ETV Bharat / entertainment

ಚಿತ್ರಮಂದಿರಗಳಲ್ಲಿ ಘಮಘಮಿಸುತ್ತಿರುವ 'ಪೌಡರ್'​ ಮೊದಲ ದಿನ ಗಳಿಸಿದ್ದೆಷ್ಟು? - Powder Collection - POWDER COLLECTION

ಗುಲ್ಟು ಖ್ಯಾತಿಯ ಜನಾರ್ಧನ ಚಿಕ್ಕಣ್ಣ ಆ್ಯಕ್ಷನ್​ ಕಟ್​​ ಹೇಳಿರುವ 'ಪೌಡರ್'​ ಸಿನಿಮಾ ಶುಕ್ರವಾರದಂದು ತೆರೆಕಂಡಿದೆ. ದೂದ್ ಪೇಡಾ ಖ್ಯಾತಿಯ ದಿಗಂತ್ ಮತ್ತು ಯಂಗ್​​ ಸ್ಟಾರ್​ ನಟಿ ಧನ್ಯಾ ರಾಮ್ ಕುಮಾರ್ ಸಿನಿಮಾಗೆ ಹೆಚ್ಚಿನವರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Powder Collection
ಪೌಡರ್​ ಕಲೆಕ್ಷನ್​​ (ETV Bharat)
author img

By ETV Bharat Karnataka Team

Published : Aug 24, 2024, 1:07 PM IST

ಸ್ಯಾಂಡಲ್​ವುಡ್​ನ ದೂದ್ ಪೇಡಾ ಖ್ಯಾತಿಯ ದಿಗಂತ್ ಮತ್ತು ಯಂಗ್​​ ಸ್ಟಾರ್​ ನಟಿ ಧನ್ಯಾ ರಾಮ್ ಕುಮಾರ್ ತೆರೆ ಹಂಚಿಕೊಂಡಿರುವ ಕನ್ನಡದ ಬಹುನಿರೀಕ್ಷಿತ 'ಪೌಡರ್'​ ಚಿತ್ರ ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಟೈಟಲ್​ ಮತ್ತು ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರಕ್ಕೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಮನರಂಜನೆಯ ರಸದೌತನ ಉಣಬಡಿಸುತ್ತಿರುವ ಕನ್ನಡ ಹಾಸ್ಯಪ್ರಧಾನ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಾಧಾರಣ ಅಂಕಿ ಅಂಶಗಳೊಂದಿಗೆ ತನ್ನ ಪ್ರಯಾಣ ಪ್ರಾರಂಭಿಸಿದೆ.

ಕಂಪ್ಲೀಟ್​​ ಎಂಟರ್​ಟೈನ್ಮೆಂಟ್​ ಸಿನಿಮಾದ ಮೊದಲ ದಿನ ಕಲೆಕ್ಷನ್​ ಮಾಹಿತಿಯನ್ನು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​​ ಸ್ಯಾಕ್ನಿಲ್ಕ್ ಒದಗಿಸಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಪೌಡರ್​ ಸಿನಿಮಾ ತೆರೆಕಂಡ ದಿನ (ಶುಕ್ರವಾರ) 0.08 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆದರೆ ನಿರ್ಮಾಪಕರ ಆಪ್ತರ ಪ್ರಕಾರ, 10 ಲಕ್ಷ ರೂ ಕಮಾಯಿ ಮಾಡಿದೆ. ಅದಾಗ್ಯೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಶೀರ್ಷಿಕೆಯೇ ಹೇಳಿದಂತೆ ಇದೊಂದು 'ಪೌಡರ್​​' ಸುತ್ತ ಹೆಣೆದಿರುವ ಕಥೆ. ಪೌಡರ್​ ಪ್ರಭಾವದಿಂದ ಸಿರಿವಂತರಾಗಲು ನಡೆಸುವ ಪ್ರಯತ್ನಗಳು, ಅವರಿಗೆ ಎದುರಾಗುವ ಪ್ರಯತ್ನಗಳು, ತಮ್ಮ ಗುರಿ ತಲುಪುತ್ತಾರಾ? ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ದಿಗಂತ್​​ ಸೂರ್ಯನ ಪಾತ್ರ ನಿರ್ವಹಿಸಿದ್ದು, ಸೂಪರ್​ ಮಾರ್ಕೆಟ್​ನಲ್ಲಿ ಕೆಲಸ ಮಾಡುವ ಯುವಕನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ತಾನು ಪ್ರೀತಿಸೋ ಹುಡುಗಿಯನ್ನು ಇಂಪ್ರೆಸ್​​ ಮಾಡುತ್ತಲೇ ಇರುತ್ತಾನೆ. ಧನ್ಯಾ ರಾಮ್​​ಕುಮಾರ್​ ಅವರು ನರ್ಸ್​​ ಪಾತ್ರ ನಿರ್ವಹಿಸಿದ್ದು. ದಿಗಂತ್​ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಸ್ನೇಹಿತನ ಪಾತ್ರದಲ್ಲಿ ಅನಿರುದ್ಧ್ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಈ ಮೂವರೂ ಸೇರಿ ಪೌಡರ್​ ಹೆಸರಿನ ಡ್ರಗ್ಸ್​​​ ಮಾರಿ ಸಿರಿವಂತರಾಗುವ ಕನಸು ಕಾಣುತ್ತಾರೆ.

