ETV Bharat / entertainment

ಮನಾರಾ ಚೋಪ್ರಾ ಬರ್ತ್​​ಡೇ ಪಾರ್ಟಿಯಲ್ಲಿ ಪ್ರಿಯಾಂಕಾ, ನಿಕ್ ಜೋನಾಸ್: ವಿಡಿಯೋ - Mannara Chopra Birthday - MANNARA CHOPRA BIRTHDAY

ಸೋಷಿಯಲ್​ ಮೀಡಿಯಾದಲ್ಲಿ ಹಿಂದಿ ಬಿಗ್ ಬಾಸ್ ಖ್ಯಾತಿಯ ಮನಾರಾ ಚೋಪ್ರಾ ಬರ್ತ್​ಡೇ ಸೆಲೆಬ್ರೇಶನ್​ ಫೋಟೋ-ವಿಡಿಯೋಗಳು ಜಾಗ ಗಿಟ್ಟಿಸಿಕೊಂಡಿವೆ. ಪ್ರಿಯಾಂಕಾ ನಿಕ್ ದಂಪತಿ ಭಾಗಿಯಾಗಿದ್ದು, ಸಂಭ್ರಮಾಚರಣೆಯ ಹೈಲೆಟ್​.

Mannara Chopra's Birthday party
ಮನಾರಾ ಚೋಪ್ರಾ ಬರ್ತ್​​ಡೇ ಪಾರ್ಟಿ
author img

By ETV Bharat Karnataka Team

Published : Mar 30, 2024, 12:25 PM IST

ಕಳೆದ ಕೆಲ ದಿನಗಳಿಂದ ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿಯೊಂದಿಗೆ ತವರು ದೇಶ ಭಾರತದಲ್ಲಿದ್ದಾರೆ. ನಿನ್ನೆ ರಾತ್ರಿ ಮುಂಬೈನಲ್ಲಿ ತಮ್ಮ ಸೋದರಸಂಬಂಧಿ ಮನಾರಾ ಚೋಪ್ರಾ ಅವರ ಜನ್ಮದಿನದ ಅದ್ಧೂರಿ ಆಚರಣೆಯಲ್ಲಿ ಭಾಗಿಯಾಗಿದ್ದರು. ಸೋಷಿಯಲ್​ ಮೀಡಿಯಾದಲ್ಲೀಗ ಚೋಪ್ರಾ ಫ್ಯಾಮಿಲಿ ಪಾರ್ಟಿ ಜಾಗ ಪಡೆದಿದೆ.

ಬಾಲಿವುಡ್​ ಸೂಪರ್ ಸ್ಟಾರ್ ಸಲ್ಮಾನ್​ ಖಾನ್​​ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್​ ಸೀಸನ್​ 17ರಲ್ಲಿ ಎರಡನೇ ರನ್ನರ್ ಅಪ್​ ಆಗಿ ಮನಾರಾ ಚೋಪ್ರಾ ಹೊರಹೊಮ್ಮಿದ್ದರು. ಈ ಕಾರ್ಯಕ್ರಮದ ಮೂಲಕ ಅವರು ಸಾಕಷ್ಟು ಜನಪ್ರಿಯರಾಗಿದ್ದಾರೆ. ಶುಕ್ರವಾರ ಮುಂಬೈನಲ್ಲಿ ತಮ್ಮ 33ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿ ಕುಟುಂಬಸ್ಥರು, ಆಪ್ತರಿಗಷ್ಟೇ ಸೀಮಿತವಾಗಿತ್ತು.

