ETV Bharat / entertainment

'ಕಲ್ಕಿ 2898 ಎಡಿ' ರಿಯಾಕ್ಷನ್ಸ್ ಇಲ್ಲಿದೆ: ಸಿನಿಮಾ ಬ್ಲಾಕ್​ಬಸ್ಟರ್ ಆಗೋದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್ - Kalki 2898 AD X Review

author img

By ETV Bharat Karnataka Team

Published : Jun 27, 2024, 10:09 AM IST

ಬಹುನಿರೀಕ್ಷಿತ ''ಕಲ್ಕಿ 2898 ಎಡಿ'' ಚಿತ್ರ ಅಂತಿಮವಾಗಿ ಇಂದು ಚಿತ್ರಮಂದಿರ ಪ್ರವೇಶಿಸಿದ್ದು, ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.

Kalki 2898 AD Review
ಕಲ್ಕಿ 2898 ಎಡಿ ವಿಮರ್ಷೆ (Film poster)

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ''ಕಲ್ಕಿ 2898 ಎಡಿ'' ಚಿತ್ರ ಅಂತಿಮವಾಗಿ ಇಂದು ತೆರೆಗಪ್ಪಳಿಸಿದೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರ ಆರಂಭಿಕವಾಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಚಿತ್ರಕ್ಕೆ ಬಹುತೇಕ ಮೆಚ್ಚುಗೆಯೇ ವ್ಯಕ್ತವಾಗಿದೆ. ವಿಮರ್ಶೆಗಳು ಸಿನಿಮಾದ ಯಶಸ್ಸಿಗೆ ದಾರಿ ಮಾಡಿಕೊಟ್ಟಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್​ನ ಬಿಗ್​​ ಬಜೆಟ್​ ಪ್ರಾಜೆಕ್ಟ್​ನಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್, ಬಾಲಿವುಡ್​ನ ಬಹುಬೇಡಿಕೆ ತಾರೆಯರಾದ ಅಮಿತಾಭ್​ ಬಚ್ಚನ್​​, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಸೌತ್​ ಸೂಪರ್ ಸ್ಟಾರ್ ಕಮಲ್​ ಹಾಸನ್​ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾದ ಮೊದಲ ದಿನದ ಮೊದಲ ಶೋ ವೀಕ್ಷಿಸಿದವರ ಪೈಕಿ ಹೆಚ್ಚಿನವರು ಎಕ್ಸ್​(ಟ್ವಿಟರ್) ಸೇರಿದಂತೆ ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್​​​ಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಿಯಾಕ್ಷನ್ಸ್ ಗಮನಿಸಿದರೆ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗೋದು ಬಹುತೇಕ ಖಚಿತವಾಗಿದೆ.

ಸುಮಾರು 4:00 ಗಂಟೆಗೆ ಮಾರ್ನಿಂಗ್​ ಶೋಗಳು ಆರಂಭವಾದವು. ಮುಂಜಾನೆಯ ಪ್ರದರ್ಶನಗಳು ಪ್ರಭಾಸ್ ಸ್ಟಾರ್​​ಡಮ್​ ಅನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಶೋಗಳು ಹೌಸ್‌ಫುಲ್ ಆಗಿದ್ದವು. ಸದ್ಯ ಸಾಮಾಜಿಕ ಜಾಲತಾಣ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್​​​ ಆ್ಯಕ್ಷನ್ ಥ್ರಿಲ್ಲರ್‌ನ ವಿಮರ್ಶೆಗಳಿಂದ ತುಂಬಿ ತುಳುಕುತ್ತಿವೆ.

