ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರಿಂದು 'ಕಲ್ಕಿ 2898 ಎಡಿ' ಅಲೆಯಲ್ಲಿ ತೇಲುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿರುವ ವಿಡಿಯೋಗಳನ್ನು ಗಮನಿಸಿದ್ರೆ, ಸಿನಿಮಾ ಸುತ್ತಲಿರುವ ಕ್ರೇಜ್ ಸ್ಪಷ್ಟವಾಗಿ ಗೋಚರಿಸುತ್ತದೆ. ಮೊದಲ ದಿನದ ಮೊದಲ ಪ್ರದರ್ಶನಕ್ಕಾಗಿ ಬಾಹುಬಲಿ ಸ್ಟಾರ್ ಫ್ಯಾನ್ಸ್ ಅದೆಷ್ಟೋ ಚಿತ್ರಮಂದಿರಗಳಲ್ಲಿ ಮುಂಜಾನೆಯೇ ಬಂದು ಸೇರಿದ್ದರು. ನಾಗ್ ಅಶ್ವಿನ್ ನಿರ್ದೇಶನದ ಈ ಭವ್ಯ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್ ವೀಕ್ಷಿಸಿದವರು ಕುಣಿದು ಕುಪ್ಪಳಿಸಿದ್ದಾರೆ.
#Kalki2898AD in UK 🇬🇧
— Manyu Cinemas (@ManyuCinemas) June 26, 2024
📍 O2 GREENWICH, CINEWORLD.
🔥🔥🔥BLOCKBUSTER🔥🔥🔥
💥💥💥REBEL STORM💥💥💥
Release By @TeamDreamZE #Kalki2898AD #ForTomorrow #RepatiKosam #Prabhas #NagAshwin #DeepikaPadukone #AmitabhBachchan #KamalHassan #Kalki2898ADinUK @VyjayanthiFilms… pic.twitter.com/r6f8hygeDw
ತೆಲುಗು ಭಾಷಿಕ ಎರಡು ರಾಜ್ಯಗಳಿಂದ ಹಿಡಿದು ಭಾರತದಾದ್ಯಂತ ಮತ್ತು ಸಾಗರೋತ್ತರ ಪ್ರದೇಶಗಳವರೆಗೆ 'ಕಲ್ಕಿ 2898 ಎಡಿ' ಮೇಲೆ ಅಭಿಮಾನಿಗಳು ಪ್ರೀತಿಯ ಮಳೆಗರೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳು ಅಭಿಮಾನಿಗಳ ಸಂಭ್ರಮಾಚರಣೆಯ ಫೋಟೋ-ವಿಡಿಯೋಗಳಿಂದ ತುಂಬಿ ತುಳುಕುತ್ತಿವೆ.
#blockbuster,#kalki2898,#Prabahs ,@nagashwin7 @SwapnaduttChh ,@AshwiniDuttCh,@PrabhasRaju pic.twitter.com/q45CjfDFd0
— Sunnydeoal (@Sunnydeoal5) June 27, 2024
ಯುಕೆಯಲ್ಲಿ, ಪ್ರಭಾಸ್ ಅಭಿಮಾನಿಗಳು ಥಿಯೇಟರ್‌ಗಳಿಂದ ಹೊರಬರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಮತ್ತೊಂದೆಡೆ, ತಾಯ್ನಾಡು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗಳಲ್ಲಿ ಚಿತ್ರದ ಪ್ರಥಮ ಪ್ರದರ್ಶನಕ್ಕೂ ಮುನ್ನವೇ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಪ್ರಭಾಸ್ ಅವರ ಬೃಹತ್ ಪೋಸ್ಟರ್‌ಗಳು, ಹಾರಗಳಿಂದ ಅಲಂಕರಿಸಲ್ಪಟ್ಟಿವೆ. ನಗರದ ವಿವಿಧೆಡೆ ಕಲ್ಕಿ ಪೋಸ್ಟರ್‌ಗಳು ಕಂಡುಬಂದಿವೆ.
4AM RTC x road jathara shuru#Kalki2898AD #KALKI2898ADO #kalki2898 pic.twitter.com/0c36JngVuc
— Abhilashyadav RTF (@ravitejAbhimani) June 26, 2024
ಬರೋಬ್ಬರಿ 600 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ. ಹಾಗಾಗಿ ಕಲ್ಕಿ ಭಾರತೀಯ ಚಿತ್ರರಂಗದಲ್ಲೇ ನಿರ್ಮಾಣವಾದ ಬಿಗ್ ಬಜೆಟ್ ಚಿತ್ರ. 181 ನಿಮಿಷಗಳ ಕಲ್ಕಿ 2898 ಎಡಿ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ. ಟೀಸರ್‌ಗಳು, ಟ್ರೇಲರ್‌ಗಳು ಮತ್ತು ತೆರೆಮರೆಯ ಗ್ಲಿಂಪ್ಸ್, ಪೋಸ್ಟರ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಇಂದಿನ ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನು ಗಮನಿಸಿದರೆ, ಸಿನಿಮಾ ಬ್ಲಾಕ್ಬಸ್ಟರ್ ಎಂಬುದು ಬಹುತೇಕ ಪಕ್ಕಾ ಆಗಿದೆ.
Undi MLA RRR garu participated in the Kalki celebrations in Bhimavaram 💥🔥#Kalki2898AD pic.twitter.com/bn5pqnVlft
— Freaking REBELS (@FreakingRebels) June 26, 2024