ETV Bharat / entertainment

ಜಲದಾಳದಲ್ಲಿ ಅಡಗಿದೆ ಜಲಂಧರ ಕಥೆ, ಇದು ಪ್ರಮೋದ್ ಶೆಟ್ಟಿ ನಾಯಕನಾಗಿ ಎರಡನೇ ಚಿತ್ರ

ಬಹುತೇಕ ಚಿತ್ರೀಕರಣ ಮುಗಿಸಿರುವ ಜಲಂಧರ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.

author img

By ETV Bharat Karnataka Team

Published : 2 hours ago

pramodu Shetty Staring Jalandhara movie first Song Released
ಜಲಂಧರ ಸಿನಿ ತಂಡ (ಈಟಿವಿ ಭಾರತ್​)

'ಜಲಂಧರ' ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ. 'ಲಾಫಿಂಗ್ ಬುದ್ದ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಸಿನಿಮಾ ಪ್ರೇಮಿಗಳ ಮೆಚ್ಚುಗೆಗಳಿಸದ ಪ್ರಮೋದ್ ಶೆಟ್ಟಿ ಈಗ ಜಲಂಧರ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಜಲಂಧರ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.

'ಹುಟ್ಟುತ್ತಾ ನಾವು' ಎಂಬ ಹಾಡಿನ ಲಿರಿಕಲ್ ವಿಡಿಯೋ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ. ಮನ್ವರ್ಷಿ ನವಲಗುಂದ ಬರದಿರುವ ಈ ಹಾಡನ್ನು ಅವಿನಾಶ್ ಬಸತ್ಕೂರ್ ಹಾಡಿದ್ದಾರೆ. ಜತಿನ್ ದರ್ಶನ್ ಸಂಗೀತ ನೀಡಿದ್ದಾರೆ. ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈ ಹಾಡನ್ನು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಜಂಕಾರ್ ಮ್ಯೂಸಿಕ್ ನ ಭರತ್ ಜೈನ್ ಸೇರಿದಂತೆ ಜಲಂಧರ ಚಿತ್ರತಂಡ ಉಪಸ್ಥಿತಿ ಇತ್ತು.

pramodu Shetty Staring Jalandhara movie first Song Released
jಲಂಧರ ತಂಡ (ಈಟಿವಿ ಭಾರತ್​​)

ಕಥೆಯೇ ಹಿರೋ ಎಂದ ಪ್ರಮೋದ್​ ಶೆಟ್ಟಿ: ಈ ಕಥೆಯನ್ನು ಕೊರೋನ ಪೂರ್ವದಲ್ಲಿ ಗೆಳೆಯ ಸ್ಟೆಪ್ ಆಫ್ ಲೋಕಿ ಹೇಳಿದ್ದರು. ಕಥೆ ಕೇಳಿ ತುಂಬಾ ಚೆನ್ನಾಗಿದೆ. ನಿರ್ಮಾಪಕರು ಸಿಗದಿದ್ದರೆ ನಾವೇ ನಿರ್ಮಾಣ ಮಾಡೋಣ. ನಿರ್ದೇಶನ ನಾನೇ ಮಾಡುತ್ತೇನೆ. ಆದರೆ, ಸ್ವಲ್ಪ ಸಮಯ ಆಗಲಿ ಎಂದಿದ್ದೆ. ಆನಂತರ ನಿರ್ಮಾಪಕ ಮದನ್ ಅವರು ನಿರ್ಮಾಣದ ಸಾರಥ್ಯ ವಹಿಸಿಕೊಂಡರು. ನಾನು ಇದರಲ್ಲೂ ಪೊಲೀಸ್ ಅಧಿಕಾರಿ. ಆದರೆ ಗಂಭೀರವಾದ ಪಾತ್ರ. ಇದರಲ್ಲಿ ನಾನೊಬ್ಬನೇ ಹೀರೋ ಅಲ್ಲ. ಕಥೆ ಹಾಗೂ ಅಭಿನಯಿಸಿರುವ ಕಲಾವಿದರು ಎಲ್ಲಾ ನಾಯಕರೆ.‌ ಕನಕಪುರ ಭಾಗದ ಜಾನಪದ ಕಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ‌. ಇಂದು ಬಿಡುಗಡೆಯಾಗಿರುವ ಹಾಡಿನಲ್ಲಿ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಮನ್ವರ್ಷಿ ನವಲಗುಂದ ಅವರು ಬರೆದಿರುವ ಸಾಹಿತ್ಯ ಮನ ಮುಟ್ಟುವಂತಿದೆ ಎಂದರು

