ETV Bharat / state

ಹೊಸ ವರ್ಷಾಚರಣೆ ಟಾರ್ಗೆಟ್: ಬೆಂಗಳೂರಿಗೆ ಆಮದಾಗುತ್ತಿದ್ದ 3.25 ಕೋಟಿ ಮೌಲ್ಯದ ಗಾಂಜಾ ಜಪ್ತಿ - BENGALURU POLICE SEIZED GANJA

ಹೊಸ ವರ್ಷಾಚರಣೆ ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿಗೆ ಆಮದಾಗುತ್ತಿದ್ದ 318 ಕೆ.ಜಿ ಗಾಂಜಾವನ್ನು ಗೋವಿಂದಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Bengaluru Police seized Ganja
ಪೊಲೀಸರು ವಶಪಡಿಸಿಕೊಂಡ ಗಾಂಜಾ (ETV Bharat)
author img

By ETV Bharat Karnataka Team

Published : Nov 22, 2024, 2:46 PM IST

Updated : Nov 22, 2024, 4:22 PM IST

ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಷ್ಟರಲ್ಲಿಯೇ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಮೂವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ 3.25 ಕೋಟಿ ಮೌಲ್ಯದ 318 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್​ ತಿಳಿಸಿದ್ದಾರೆ.

"ಕೇರಳ ಮೂಲದ ಅಚ್ಚು, ಬೆಂಗಳೂರು ಮೂಲದ ಜಮೀರ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತರು. ಒಡಿಶಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಗಾಂಜಾ ಖರೀದಿಸಿ ಕಾರಿನ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರಮುಖ ಆರೋಪಿಯಾಗಿರುವ ಅಚ್ಚು ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸರಬರಾಜು, ರಾಬರಿ, ಹತ್ಯೆ ಯತ್ನ ಮಾತ್ರವಲ್ಲದೇ ಮೂರು ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು." ಎಂದರು.

ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್ ಮಾಹಿತಿ (ETV Bharat)

"ಕೆಲದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಇಲ್ಲಿನ ಸ್ಥಳೀಯ ಕಾರು ಚಾಲಕನಾಗಿದ್ದ ಜಮೀರ್‌ನನ್ನು ಪರಿಚಯಿಸಿಕೊಂಡಿದ್ದ. ನಂತರ ಜಮೀರ್ ಹಾಗೂ ಆತನ ಪತ್ನಿಯನ್ನು ಪುಸಲಾಯಿಸಿ ಗಾಂಜಾ ಮಾರಾಟದ ಕೃತ್ಯಕ್ಕೆ ಬಳಸಿಕೊಂಡಿದ್ದ. ಮೂವರೂ ಸಹ ಆಂಧ್ರಪ್ರದೇಶ - ಒಡಿಶಾ ಗಡಿ ಭಾಗಗಳಿಗೆ ತೆರಳಿ ಗಾಂಜಾ ಖರೀದಿಸಿ ತಂದಿದ್ದರು" ಎಂದು ತಿಳಿಸಿದರು.

ಇದನ್ನೂ ಓದಿ: ಉಡುಪಿ: ಅಕ್ರಮ ಗಾಂಜಾ ಸಾಗಾಟ, ಇಬ್ಬರು ಆರೋಪಿಗಳ ಬಂಧನ

Last Updated : Nov 22, 2024, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.