ಇನ್ನೂ ಡ್ರಗ್ಸ್ ಮಾರುವ ಅಣ್ಣಾಚಿ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಳಿಯಾಗಿ ಸುಲೇಮಾನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ನಟಿ ಶರ್ಮಿಳಾ ಮಾಂಡ್ರೆ ಅವರು ಮೇಕಪ್ ಮಲ್ಲಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರವಿಶಂಕರ್ ಹಾಗೂ ನಾಗಭೂಷಣ್ ಅವರ ಪಾತ್ರಗಳೂ ಕೂಡಾ ಗಮನ ಸೆಳೆದಿವೆ. ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ ಪ್ರಚಾರ ಮುಂದುವರಿಸಿದೆ.

ಇದನ್ನೂ ಓದಿ: 'ಪೌಡರ್' ಘಮಕ್ಕೆ ಮನಸೋತ ಪ್ರೇಕ್ಷಕರು: ದಿಗಂತ್, ಧನ್ಯಾ ಸಿನಿಮಾಗೆ ಸಿಕ್ಕ ರಿಯಾಕ್ಷನ್​​ ಹೀಗಿದೆ - Powder Movie Reaction

ಗುಲ್ಟು ಖ್ಯಾತಿಯ ಜನಾರ್ಧನ ಚಿಕ್ಕಣ್ಣ ಅವರ ನಿರ್ದೇಶನ ಈ ಚಿತ್ರಕ್ಕಿದೆ. ವಾಸುಕಿ ವೈಭವ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ 'ಕೆಆರ್​ಜಿ' ಸ್ಟುಡಿಯೋಸ್​​​ ಬ್ಯಾನರ್ ಅಡಿ ಹಾಗೂ ಅರುನಭ್ ಕುಮಾರ್ ಟಿವಿಎಫ್​ ಮೋಷನ್​​ ಪಿಕ್ಚರ್ಸ್​​​ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: 'ಆ್ಯಕ್ಷನ್ ಪಾತ್ರಕ್ಕಾಗಿ ಎರಡು ತಿಂಗಳು ಪ್ರ್ಯಾಕ್ಟೀಸ್ ಮಾಡಿದ್ದೇನೆ': 'ಪೌಡರ್'​ ನಟಿ ಶರ್ಮಿಳಾ ಮಾಂಡ್ರೆ - Sharmiela Mandre Interview

ಶುಕ್ರವಾರದಂದು ಸಿನಿಮಾ ಬಿಡುಗಡೆ ಆಗಿದೆ. ತಮ್ಮ ಸಿನಿಮಾ ನೋಡಲು ನಟ ದಿಗಂತ್ ಮಂಚಾಲೆ ಮತ್ತು ನಟಿ ಧನ್ಯಾ ರಾಮ್​​ಕುಮಾರ್ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇಂದು ಮತ್ತು ನಾಳೆ ವಾರಾಂತ್ಯ ಹಿನ್ನೆಲೆ ಕಲೆಕ್ಷನ್​​ ಏರುವ ಸಾಧ್ಯತೆಗಳಿವೆ. ಕನ್ನಡ ಚಿತ್ರರಮಗದಲ್ಲೀಗ ಗೆಲುವಿನ ಭರವಸೆ ಮೂಡಿದ್ದು, ಮತ್ತಷ್ಟು ಒಳ್ಳೆ ಸಿನಿಮಾ ಬರಲಿ ಎನ್ನುವುದೇ ಪ್ರೇಕ್ಷಕರ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.