ETV Bharat / entertainment

ಹೇಳಿಕೊಂಡಿದ್ದು ವಿರಳ, ಮಾಡಿದ್ದು ಬಹಳ: ಪುನೀತ್ ರಾಜ್​​​ಕುಮಾರ್ ಸಮಾಜಸೇವೆ ಹೇಗಿತ್ತು ಗೊತ್ತಾ? - PUNEETH PHILANTHROPIC ACTIVITIES

ಅಮೋಘ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದ ನಗುಮೊಗದ ಒಡೆಯ ಪುನೀತ್ ರಾಜ್​​​ಕುಮಾರ್, ಪರೋಪಕಾರಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು.

Puneeth Philanthropic activities
ಕೋವಿಡ್​​ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿದ್ದ ಪುನೀತ್ ರಾಜ್​​​ಕುಮಾರ್ (ETV Bharat)
author img

By ETV Bharat Entertainment Team

Published : Oct 29, 2024, 5:01 AM IST

ಅಕ್ಟೋಬರ್ 29. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್ ಕುಮಾರ್ ಅವರ ಮೂರನೇ ಪುಣ್ಯತಿಥಿ. ಭಾರತೀಯ ಚಲನಚಿತ್ರರಂಗಕ್ಕೆ 'ರಾಜಕುಮಾರ'ನ ಕೊಡುಗೆ ಅಪಾರ. ಅತ್ಯುತ್ತಮ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ... ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಅಪ್ಪು ಈಗ ನಮ್ಮೊಂದಿಗಿಲ್ಲ ಅನ್ನೋದೇ ನೋವಿನ ಸಂಗತಿ. ಇಂದು ಅವರ ಸ್ಮರಣೆ ಹಲವು ರೀತಿಯಲ್ಲಿ ಜರುಗುತ್ತಿದೆ. ಸಿನಿಮಾ ಎಂಬ ಬಣ್ಣದ ಲೋಕ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ಎತ್ತಿದ ಕೈ ಇವರದ್ದಾಗಿತ್ತು. ಅವುಗಳಲ್ಲಿ ಕೆಲವು ಇಲ್ಲಿವೆ.

ಪುನೀತ್ ರಾಜ್​​​ಕುಮಾರ್ ಸಮಾಜ ಸೇವೆ:

ತಮ್ಮ ಜೀವಿತಾವಧಿಯಲ್ಲಿ ಪರೋಪಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರೂ ಕೂಡಾ ಅದರ ಬಗ್ಗೆ ಮಾತನಾಡಿದ್ದು ತೀರಾ ವಿರಳ. ಆದ್ರೆ ಅವರ ಮಾನವೀಯ ಕಾರ್ಯಗಳ ಸಂಖ್ಯೆ ಮಾತ್ರ ಅಪಾರ. ಸಮಾಜಕ್ಕೆ ತಮ್ಮಿಂದಾಷ್ಟು ಸೇವೆ ಒದಗಿಸಿದ್ದಾರೆ.

ಸಮಾಜ ಕಲ್ಯಾಣ: 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು ಮತ್ತು 19 ಗೋಶಾಲಾಗಳಿಗೆ ಬೆಂಬಲವಾಗಿದ್ದರು. ಹಾಡುಗಳನ್ನು ಹಾಡುವ ಮೂಲಕ ಅವರು ಗಳಿಸಿದ ಹಣವನ್ನು ಚಾರಿಟಿಗಳಿಗೆ ದಾನ ಮಾಡಿದ್ದರು. ಕೆಲ ಕನ್ನಡ ಮಾಧ್ಯಮ ಶಾಲೆಗಳಿಗೆ ಆಗಾಗ್ಗೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದರು.

ಶಕ್ತಿಧಾಮ ಸಂಸ್ಥೆ: ಪುನೀತ್ ರಾಜ್​ಕುಮಾರ್ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಸಂಸ್ಥೆಯ ಆವರಣದಲ್ಲಿ ಆಶ್ರಮ ಶಾಲೆಯನ್ನು ನಿರ್ಮಿಸುವ ಕನಸು ಕಂಡಿದ್ದರು. ಶಾಲೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಿಂದ ಗಳಿಸಿದ ತಮ್ಮ ಸಂಭಾವನೆಯನ್ನು (ರಾಯಲ್ಟಿ) ಶಕ್ತಿಧಾಮದ ಅಭಿವೃದ್ಧಿಗೆ ವಿನಿಯೋಗಿಸಿದರು. ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ತಾಯಿಯೊಂದಿಗೆ ಪರೋಪಕಾರಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 'ಶಕ್ತಿಧಾಮ' ಮೂಲಕ ಸಾವಿರಾರು ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿದ್ದಾರೆ.

