ETV Bharat / entertainment

ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಚಿತ್ರತಂಡದಿಂದ ಪೊಲೀಸ್ ಧ್ವಜ ದಿನದ ಶುಭಾಶಯ - Laughing Buddha - LAUGHING BUDDHA

ಪ್ರಮೋದ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾದ ವಿಶೇಷ ವಿಡಿಯೋ ರಿಲೀಸ್​ ಆಗಿದೆ.

Laughing Buddha movie team
'ಲಾಫಿಂಗ್ ಬುದ್ಧ' ಚಿತ್ರತಂಡ
author img

By ETV Bharat Karnataka Team

Published : Apr 2, 2024, 3:39 PM IST

Updated : Apr 2, 2024, 4:05 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರಗಳುಳ್ಳ ಚಿತ್ರಗಳನ್ನು ನಿರ್ದೇಶಿಸಿ, ನಟಿಸುವ ಜತೆಗೆ ನಿರ್ಮಾಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಂಡಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ. ಇವರು ರಿಷಬ್ ಶೆಟ್ಟಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಹೊಸ ಚಿತ್ರ 'ಲಾಫಿಂಗ್ ಬುದ್ಧ'. ಸದ್ಯ ಪೋಸ್ಟ್ ಪ್ರೊಡಕ್ಷನ್​​​ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪೊಲೀಸ್ ಧ್ವಜ ದಿನದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಶುಭಾಶಯ ಕೋರಿದೆ.

ರಿಷಬ್ ಶೆಟ್ಟಿ ಪೋಸ್ಟ್: ಈ ಚಿತ್ರ ನಿರ್ಮಿಸುತ್ತಿರುವ ಕಾಂತಾರ ಸ್ಟಾರ್ ರಿಷಬ್​ ಶೆಟ್ಟಿ ಕೂಡ ಈ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. 'ನಮ್ಮ ಧೀರ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗೂ ಕರ್ತವ್ಯ ನಿಷ್ಠೆಯನ್ನು ಗೌರವಿಸುವ ಸುದಿನ. 'ಪೊಲೀಸ್ ಧ್ವಜ ದಿನಾಚರಣೆ'ಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

Laughing Buddha movie team
'ಲಾಫಿಂಗ್ ಬುದ್ಧ' ಚಿತ್ರತಂಡ

ಲಾಫಿಂಗ್ ಬುದ್ಧ ಸಿನಿಮಾ ಪೊಲೀಸ್ ಕಾನ್ಸ್​​ಟೇಬಲ್​ ಸುತ್ತ ಸುತ್ತುತ್ತದೆ. ದೇಹದ ತೂಕ ಹೆಚ್ಚಿರುವ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ಹೇಗೆ ತರುತ್ತಾರೆ ಎಂಬುದೇ ಚಿತ್ರದ ಕಥೆ. ಹಾಸ್ಯದೊಂದಿಗೆ ಭಾವನಾತ್ಮಕ ದೃಶ್ಯಗಳೂ ಸಹ ಸಿನಿಮಾದಲ್ಲಿರಲಿವೆ ಎಂದಿದೆ ಚಿತ್ರತಂಡ.

Laughing Buddha movie team
'ಲಾಫಿಂಗ್ ಬುದ್ಧ' ಚಿತ್ರತಂಡ

ಇದನ್ನೂ ಓದಿ: ಅಜಯ್​ ದೇವ್​​ಗನ್​ ಜನ್ಮದಿನ: 'ಮೈದಾನ್'​ ಟ್ರೇಲರ್ ರಿಲೀಸ್; ಮುಂದಿನ ಚಿತ್ರಗಳಾವುವು ಗೊತ್ತೇ? - Maidaan Trailer

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಮತ್ತು ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ನಟಿಸಿದ್ದಾರೆ. ತೇಜು ಕೊನೆಯದಾಗಿ ಗಂಟುಮೂಟೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಾಮಿಡಿ ಜಾನರ್​ನ ಈ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದಾರೆ.

Laughing Buddha movie team
'ಲಾಫಿಂಗ್ ಬುದ್ಧ' ಚಿತ್ರತಂಡ

ಇದನ್ನೂ ಓದಿ: ಹೊಸ ಪ್ರತಿಭೆಗಳ 'ಸಿಂಹಗುಹೆ' ಸಿನಿಮಾಗೆ ನಟ ಅನಿರುದ್ಧ್ ಸಾಥ್ - Simhaguhe

ವಿಷ್ಣು ವಿಜಯ್ ಸಂಗೀತ ನಿರ್ದೇಶನವಿದೆ. ಚಂದ್ರಶೇಖರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನದ ಹೊಣೆ ಹೊತ್ತಿದ್ದಾರೆ. ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸುವ ತಯಾರಿಯಲ್ಲಿ ಚಿತ್ರತಂಡವಿದೆ.

Last Updated : Apr 2, 2024, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.