ಹೈದರಾಬಾದ್: ವರುಣಾರ್ಭಟಕ್ಕೆ ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ನಲುಗಿದೆ. ವಿನಾಶಕಾರಿ ಪ್ರವಾಹದ ಹಿನ್ನೆಲೆಯಲ್ಲಿ ಸಾವು-ನೋವಿನ ಸಂಖ್ಯೆ ಏರುತ್ತಿದೆ. ಈ ಸವಾಲಿನ ಸಂದರ್ಭದಲ್ಲಿ ಸಿನಿ ಸೆಲೆಬ್ರಿಟಿಗಳು ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆ. ಪರಿಹಾರ ಕಾರ್ಯಗಳಿಗೆ ಸಹಾಯವಾಗೋ ನಿಟ್ಟಿನಲ್ಲಿ ಟಾಲಿವುಡ್ ದಿಗ್ಗಜರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಚಿರಂಜೀವಿ, ಅಲ್ಲು ಅರ್ಜುನ್, ಪ್ರಭಾಸ್ ದೇಣಿಗೆ ಘೋಷಿಸಿದ್ದಾರೆ.
ಪ್ರವಾಹಪೀಡಿತ ರಾಜ್ಯಗಳ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ತೆಲುಗಿನ ಹೆಸರಾಂತ ನಟರು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರತೀ ರಾಜ್ಯಕ್ಕೆ 50 ಲಕ್ಷ ರೂ., ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ನಟ ಚಿರಂಜೀವಿ ಎರಡೂ ರಾಜ್ಯಗಳಿಗೆ ತಲಾ 50 ಲಕ್ಷ ರೂ. ಮತ್ತು ಆಂಧ್ರದ ಉಪ ಮುಖ್ಯಮಂತ್ರಿ - ನಟ ಪವನ್ ಕಲ್ಯಾಣ್ ಅವರು ಆಂಧ್ರಕ್ಕೆ 1 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.
In light of the floods impacting both the Telugu states, I am pledging a donation of 50 lakhs each to the CM Relief Fund for both AP and Telangana. Let’s collectively support the measures being undertaken by the respective governments to provide immediate aid and facilitate the…
— Mahesh Babu (@urstrulyMahesh) September 3, 2024
ಇವರ ಬೆನ್ನಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಒಟ್ಟು 2 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಈ ಮೊತ್ತ ಎರಡು ತೆಲುಗು ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಸದ್ಯ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಿಗೆ ಈ ಹಣ ನೆರವಾಗಲಿದೆ. ಇನ್ನೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಕೂಡಾ 1 ಕೋಟಿ ರೂಪಾಯಿ ದೇಣಿಗೆ ಘೋಷಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣಕ್ಕೆ 50 ಲಕ್ಷ ರೂಪಾಯಿಯಂತೆ ಹಂಚಿಕೆಯಾಗಲಿದೆ. ನಟರ ದೇಣಿಗೆ ಪರಿಹಾರ ಕಾರ್ಯಗಳು ಚುರುಕುಗೊಳ್ಳಲು ನೆರವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲಿ ಹೆಚ್ಚು ಅಗತ್ಯವಿದೆಯೋ ಅಲ್ಲಿ ಈ ಹಣ ಬಳಕೆಯಾಗಲಿದೆ.
ಗುಂಟೂರು ಖಾರಮ್ ನಟ ಮಹೇಶ್ ಬಾಬು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. "ಎರಡೂ ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಣಾಮ ಬೀರಿದ್ದು, ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ದೇಣಿಗೆ ನೀಡುತ್ತಿದ್ದೇನೆ. ಆಯಾ ಸರ್ಕಾರಗಳು ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಗಳನ್ನು ನಾವು ಒಟ್ಟಾಗಿ ಬೆಂಬಲಿಸೋಣ" ಎನ್ನುವ ಮೂಲಕ ಚೇತರಿಕೆ ಕಾರ್ಯಗಳಿಗೆ ಎಲ್ಲರೂ ಕೊಡುಗೆ ನೀಡುವಂತೆ ನಟ ಒತ್ತಾಯಿಸಿದರು.
ಹಿರಿಯ ನಟ ಚಿರಂಜೀವಿ ಟ್ವೀಟ್ ಮಾಡಿ, "ತೆಲುಗು ರಾಜ್ಯಗಳಲ್ಲಿ ಪ್ರವಾಹದ ಸೃಷ್ಟಿಸಿರುವ ಅವಾಂತರ ಅತೀವ ದುಃಖ ಕೊಟ್ಟಿದೆ. ಹತ್ತಾರು ಅಮಾಯಕರು ಕೊನೆಯುಸಿರೆಳೆದಿರುವುದು ದುರಂತ. ತೆಲುಗು ರಾಜ್ಯಗಳ ಮುಖ್ಯಮಂತ್ರಿಗಳ ನಿರ್ದೇಶನದ ಅಡಿಯಲ್ಲಿ ಎರಡೂ ಸರ್ಕಾರಗಳು ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಿವೆ'' ಎಂದು ತಿಳಿಸಿದ್ದಾರೆ.
తెలుగు రాష్ట్రాల్లో వరద ప్రభావం వల్ల ప్రజలకు కలిగిన, కలుగుతున్న కష్టాలు నన్ను కలిచివేస్తున్నాయి. పదుల సంఖ్యలో అమాయక ప్రాణాలు కోల్పోవడం ఎంతో విషాదకరం. తెలుగు రాష్ట్రాల ముఖ్యమంత్రుల నిర్దేశంలో రెండు ప్రభుత్వాలు శాయశక్తులా పరిస్థితిని మెరుగు పరచడానికి కృషి చేస్తున్నాయి.
— Chiranjeevi Konidela (@KChiruTweets) September 4, 2024
మనందరం ఏదో…
ಅಲ್ಲದೇ, "ನಾವೆಲ್ಲರೂ ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರ ಭಾಗವಾಗಿ, ನಾನು 1 ಕೋಟಿ ರೂ. (ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ) ದೇಣಿಗೆ ಘೋಷಿಸುತ್ತಿದ್ದೇನೆ. ಈ ಕಠಿಣ ಪರಿಸ್ಥಿತಿ ಶೀಘ್ರವೇ ಕೊನೆಗೊಳ್ಳಲಿ, ಜನರು ಸುರಕ್ಷಿತರಾಗಿರಲಿ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ. ರಾಜ್ಯದ ಯೋಗಕ್ಷೇಮ ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಇಂತಹ ಕಠಿಣ ಸಮಯದಲ್ಲಿ ನೆರವಾಗಬೇಕು. ಸರ್ಕಾರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 80 ಕೋಟಿ ರೂ. ಖರ್ಚು ಮಾಡುತ್ತಿದೆ. ಭವಿಷ್ಯದಲ್ಲಿ ಇಂಥ ಅನಾಹುತಗಳನ್ನು ತಡೆಯಲು ಪ್ರತೀ ನಗರಕ್ಕೂ ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದು ತೀಳಿಸಿದರು. ಇಂದು ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಲಿದ್ದಾರೆ.
ಕಳೆದ ದಿನ ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾ ಖ್ಯಾತಿಯ ಜೂನಿಯರ್ ಎನ್ಟಿಆರ್ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದರು. ಅಲ್ಲದೇ, ಪ್ರಭಾಸ್ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಸಿನಿಮಾ ಹಿಂದಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ಘೋಷಿಸಿದ್ದರು.