ಅಪರೂಪದ ಕಥೆ ನಿರ್ದೇಶಿಸಿದ ಖುಷಿ ಇದೆ: ಲೋಕಿ ಅವರು ಕಥೆ ಬರೆದಿದ್ದು, ನಾನು ನಿರ್ದೇಶಿಸಿದ್ದೇನೆ. ಜೀವನ ಎಲ್ಲರಿಗೂ ಅಮೂಲ್ಯ. ಸಾವು ಹೇಗಾದರೂ ಬರಬಹುದು. ಅದರಲ್ಲೂ ಜಲದ ಹತ್ತಿರ ಹೋದಾಗ ಹುಷಾರಾಗಿರಬೇಕು. ಜೀವನದ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಕೂಡ ಮಾಡಿದ್ದೇವೆ. ನಮ್ಮ ಚಿತ್ರದ ಕಥೆ, ಜಲದೊಳಗಿನ ಕಥೆ. ಅಪರೂಪದ ಕಥೆ ಒಂದೊಳ್ಳೆ ಸಿನಿಮಾ ನಿರ್ದೇಶಿಸಿರುವ ಸಂತೋಷವಿದೆ ಎಂದು ನಿರ್ದೇಶಕ ವಿಷ್ಣು ವಿ ಪ್ರಸನ್ನ ತಿಳಿಸಿದರು.

ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಜೊತೆಯಾಗಿ ಟಗರು ಖ್ಯಾತಿಯ ರಿಶಿಕಾ ರಾಜ್ ಹಾಗೂ ಅಧ್ಯಕ್ಷ ಖ್ಯಾತಿಯ ಆರೋಹಿತ ಗೌಡ ಅಭಿನಯಿಸಿದ್ದಾರೆ. ಇವರ ಜೊತೆ ಬಲ ರಾಜವಾಡಿ, ನವೀನ್ ಸಾಗರ್ , ಪ್ರತಾಪ್ ನನಸು , ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ ,ವಿಜಯರಾಜ್ , ಪ್ರಸಾದ್ ಮತ್ತು ಅಂಬು, ನಟರಾಜ್ ಬೆಳ್ಳಿದೀಪ, ವಿಶಾಲ್ ಪಾಟೀಲ್ ಸೇರಿದಂತೆ ತಾರಾಬಳಗದಲ್ಲಿದ್ದಾರೆ.

ಕಥೆ ಬರೆಯಲು ಸ್ಪೂರ್ತಿ ನನ್ನ ಅಜ್ಜಿ: ನಾನು ಕನಕಪುರದವನು. ನೀರಿನ ಬಗ್ಗೆ ನಮ್ಮ ಅಜ್ಜಿ ಹೇಳಿತ್ತಿದ್ದ ಕಥೆ, ನಾನು ಈ ಚಿತ್ರದ ಕಥೆ ಬರೆಯಲು ಸ್ಪೂರ್ತಿ. ಈ ಕಥೆಯನ್ನು ನಾನು ರಕ್ಷಿತ್ ಶೆಟ್ಟಿ ಅವರ ಸೈಟ್ ಬಳಿ ಪ್ರಮೋದ್ ಶೆಟ್ಟಿ ಅವರಿಗೆ ಹೇಳಿದ್ದೆ. ಪ್ರಮೋದ್ ಅವರು ತಕ್ಷಣ ಒಪ್ಪಿಕೊಂಡರು. ನಿರ್ಮಾಪಕರಿಗಾಗಿ ನಾನು ಇಡೀ ಬೆಂಗಳೂರು ಅಲೆದಿದ್ದೇನೆ. ಆಗ ನನಗೆ ಸಿಕ್ಕಿದ್ದು ಮದನ್ ಅವರು. ಅವರ ಜೊತೆಗೆ ಸಹ ನಿರ್ಮಾಪಕರಾದ ಚಂದ್ರಮೋಹನ್ ಸಿ ಎಲ್, ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಸಹ ನಿರ್ಮಾಣಕ್ಕೆ ಜೊತೆಯಾದರು‌. ನಾನು ಈ ಚಿತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಕಥೆಗಾರ ಲೋಕಿ ತಿಳಿಸಿದರು.

ಸಿನಿಮಾಗೆ ಸರಿನ್ ರವೀಂದ್ರನ್ ಛಾಯಗ್ರಹಣ ಇದೆ. ರಶ್ಮಿತ್ ಕುಮಾರ್ ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಹಿರಿಯ ಸಿನಿಮಾ ನಿರ್ಮಾಪಕ ಕೆ.ಮಂಜು ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.