ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಿನಿರಂಗದಲ್ಲಿ ಮತ್ತೊಮ್ಮೆ ಶೈನ್ ಆಗುವ ಕಾತರದಲ್ಲಿದ್ದಾರೆ. ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಚೆಲುವೆಯ ಕ್ರೇಜ್ ಕ್ರಮೇಣ ಕಡಿಮೆಯಾಗತೊಡಗಿತು. ನಟಿಯ 'ರಾಧೆ ಶ್ಯಾಮ್' ಮತ್ತು 'ಬೀಸ್ಟ್'ದಂತಹ ಕೆಲ ಚಿತ್ರಗಳು ನಿರೀಕ್ಷೆ ತಲುಪಲಿಲ್ಲ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗಿನ ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಚಿತ್ರ ಯಶಸ್ವಿಯಾಯಿತಾದರೂ, ಬಾಕ್ಸ್ ಆಫೀಸ್ ಅಂಕಿ ಅಂಶಗಳು ಅಂದುಕೊಂಡಷ್ಟು ಲಾಭ ತರಲಿಲ್ಲ. ಹೀಗಾಗಿ ನಟಿಗೆ ಆಫರ್‌ಗಳೂ ಕಡಿಮೆಯಾದವು ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಯಶಸ್ಸಿನ ಗುರಿಯೊಂದಿಗೆ ಪೂಜಾ ಹೊಸ ಪ್ರೊಜೆಕ್ಟ್ಗೆ ಕೈ ಹಾಕಿದ್ದಾರೆ. ಈ ಬಗ್ಗೆ ಅಫೀಶಿಯಲ್ ಅನೌನ್ಸ್ಮೆಂಟ್ ಕೂಡ ಹೊರಬಿದ್ದಿದೆ.
ದಕ್ಷಿಣದ ನಂತರ ಬಾಲಿವುಡ್ ಹಾದಿ ಹಿಡಿದ ಹೆಗ್ಡೆ, ಸಲ್ಮಾನ್ ಖಾನ್ ಅಲ್ಲದೇ ರಣ್ವೀರ್ ಸಿಂಗ್, ಹೃತಿಕ್ ರೋಷನ್ ಅವರಂತಹ ಸ್ಟಾರ್ ನಟರ ಜೊತೆಯೂ ನಟಿಸಿದರು. ಅವೆಲ್ಲವೂ ಬಿಗ್ ಬಜೆಟ್ ಸಿನಿಮಾಗಳೇ. ಆದರೆ ದಕ್ಷಿಣದ ಈ ಚೆಲುವೆ ಬಿಟೌನ್‌ನಲ್ಲಿ ಮಾಡಿದ ಚಿತ್ರಗಳು ಪ್ರೇಕ್ಷಕರನ್ನು ಮೆಚ್ಚಿಸಲು ಕೊಂಚ ಹಿನ್ನಡೆ ಕಂಡವು. ಇತ್ತೀಚೆಗೆ ನಟಿಯ ಯಾವುದೇ ಸಿನಿಮಾಗಳು ಘೋಷಣೆಯಾಗಲಿಲ್ಲ. ಹಾಗಾಗಿ ಅಭಿಮಾನಿಗಳು ಗೊಂದಲದಲ್ಲಿದ್ದರು.
ಕೆಲ ದಿನಗಳಿಂದ ಒಂದೊಳ್ಳೆ ಆಫರ್ಗಾಗಿ ಕಾಯುತ್ತಿದ್ದ ಪೂಜಾಗೆ ಕಾಲಿವುಡ್ನಲ್ಲಿ ಕ್ರೇಜಿ ಆಫರ್ ಸಿಕ್ಕಿದೆ. ತಮಿಳಿನ ಸ್ಟಾರ್ ಹೀರೋ ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜ್ ಕಾಂಬಿನೇಶನ್ನ 'ಸೂರ್ಯ 44' ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಚಿತ್ರ ತಯಾರಕರು ಪೂಜಾ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಪೋಸ್ಟರ್ ಸ್ಪಷ್ಟವಾಗಿಲ್ಲವಾದರೂ, ಆಭರಣಗಳಿಂದ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಸಿನಿಮಾ ನಟಿಗೆ ಅದೃಷ್ಟ ತರಲಿದೆ ಎಂದು ನಂಬಿದ್ದಾರೆ.
ಇದನ್ನೂ ಓದಿ: ಸಾಗರೋತ್ತರ ಪ್ರದೇಶದಲ್ಲಿ ಸಾರಾ ಅಲಿ ಖಾನ್; ಫೋಟೋಗಳನ್ನು ನೋಡಿ - Sara Ali Khan
ಈ ಹಿಂದೆ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತೆಲುಗಿನ ಗುಂಟೂರು ಖಾರಂನಲ್ಲಿ ಪೂಜಾ ಹೆಗ್ಡೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದರು. ಆದ್ರೆ ಅನಿರೀಕ್ಷಿತವಾಗಿ ಯೋಜನೆಯಿಂದ ಹೊರಬಂದರು. ಶೂಟಿಂಗ್ ಡೇಟ್ಸ್ ಕೊರತೆ ಎನ್ನಲಾಗಿತ್ತು. ಈ ಚಿತ್ರದಲ್ಲಿ ಪೂಜಾ ಬದಲು ಶ್ರೀಲೀಲಾ ನಟಿಸಿ, ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಗುಂಟೂರು ಖಾರಂ ಸೂಪರ್ ಹಿಟ್ ಆಯಿತು. ಇದೀಗ ಪೂಜಾ ಅವರು ಸೂರ್ಯ ಜೊತೆ ನಟಿಸಲು ಸಜ್ಜಾಗಿದ್ದು, ಈ 'ಸೂರ್ಯ 44' ಪ್ರೊಜೆಕ್ಟ್ ನಟಿಗೆ ಯಶಸ್ಸು ತಂದು ಕೊಡಲಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸ್ಪೇನ್‌ನಲ್ಲಿ ಶಾರುಖ್ ಖಾನ್ 'ಕಿಂಗ್' ಶೂಟಿಂಗ್? ಫೋಟೋ ವೈರಲ್ - SRK King Shooting