ಎಕ್ಸ್ ಬಳಕೆದಾರರು ಬಾಹುಬಲಿ ಸ್ಟಾರ್​ನ ಅಮೋಘ ಅಭಿನಯ, ನಾಗ್​​ ಅಶ್ವಿನ್​​ರ ನಿರ್ದೇಶನಾ ಶೈಲಿಯನ್ನು ಶ್ಲಾಘಿಸಿದ್ದಾರೆ. ''ಕಲ್ಕಿ 2898 ಎಡಿ ಐಮ್ಯಾಕ್ಸ್​​ ಸ್ಕ್ರೀನಿಂಗ್. ವಿಶುವಲ್ಸ್​​ ಅದ್ಭುತ. ಪ್ರಭಾಸ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಮಿತಾಭ್​​ ಅವರ ಅಭಿನಯ ಹೊಂದಿಕೆಯಾಗಿದೆ. ಇದು ನಿರ್ದೇಶಕರಿಗಿಂತ ಪ್ರಭಾಸ್ ಬಗ್ಗೆ ಬಹಳಷ್ಟು ಹೇಳುತ್ತಿದೆ. ಸಿನಿಮಾ ಬಹಳ ಚೆನ್ನಾಗಿದೆ. ಒಟ್ಟಾರೆ, ನಿಮ್ಮನ್ನು ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುವಂತೆ ಮಾಡುತ್ತದೆ. ಆದ್ರೆ ನಾಗಿ (ನಿರ್ದೇಶಕರು) ಕೆಲ ವಿಷಯಗಳಲ್ಲಿ ಫೇಲ್​ ಆದಂತೆ ತೋರುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಎಕ್ಸ್​ ಪೋಸ್ಟ್​​ನಲ್ಲಿ, "ಸಿನಿಮಾದ ಆರಂಭ ಚೆನ್ನಾಗಿದ್ದು, ಇಂಟರ್​ವಲ್​​ ಎಕ್ಸಲೆಂಟ್​​ ಆಗಿದೆ. ಪ್ರಭಾಸ್ ಅವರ ಪಾತ್ರವನ್ನು ನಾವು ವೈಯಕ್ತಿಕವಾಗಿ ಹೆಚ್ಚು ಇಷ್ಟಪಡುತ್ತೇವೆ. ಅದು ತಮಾಷೆಯ ಪಾತ್ರ, 2nd ಹಾಫ್​ಗೆ ಉತ್ಸುಕನಾಗಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವರು ಟ್ವೀಟ್​ ಮಾಡಿ, ''ಕಲ್ಕಿ 2898 ಎಡಿ ಔಟ್​ ಸ್ಟ್ಯಾಂಡಿಂಗ್​​. ಒಂದೊಳ್ಳೆ ಸೈನ್ಸ್ ಫಿಕ್ಷನ್​ ಅನುಭವ. ಎಲ್ಲೋ ಸ್ವಲ್ಪ "ಬ್ಲೇಡ್ ರನ್ನರ್" ಮತ್ತು "ಮ್ಯಾಡ್ ಮ್ಯಾಕ್ಸ್" ಸಿನಿಮಾಗಳ ಅಂಶಗಳಿತ್ತು. ಪ್ರಭಾಸ್ ವರ್ಸಸ್ ಅಮಿತಾಭ್​ ಬಚ್ಚನ್ ಫೈಟ್​ ಸೀನ್​​ ಅದ್ಭುತ. ದೀಪಿಕಾ ಮತ್ತು ದಿಶಾ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅವರು ನನ್ನ ತಲೆ ತಿರುಗಿಸಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತುಂಗಾ ನದಿ ಕುರಿತು ಸಿಎಂಗೆ ಅನಿರುದ್ಧ್ ಮನವಿ ಸಲ್ಲಿಸಿದ್ಯಾಕೆ; ಪತ್ರದಲ್ಲೇನಿದೆ, ನಟ ಹೇಳಿದ್ದೇನು? - Anirudh Jatkar

ಮತ್ತೋರ್ವ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದು, "ಪುರಾಣವನ್ನು ವೈಜ್ಞಾನಿಕ ಕಾಲ್ಪನಿಕ ಜಾನರ್​ಗೆ ಹೊಂದಿಸಿರುವುದು ಅತ್ಯುತ್ತಮ ಆಲೋಚನೆ. ಈ ವಿಷಯದಲ್ಲಿ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಅದ್ಭುತ ದೃಶ್ಯಗಳು, ಕಾಲ್ಪನಿಕ ವಿಶ್ವ ನಿರ್ಮಾಣ, ಜಿಜಿಐ, ಕಥೆ ಹೇಳುವ ಶೈಲಿ ಮತ್ತು ಸಂಗೀತ ಅತ್ಯುತ್ತಮವಾಗಿ ಮೂಡಿಬಂದಿದೆ. ಪ್ರಭಾಸ್ ಹ್ಯಾಟ್ಸ್ ಆಫ್'' ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸಿನಿಮಾದ ಸೀಕ್ವೆಲ್​ ಬಗ್ಗೆ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕಲ್ಕಿ ದಾಖಲೆ: ಹೈದರಾಬಾದ್​​ನ ಮಲ್ಟಿಪ್ಲೆಕ್ಸ್​​ವೊಂದರಲ್ಲಿ ಗುರುವಾರ 42 ಶೋಗಳು; ಟಿಕೆಟ್ಸ್ ಸೋಲ್ಡ್ ಔಟ್ - Kalki 2898 AD

ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಅನ್ನಾ ಬೆನ್, ಕೀರ್ತಿ ಸುರೇಶ್ ಅಲ್ಲದೇ ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.