ಪರಿಣಿತಿ, ಮೀರಾ ಮತ್ತು ಮನಾರಾ ಸೇರಿದಂತೆ ತಮ್ಮ ಸೋದರಸಂಬಂಧಿಗಳ ಮೇಲಿನ ಪ್ರೀತಿಯಿಂದ ಗಮನ ಸೆಳೆದಿರುವ ದೇಸಿ ಗರ್ಲ್​​ ಪ್ರಿಯಾಂಕಾ ಚೋಪ್ರಾ ಯಾವಾಗಲೂ ಅವರ ಪರವಾಗಿ ನಿಲ್ಲುತ್ತಾರೆ. ಅವರ ಏಳಿಗೆಯನ್ನು ಬಯಸುತ್ತಾರೆ. ಅದರಂತೆ ಇದೀಗ ಭಾರತದಲ್ಲಿರುವ ಪ್ರಿಯಾಂಕಾ, ನಿಕ್ ಮತ್ತು ಮಗಳು ಮಾಲ್ತಿ ಮೇರಿ, ಮನಾರಾ ಚೋಪ್ರಾ ಬರ್ತ್​​ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾಪರಾಜಿಗಳು ಶೇರ್ ಮಾಡಿರೋ ಫೋಟೋ-ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಪಾರ್ಟಿ ಆಯೋಜನೆಗೊಂಡಿದ್ದ ಸ್ಥಳಕ್ಕೆ ಆಗಮಿಸಿದ ಪ್ರಿಯಾಂಕಾ ಮತ್ತು ನಿಕ್ ತಮ್ಮ ಸ್ಟೈಲಿಶ್ ಉಡುಗೆ ಮತ್ತು ಹಾವಭಾವದಿಂದ ಎಲ್ಲರ ಗಮನ ಸೆಳೆದರು. ಅಲ್ಲದೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಈ ತಾರಾ ದಂಪತಿ ಬಹಳ ಸಂತೋಷದಿಂದ ಪಾಪರಾಜಿಗಳಿಗೆ ಕ್ಯಾಮರಾಗಳಿಗೆ ಪೋಸ್ ನೀಡಿದರು. ಈ ವೇಳೆ ಪರಸ್ಪರ ಶುಭಾಶಯ ಕೋರಿದರು.

ಇದನ್ನೂ ಓದಿ: ತಾಯಿ, ಪತಿ, ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ: ವಿಡಿಯೋ

ಈ ಪಾರ್ಟಿಗೂ ಮೊದಲು ಪ್ರಿಯಾಂಕಾ ಮತ್ತು ನಿಕ್, ನೋಯ್ಡಾದಲ್ಲಿ ಮನಾರಾ ಚೋಪ್ರಾ ಸೇರಿದಂತೆ ಕಟುಂಬಸ್ಥರ ಜೊತೆ ಹೋಳಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದರು. ಎರಡು ವಾರಗಳ ಹಿಂದೆ ಪ್ರಿಯಾಂಕಾ ಮತ್ತು ಮಗಳು ಭಾರತಕ್ಕೆ ಆಗಮಿಸಿದರು. ನಂತರ ನಿಕ್​​ ಬಂದು ಸೇರಿದರು. ಬ್ಯಾಕ್​​ ಟು ಬ್ಯಾಕ್​ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಪತಿ, ಪುತ್ರಿಯೊಂದಿಗೆ ಭಾರತದಲ್ಲಿ ಪ್ರಿಯಾಂಕಾ ಚೋಪ್ರಾ ಹೋಳಿ ಸಂಭ್ರಮಾಚರಣೆ - Priyanka Chopra

ನಿಕ್​ ಅವರಿಗಿದು ಈ ವರ್ಷದ ಎರಡನೇ ಭೇಟಿ. ಜನವರಿಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡುವ ಸಲುವಾಗಿ ಭಾರತಕ್ಕೆ ಬಂದಿದ್ದರು. ಪ್ರಿಯಾಂಕಾ ಮತ್ತು ನಿಕ್​ ಹಲವು ಈವೆಂಟ್​ಗಳ ಜೊತೆಗೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಮಗಳು ಮಾಲ್ತಿಯೊಂದಿಗೆ ರಾಮಮಂದಿರಕ್ಕೆ ಭೇಟಿ ಕೊಟ್ಟ ಸೆಲೆಬ್ರಿಟಿ ಕಪಲ್​, ವಿಶೇಷ ಪೂಜೆ ಸಲ್ಲಿಸಿದ್ದರು. ಅಯೋಧ್ಯೆಯಿಂದಲೂ ಸಾಕಷ್ಟು ಫೋಟೋ-ವಿಡಿಯೋಗಳು ವೈರಲ್ ಆಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.