ಮುಂಬೈ: ಬಾಲಿವುಡ್ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ಮೇಲೆ ಮತ್ತೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ನಾಲ್ವರು ಸದಸ್ಯರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಾಂದ್ರಾದಲ್ಲಿನ ಖಾನ್ ನಿವಾಸದ ಮೇಲೆ ಇತ್ತೀಚೆಗಷ್ಟೇ ಗುಂಡಿನ ದಾಳಿ ನಡೆದಿತ್ತು. ಇದೀಗ ನಟನ ಮೇಲೆ ದಾಳಿ ನಡೆಸಿದ್ದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಕಳೆದ ತಿಂಗಳು ನವಿ ಮುಂಬೈ ಪೊಲೀಸರು ಪನ್ವೆಲ್ ಪ್ರದೇಶದಲ್ಲಿನ ಸಲ್ಮಾನ್ ಫಾರ್ಮ್‌ಹೌಸ್‌ನಲ್ಲಿ ನಟನ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ಸುಳಿವು ಪಡೆದಿದ್ದರು. ಆ ಕೂಡಲೇ ತನಿಖೆ ಪ್ರಾರಂಭವಾಗಿತ್ತು. ಬಂಧಿತ ನಾಲ್ವರು ವ್ಯಕ್ತಿಗಳು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಸಹೋದರ ಅನ್ಮೋಲ್ ಬಿಷ್ಣೋಯ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ. ಬಿಷ್ಣೋಯ್ ಸಹೋದರರ ನಿರ್ದೇಶನದ ಮೇರೆಗೆ, ಆರೋಪಿಗಳು ನಟನ ಫಾರ್ಮ್‌ಹೌಸ್ ಮತ್ತು ಸಲ್ಮಾನ್ ಆಗಾಗ್ಗೆ ಭೇಟಿ ಕೊಡುವ ಸ್ಥಳಗಳನ್ನು ಗಮನಿಸುತ್ತಿದ್ದರು ಎಂದು ತಿಳಿದುಬಂದಿದೆ.
ನವಿ ಮುಂಬೈ ಪೊಲೀಸರು ಎಫ್ಐಆರ್ನಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಅನ್ಮೋಲ್ ಬಿಷ್ಣೋಯ್ ಸೇರಿದಂತೆ 17 ವ್ಯಕ್ತಿಗಳನ್ನು ಪಟ್ಟಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಧನಂಜಯ್ ತಪೇಸಿಂಗ್ (ಅಜಯ್ ಕಶ್ಯಪ್), ಗೌರವ್ ಭಾಟಿಯಾ (ನಹ್ವಿ), ವಾಸ್ಪಿ ಖಾನ್ (ವಸೀಮ್ ಚಿಕ್ನಾ) ಮತ್ತು ರಿಜ್ವಾನ್ ಖಾನ್ (ಜಾವೇದ್ ಖಾನ್) ಎಂದು ಗುರುತಿಸಲಾಗಿದೆ. ಐಪಿಸಿ ಸೆಕ್ಷನ್ನ ಪಿತೂರಿ (120-ಬಿ) ಮತ್ತು ಕ್ರಿಮಿನಲ್ ಬೆದರಿಕೆ (506) ಅಡಿಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಸೂಪರ್ ಸ್ಟಾರ್ ಸೂರ್ಯ ಜೊತೆ ಪೂಜಾ ಹೆಗ್ಡೆ ಸ್ಕ್ರೀನ್ ಶೇರ್: ಪೋಸ್ಟರ್ ರಿಲೀಸ್ - Pooja Hegde
ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದರೆ, ಅನ್ಮೋಲ್ ಬಿಷ್ಣೋಯ್ ಯುಎಸ್ ಅಥವಾ ಕೆನಡಾದಲ್ಲಿ ನೆಲೆಸಿರಬಹುದೆಂದು ಊಹಿಸಲಾಗಿದೆ. ಏಪ್ರಿಲ್ 14 ರಂದು ಬಾಂದ್ರಾದ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಬಳಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೆಲ ಸುತ್ತುಗಳ ಗುಂಡು ಹಾರಿಸಿದ್ದರು. ಶೂಟರ್‌ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ. ನಂತರ, ಶೂಟರ್‌ಗಳಿಗೆ ಶಸ್ತ್ರಾಸ್ತ್ರ ಪೂರೈಸಿದ ಸೋನು ಬಿಷ್ಣೋಯ್ ಮತ್ತು ಅನುಜ್ ಥಾಪನ್ನನ್ನು ಪಂಜಾಬ್‌ನಲ್ಲಿ ಬಂಧಿಸಲಾಯಿತು. ಮೇ 1 ರಂದು ಪೊಲೀಸ್ ಕಸ್ಟಡಿಯಲ್ಲಿದ್ದ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಸ್ಪೇನ್‌ನಲ್ಲಿ ಶಾರುಖ್ ಖಾನ್ 'ಕಿಂಗ್' ಶೂಟಿಂಗ್? ಫೋಟೋ ವೈರಲ್ - SRK King Shooting