ETV Bharat / entertainment

ಕನ್ನಡಿಗರ ಮನಗೆಲ್ಲಲು ಪಣ ತೊಟ್ಟ ಪ್ರಭು ಮುಂಡ್ಕುರ್: ಮುಂದಿನ ತಿಂಗಳು ನಿಮ್ಮೆದುರು 'ಮರ್ಫಿ' - Murphy - MURPHY

ಕನ್ನಡ ಚಿತ್ರರಂಗದಲ್ಲಿ ಸಿನಿಸುಗ್ಗಿ ಶುರುವಾಗುತ್ತಿದೆ. ಸ್ಟಾರ್​ ನಟರ ಸಿನಿಮಾಗಳ ಜೊತೆ ಜೊತೆಗೇ ಹೊಸಬರ ತಂಡಗಳು ನಿರ್ಮಿಸಿರುವ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈ ಸಾಲಿನಲ್ಲೀಗ ಯುವ ನಟ ಪ್ರಭು ಮುಂಡ್ಕುರ್ ಅವರ 'ಮರ್ಫಿ' ಇದೆ.

Murphy movie stars
'ಮರ್ಫಿ'ಯ ಒಂದು ನೋಟ (ETV Bharat)
author img

By ETV Bharat Entertainment Team

Published : Aug 8, 2024, 4:12 PM IST

'ರಾಂಚಿ' ಎಂಬ ಚಿತ್ರದಿಂದ ಗಮನ ಸೆಳೆದಿದ್ದ ಯುವ ನಟ ಪ್ರಭು ಮುಂಡ್ಕುರ್ ಅವರು ತಮ್ಮ ಹೊಸ 'ಮರ್ಫಿ' ಸಿನಿಮಾ ಮೂಲಕ ಕನ್ನಡಿಗರ ಮನ ಗೆಲ್ಲಲು ಅಣಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿರುವ 'ಮರ್ಫಿ' ಅಂಗಳದಿಂದ 'ಸಮಯ' ಎಂಬ ಮೋಹಕ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಗೀತೆಗೆ ಧನಂಜಯ್ ರಂಜನ್ ಪದ ಪೊಣಿಸಿದ್ದಾರೆ. ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಪ್ರಭು ಮುಂಡ್ಕೂರ್, ನಾಯಕಿಯರಾದ ರೋಶಿನಿ ಪ್ರಕಾಶ್ ಹಾಗೂ ಇಳಾ ವೀರಮಲ್ಲ ಮಿಂಚಿದ್ದಾರೆ.

'ಮರ್ಫಿ'ಗೆ ಬಿಎಸ್​​ಪಿ ವರ್ಮಾ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕುರ್ ಅವರು ವರ್ಮಾ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ಪ್ರಭು ಮುಂಡ್ಕುರ್, ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಜೊತೆ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ ನಿರ್ವಹಿಸಿದ್ದಾರೆ. ಆದರ್ಶ ಆರ್. ಕ್ಯಾಮರಾ ಕೈಚಳಕವಿದೆ.

ಸೋಮಣ್ಣ ಟಾಕಿಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿ ಸೋಮಣ್ಣ ಹಾಗೂ ಬಿಎಸ್​ಪಿ ವರ್ಮಾ ಸೇರಿ ಸಿನಿಮಾ ನಿರ್ಮಿಸಿದ್ದಾರೆ. ಯು ಸರ್ಟಿಫಿಕೇಟ್​ನೊಂದಿಗೆ ಸೆನ್ಸಾರ್ ಪಾಸಾಗಿರುವ ಚಿತ್ರದಲ್ಲಿ ಮನರಂಜನೆಯೊಂದಿಗೆ ಎಮೋಷನಲ್ ಅಂಶಗಳನ್ನೂ ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮನೆಮಂದಿ ಕುಳಿತು ನೋಡುವಂತ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ. 'ಮರ್ಫಿ'ಯಲ್ಲಿ 7 ಹಾಡುಗಳಿವೆ. ಸೆಪ್ಟಂಬರ್ 27ರಂದು ರಾಜ್ಯಾದ್ಯಂತ ಮರ್ಫಿ ಬೆಳ್ಳಿಪರದೆಗೆ ಎಂಟ್ರಿ ಕೊಡಲಿದೆ.

Murphy movie stars
'ಮರ್ಫಿ' ತಾರೆಯರು (ETV Bharat)

ಇದನ್ನೂ ಓದಿ: ಇದು ಎ, ಬಿ ಅಲ್ಲ, 'ಸಿ'ನಿಮಾ!: ಹೊಸಬರ ತಂಡಕ್ಕೆ ಲೂಸ್ ಮಾದ ಯೋಗಿ ಬೆಂಬಲ - Actor Yogesh

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಸದ್ದು ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ ಆಗಸ್ಟ್​​​ನಲ್ಲಿ ಸಿನಿಮಾಗಳ ಸುಗ್ಗಿ ಶುರುವಾಗಲಿದೆ. ಒಂದಾದ ಮೇಲೊಂದರಂತೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಇದನ್ನೂ ಓದಿ: ಲೈಟ್ ಬಾಯ್​​​ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್​​: ಇಂದೇ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ಯಶ್​​​ - Yash Toxic

ETV Bharat Logo

Copyright © 2025 Ushodaya Enterprises Pvt. Ltd., All Rights Reserved.