನೇಕ ಸವಾಲುಗಳನ್ನು ಅನುಭವಿಸಬೇಕಾಯಿತು ಎಂದು ತಿಳಿಸಿದ್ದಾರೆ.

priyanka-chopra-details-scary-early-days-in-hollywood-difficult-times-would-have-rip-her-apart

author img

By ETV Bharat Karnataka Team

Published : Apr 27, 2024, 2:28 PM IST

ಹೈದರಾಬಾದ್​: ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಹಾಲಿವುಡ್​ನಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ - ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ತಾವು ಸಾಗಿ ಬಂದ ಹಾದಿ ಕುರಿತು ಮಾತನಾಡಿದ್ದಾರೆ. ಹಾಲಿವುಡ್​ನಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಸವಾಲುಗಳ ಕುರಿತು ಮಾತನಾಡಿರುವ ಅವರು ಆ ಸಮಯದಲ್ಲಿ ಒಬ್ಬಂಟಿತನ ಮತ್ತು ಭಯ ಕಾಡುತ್ತಿತ್ತು ಎಂದಿದ್ದಾರೆ. 2017ರಲ್ಲಿ ಬೇವಾಚ್​ ಮೂಲಕ ಪ್ರಿಯಾಂಕಾ ಹಾಲಿವುಡ್​ ಪ್ರಯಾಣ ಆರಂಭಿಸಿದ್ದಾರೆ.

ಇತ್ತೀಚಿಗೆ ಪೋಡ್​ಕಾಸ್ಟ್​​ನಲ್ಲಿ ಮಾತನಾಡಿರುವ ಅವರು, ಆರಂಭಿಕ ದಿನದಲ್ಲಿ ಪಶ್ಚಿಮದಲ್ಲಿ ನನ್ನ ಜೀವನ ಸುಲಭದ ಹಾದಿಯಾಗಿರಲಿಲ್ಲ ಎಂದಿದ್ದಾರೆ. ಅದರ ಅರ್ಥ ಹಾಲಿವುಡ್​ನಲ್ಲಿ ತಮ್ಮ ಆರಂಭ ಸುಖಕರವಾಗಿರಲಿಲ್ಲ ಎಂದು. ಈ ಉದ್ಯಮದಲ್ಲಿ ನನಗೆ ಯಾರು ಕೂಡ ಪರಿಚಿತರಿರಲಿಲ್ಲ. ಏನು ಕೂಡ ತಿಳಿದಿರಲಿಲ್ಲ. ಸ್ನೇಹಿತರು ಕೂಡ ಇರಲಿಲ್ಲ. ನಾನು ಏಕಾಂಗಿಯಾಗಿದ್ದೆ. ಭಯ ಆವರಿಸಿತ್ತು. ನ್ಯೂಯಾರ್ಕ್​ ನನಗೆ ಆಗ ಕತ್ತಲಿನ ಪ್ರಪಂಚವಾಗಿತ್ತು ಎಂದಿದ್ದಾರೆ.

ಭಾರತದಲ್ಲಿನ ಯಶಸ್ಸಿನ ಹೊರತಾಗಿ ಹಾಲಿವುಡ್​ನಲ್ಲಿ ತಾವು ಅನೇಕ ಸವಾಲುಗಳನ್ನು ಅನುಭವಿಸಬೇಕಾಯಿತು. ಮತ್ತೆ ವೃತ್ತಿಯನ್ನು ಹೊಸದಾಗಿ ಆರಂಭಿಬೇಕಿತ್ತು. ಈ ವೇಳೆ ತಿರಸ್ಕಾರ ಮತ್ತು ಹಿನ್ನಡೆ ಅನುಭವಿಸಿದೆ. ಆದರೆ, ಸ್ಥಿರತೆ, ಸಮರ್ಪಣೆ ಮನೋಭಾವ ಆಕೆಯನ್ನು ಇದರಿಂದ ದೂರ ಮಾಡಲಿಲ್ಲ. ಆಕೆಯ ಮಹತ್ವಕಾಂಕ್ಷೆ, ಪರಿಹಾರ ಸಾಮರ್ಥ್ಯದ ಮನಸ್ಥಿತಿ, ಒಪ್ಪಿಕೊಳ್ಳುವ ಮನಸ್ಥಿತಿಯಿಂದ ಇದು ಸಾಧ್ಯವಾಯಿತು.

ಇತ್ತೀಚಿಗೆ ಫ್ರಾನ್ಸ್​ನಲ್ಲಿನ ತಮ್ಮ ಜೀವನದ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದರು. ತಮ್ಮ ವೃತ್ತಿ ಜೊತೆಗೆ ಮಗಳೊಂದಿಗೆ ಕೂಡ ಉತ್ತಮ ಸಮಯವನ್ನು ಅವರು ಕಳೆಯುತ್ತಿದ್ದಾರೆ. ವೃತ್ತಿ ಮತ್ತು ತಾಯ್ತನದ ಬದ್ಧತೆಯ ಸಮತೋಲನ ಮಾಡುತ್ತಿದ್ದಾರೆ.

ಸದ್ಯ, ಹೆಡ್​ ಆಫ್​ ಸ್ಟೇಟ್​​​ನಲ್ಲಿ ಶೂಟಿಂಗ್​​ನಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದರು. ಇದೊಂದು ಆ್ಯಕ್ಷನ್​ ಕಾಮಿಡಿ ಸಿನಿಮಾವಾಗಿದ್ದು, ಐಡ್ರಿಸ್​ ಎಲ್ಬಾ ಮತ್ತು ಜಾನ್​ ಕೆನಾ ಜೊತೆಗೆ ನಟಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಇದರ ಹೊರತಾಗಿ ಬ್ಲಫ್​ನಲ್ಲಿ ಕೂಡ ಅವರು ನಟಿಸುತ್ತಿದ್ದಾರೆ.

ಟಿ ಪ್ರಿಯಾಂಕಾ ಚೋಪ್ರಾ ಅವರು 'ಅನ್‌ಫಿನಿಶ್ಡ್' ಎಂಬ ಆತ್ಮಕಥೆ ಬರೆಯುವ ಮೂಲಕ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಪುಸ್ತಕ 'ಅಭಿ ಬಾಕಿ ಹೈ ಸಫರ್' ಎಂಬ ಹೆಸರಿನಲ್ಲಿ ಹಿಂದಿ ಆವೃತ್ತಿಯಲ್ಲೂ ಬಂದಿದೆ. 'ಅನ್‌ಫಿನಿಶ್ಡ್' ಹಿಂದಿ ಆವೃತ್ತಿ 'ಅಭಿ ಬಾಕಿ ಹೈ ಸಫರ್' ಪುಸ್ತಕದಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಓರ್ವ ಹುಡುಗಿ ಈ ಮಟ್ಟದ ಖ್ಯಾತಿ ಗಳಿಸಲು ಯಾವ ಯಾವ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತಾಯಿ, ಪತಿ, ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.