ETV Bharat / entertainment

'ಪ್ರಭುತ್ವ' ಸಿನಿಮಾ: ಮತದಾನ ಮಹತ್ವದ ಜಾಗೃತಿ ಮೂಡಿಸಲು ಸಜ್ಜಾದ ಕುಂಬರಾಶಿ ಖ್ಯಾತಿಯ ಚೇತನ್ ಚಂದ್ರ - PRABHUTVA MOVIE

ಕುಂಬರಾಶಿ‌ ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಚಿತ್ರ ನವೆಂಬರ್ 22ಕ್ಕೆ ಬಿಡುಗಡೆಯಾಗಲಿದೆ.

Prabhutva film team
ಪ್ರಭುತ್ವ ಚಿತ್ರತಂಡ (Photo: ETV Bharat)
author img

By ETV Bharat Entertainment Team

Published : Nov 19, 2024, 5:10 PM IST

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ಗೆಲ್ಲುತ್ತಿವೆ. ಇದೀಗ ಕುಂಬರಾಶಿ‌ ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಕೆಲ ವಿಚಾರಗಳಿಂದ ಸಖತ್ ಸೌಂಡ್ ಮಾಡುತ್ತಿದೆ. ಸದ್ಯ ಉಪಚುನಾವಣೆ ಮುಗಿದ ಹೊತ್ತಲ್ಲೇ ಮತದಾನದ ಬಗ್ಗೆ ಜಾಗೃತಿ ಮೂಡಿಸುವ 'ಪ್ರಭುತ್ವ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಿಲೀಸ್ ಡೇಟ್​ ಅನ್ನು ಚಿತ್ರತಂಡ ಇತ್ತೀಚೆಗೆ ಅನೌನ್ಸ್​​ ಮಾಡಿದೆ. ಟ್ರೇಲರ್​​ನಿಂದಲೇ ಸಿನಿಪ್ರಿಯರ ಮನಗೆದ್ದಿರುವ ತಮ್ಮ ಸಿನಿಮಾದ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿತು.

ಮೊದಲು ಮಾತನಾಡಿದ ನಟ ಚೇತನ್ ಚಂದ್ರ, ಇದು ನನ್ನ 12ನೇ ಸಿನಿಮಾ. ಬಹಳ ದಿನಗಳ ನಂತರ ನಿಮ್ಮ ಮುಂದೆ ಬರುತ್ತಿದ್ದೇನೆ. ಮೇಘಡಹಳ್ಳಿ ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲ ಕಲಾವಿದರ ಅಭಿನಯ ಅದ್ಭುತವಾಗಿದೆ. ಈ ಸಿನಿಮಾ ಚುನಾವಣೆ ಬಂದಾಗ ಮತದಾನ ಮಾಡೋದು ಎಷ್ಟು‌ಮುಖ್ಯ ಅನ್ನೋ ಕಥೆ ಒಳಗೊಂಡಿದೆ ಎಂದರು.

ಚೇತನ್ ಚಂದ್ರ ಜೋಡಿಯಾಗಿ ಪಾವನ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಖ್ಯಾತ ನಟ ನಾಸರ್, ಶರತ್ ಲೋಹಿತಾಶ್ವ, ಅಂಬಿಕಾ, ರೂಪಾದೇವಿ, ರಾಜೇಶ್ ನಟರಂಗ, ಅವಿನಾಶ್ ಆದಿ ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Prabhutva film team
ಪ್ರಭುತ್ವ ಚಿತ್ರತಂಡ (Photo: ETV Bharat)

ಇದನ್ನೂ ಓದಿ: 14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಗೋವಾದಲ್ಲಿ ಪ್ರಿಯತಮನನ್ನು ವರಿಸಲಿರುವ ನಟಿ ಕೀರ್ತಿ ಸುರೇಶ್?

ಪ್ರಭುತ್ವ ಚಿತ್ರಕ್ಕೆ ಕಥೆ ಬರೆದಿರುವ ಮೇಘಡಹಳ್ಳಿ ಡಾ.ಶಿವಕುಮಾರ್ ಮಾತನಾಡಿ, ಪ್ರತೀ ಮತದಾರರು ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದದ್ದು. ಹಾಗಾಗಿ, ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವದ ಬಗ್ಗೆ ತಿಳಿಸುವ ಚಿತ್ರವಿದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನವೆಂಬರ್ 22ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ದೀಪಕ್ ಗಂಗಾಧರ್ ಅವರು ವಿತರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಶಿವರಾಜ್​ಕುಮಾರ್​ 'ಭೈರತಿ ರಣಗಲ್' ಚಿತ್ರದ ನಾಲ್ಕು ದಿನಗಳ ಕಲೆಕ್ಷನ್​ ಮಾಹಿತಿ ಇಲ್ಲಿದೆ

ವಿತರಕ ದೀಪಕ್ ಗಂಗಾಧರ್ ಮಾತನಾಡಿ, ಈ ಸಿನಿಮಾ ನೋಡಿ ವಿತರಣೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಸಿನಿಮಾದ ಕಥೆ ಚೆನ್ನಾಗಿದೆ‌. 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದರು. ಈ ಸಿನಿಮಾವನ್ನು ನಿರ್ಮಾಪಕ ರವಿರಾಜ್ ನಿರ್ಮಾಣ ಮಾಡಿದ್ದು ವಿನಯ್ ಮೂರ್ತಿ ಚಿತ್ರಕಥೆ, ಸಂಭಾಷಣೆ ಜೊತೆಗೆ ಸಹ - ನಿರ್ದೇಶನ ಮಾಡಿದ್ದಾರೆ. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಾಹಣವಿದ್ದು, ಎಮಿಲ್ ಸಂಗೀತ ನೀಡಿದ್ದಾರೆ. ಟ್ರೇಲರ್​ನಿಂದ ಸದ್ದು ಮಾಡುತ್ತಿರುವ ಪ್ರಭುತ್ವ ಚಿತ್ರ ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.