ETV Bharat / entertainment

ಭಾರತದಲ್ಲಿ ನಂಬರ್​ 1 ಟ್ರೆಂಡಿಂಗ್​ ಆದ 'ಪೋಚರ್'​: ನಟಿ ಆಲಿಯಾ ಭಟ್​​​ ಹರ್ಷ - ಪೋಚರ್

'ಪೋಚರ್'​ ವೆಬ್​ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಹೆಚ್ಚಿನ ಜನ ಮನ್ನಣೆಗಳಿಸಿದ್ದು, ನಿರ್ಮಾಪಕಿಯಾಗಿರುವ ನಟಿ ಹರ್ಷ ವ್ಯಕ್ತಪಡಿಸಿದ್ದಾರೆ.

poacher-is-number-1-in-india-alia-bhatt-elated-with-series-response

author img

By ETV Bharat Karnataka Team

Published : Feb 24, 2024, 4:22 PM IST

Updated : Feb 24, 2024, 4:54 PM IST

ಹೈದರಾಬಾದ್​: ರಿಚಿ ಮೆಹ್ತಾ ನಿರ್ದೇಶನದ 'ಪೋಚರ್​' ವೆಬ್​ ಸರಣಿಗೆ ಬಾಲಿವುಡ್​ ನಟಿ ಆಲಿಯಾ ಭಟ್​​ ಕೈ ಜೋಡಿಸಿದ್ದು, ಫೆಬ್ರವರಿ 23ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಉತ್ತಮ ಚಿತ್ರಕಥೆಯು ಮೂಲಕ ಸದ್ಯ ಚಿತ್ರ ಎಲ್ಲರ ಆಕರ್ಷಣೆಯನ್ನು ಸೆಳೆದಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಜನಮನ್ನಣೆ ಗಳಿಸಿದ ಹಿನ್ನಲೆ ನಟಿ ಆಲಿಯಾ ಭಟ್​ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ವೆಬ್​ ಸರಣಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಹರ್ಷ ವ್ಯಕ್ತಪಡಿಸಿ ಇನ್ಸ್​​ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್​​ ಮಾಡಿರುವ ನಟಿ, 'ಪೋಚರ್' ವೆಬ್​​​​​ ಸರಣಿಯ ಪ್ರಸಾರದ ದೊಡ್ಡ ಪರದೆಯ ಮುಂದೆ ನಿಂತು ತಮ್ಮ ಮುದ್ದಿನ ಬೆಕ್ಕಿಗೆ ಮುತ್ತಿಕ್ಕುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಪೋಚರ್​​ನ ಕಾರ್ಯಕಾರಿ ನಿರ್ಮಾಪಕಿಯಾಗಿರುವ ನಟಿ, ವೆಬ್​ ಸರಣಿಯ ಕುರಿತು ಉತ್ಸಾಹ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ವೆಬ್​ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಭಾರತದಲ್ಲಿ ನಂಬರ್​ 1 ಸ್ಥಾನ ಪಡೆದಿದೆ. ಈ ಹಿನ್ನೆಲೆ ನಟಿ ಕೂಡ ತಮ್ಮ ಪೋಸ್ಟ್​ನಲ್ಲಿ ಬಿಡುಗಡೆಯ ಮರುದಿನವೇ ಪೋಚರ್​ ಭಾರತದಲ್ಲಿ ನಂಬರ್​ 1 ಟ್ರೆಂಡಿಂಗ್​ನಲ್ಲಿದೆ ಎಂದು ಅಡಿಬರಹವನ್ನು ಬರೆದಿದ್ದಾರೆ. ಅಲ್ಲದೇ ವ್ಯಕ್ತವಾಗುತ್ತಿರುವ ಪ್ರೀತಿಯಿಂದ ಥ್ರಿಲ್​ ಆಗಿದ್ದು, ಯಾರು ಇನ್ನೂ ಸರಣಿ ನೋಡಿಲ್ಲವೋ ಬೇಗ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿ ವಿಜೇತ ನಿರ್ದೇಶಕ ರಿಚ್ಚಿ ಮೆಹ್ತಾ ನಿರ್ದೇಶನದಲ್ಲಿ ಈ ಸರಣಿ ಮೂಡಿ ಬಂದಿದೆ. ಕೇರಳದ ಕಾಡಿನಲ್ಲಿ ಆನೆಗಳ ದಂತಕ್ಕಾಗಿ ನಡೆಯುವ ಖದೀಮರ ಬೇಟೆಯಾಡುವ ಜಾಲದ ಕುರಿತ ಕಥೆಯನ್ನು ಇದು ಒಳಗೊಂಡಿದೆ. ಸರಣಿಯಲ್ಲಿ ನಿಮಿಷಾ ಸಂಜಯನ್​, ರೋಶನ್​ ಮ್ಯಾಥ್ಯೂ ಮತ್ತು ದಿಬ್ಯೆಂದು ಭಟ್ಟಾಚಾರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಆಲಿಯಾ ಭಟ್​​ರ ಮೊದಲ ನಿರ್ಮಾಣದ ಚಿತ್ರ 2022ರ ನೆಟ್‌ಫ್ಲಿಕ್ಸ್ ಸಿನಿಮಾ 'ಡಾರ್ಲಿಂಗ್ಸ್‌' ಚಿತ್ರವಾಗಿದೆ. ಇದೀಗ ರಿಚಿ ಮೆಹ್ತಾ, ಕ್ಯೂ.ಸಿ ಎಂಟರ್‌ಟೈನ್‌ಮೆಂಟ್ ಮತ್ತು ಪ್ರೈಮ್ ವಿಡಿಯೋ ಸಹಯೋಗದೊಂದಿಗೆ ಆಲಿಯಾ ಭಟ್​ ಈ ಸೀರಿಸ್​ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಟನಾ ವೃತ್ತಿನಲ್ಲಿ ನಟಿ ಸದ್ಯ ವಸನ್​ ಬಾಲಾ ಅವರ 'ಜಿಗ್ರಾ'ದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಕರಣ್​ ಜೋಹರ್​ ಜೊತೆಯಾಗಿ ಸಹ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿದೆ.

ಇದನ್ನೂ ಓದಿ: 'Poacher' ಪ್ರಾಜೆಕ್ಟ್​ಗೆ ನಿರ್ಮಾಪಕಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್

Last Updated : Feb 24, 2024, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.