ಈ ಚಾರಿಟಿ ಸಂಸ್ಥೆಯು ಹಿಂದುಳಿದ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತದೆ. ಅವರಿಗೆ ಹತ್ತನೇ ತರಗತಿಯವರೆಗೆ ಶಿಕ್ಷಣ ಪೂರೈಸುತ್ತದೆ. ನಂತರ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋರ್ಸ್​​​ಗಳನ್ನು ಆಯ್ಕೆ ಮಾಡಲು ಬೆಂಬಲ ನೀಡುತ್ತದೆ. ಅಷ್ಟೇ ಅಲ್ಲದೇ ಸಂಸ್ಥೆಯು ಅತ್ಯಾಚಾರ ಸಂತ್ರಸ್ತರಿಗೆ, ವೇಶ್ಯಾವಾಟಿಕೆಯಿಂದ ರಕ್ಷಿಸಲ್ಪಟ್ಟವರಿಗೆ, ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದವರಿಗೆ, ಮಾನವ ಕಳ್ಳಸಾಗಣೆಯಿಂದ ನೊಂದವರಿಗೆ ಮತ್ತು ನಿರ್ಗತಿಕರಿಗೆ ಆಶ್ರಯ ನೀಡುತ್ತದೆ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬೋ ನಿಟ್ಟಿನಲ್ಲಿ ಜೀವನ ಕೌಶಲ್ಯ ತರಬೇತಿ ಸಹ ನೀಡಲಾಗುತ್ತದೆ. ರಾಜ್​​​​ಕುಮಾರ್ ಕುಟುಂಬದ ಬೆಂಬಲದೊಂದಿಗೆ ಈ ಸ್ವಯಂಸೇವಾ ಸಂಸ್ಥೆಯಿಂದ ಈವರೆಗೆ 4,000 ಕ್ಕೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಸ್ಕೀಮ್​​: ರಾಜ್ಯ ಸರ್ಕಾರ ಪ್ರಾರಂಭಿಸಿದ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯು ಮೈಸೂರು ಜಿಲ್ಲೆಯಲ್ಲಿ 1,775ಕ್ಕೂ ಹೆಚ್ಚು ಜನರ ಜೀವಗಳನ್ನು ಉಳಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ): ಪುನೀತ್ ರಾಜ್‌ಕುಮಾರ್ ಅವರು 2019ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದರು. ಅವರ ನಿಧನದ ನಂತರ, ಅವರ ಬದ್ಧತೆ ಬಗ್ಗೆ ಹಲವರು ನೆನಪಿಸಿಕೊಂಡರು. ರಾಜ್ಯ ನಡೆಸುವ ಸಂಸ್ಥೆಗಳನ್ನು ಪ್ರತಿನಿಧಿಸಲು ಮತ್ತು ಅದಕ್ಕೆ ಯಾವುದೇ ಸಂಭಾವನೆಯನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿದ್ದರು. ಅವರು ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರನ್ನು ಉತ್ತೇಜಿಸಲು ಬಯಸಿದ್ದರು ಎಂದು ವರದಿಯಾಗಿದೆ. ಸಂಸ್ಥೆಯೊಂದಿಗಿನ ಅವರ ಒಡನಾಟದ ಸಂದರ್ಭ ಅವರು ಬಸ್ ಪ್ರಿಯಾರಿಟಿ ಲೇನ್, ಲೆಸ್​​ ಟ್ರಾಫಿಕ್ ಡೇ ಮತ್ತು ಮಹಿಳೆಯರಿಗೆ ಕಿರುಕುಳದ ವಿರುದ್ಧದ ಅಭಿಯಾನ ಸೇರಿದಂತೆ ಬಿಎಂಟಿಸಿಯ ಹಲವು ಅಭಿಯಾನಗಳನ್ನು ಬೆಂಬಲಿಸಿದ್ದರು.

ಕೋವಿಡ್-19: ಈ ಹಿಂದೆ, ಅದರಲ್ಲೂ 2020 ರಾಷ್ಟ್ರ ಕೋವಿಡ್ ಬಿಕ್ಕಟ್ಟಿನಿಂದ ಬಳಲಿತ್ತು. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಸಹಾಯ ಮಾಡೋ ನಿಟ್ಟಿನಲ್ಲಿ ಪುನೀತ್ ರಾಜ್‌ಕುಮಾರ್ ಅವರು ಕರ್ನಾಟಕ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಜೊತೆಗೆ, 2020 ಮತ್ತು 2021ರ ಉದ್ದಕ್ಕೂ ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರವಾಹ: 2019ರಲ್ಲಿ ಭೀಕರ ಪ್ರವಾಹಕ್ಕೆ ನಲುಗಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸಹಾಯ ಮಾಡಲು ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ಪರಿಹಾರ ನಿಧಿಗೆ 5 ಲಕ್ಷ ರೂ. ದಾನ ಮಾಡಿದ್ದರು.

ಶಿಕ್ಷಣಕ್ಕೆ ಒತ್ತು: ಶಿಕ್ಷಣದ ಮಹತ್ವ ಸಾರಿದ್ದ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​ ಅಗತ್ಯವಿರುವವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ವರದಿಗಳ ಪ್ರಕಾರ, ಒಂದಿಷ್ಟು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಿದ್ದಾರೆ. ರಾಜ್ಯದ ಅನೇಕ ಕನ್ನಡ ಮಾಧ್ಯಮ ಶಾಲೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. 2013ರಲ್ಲಿ, ರಾಜ್ಯ ಸರ್ಕಾರವು ಶಿಕ್ಷಣದ ಹಕ್ಕು (ಆರ್‌ಟಿಇ) ಕೋಟಾದಲ್ಲಿ ಹಲವು ಸೀಟುಗಳು ಖಾಲಿಯಿರುವುದನ್ನು ಅರಿತು, ಪುನೀತ್ ಮತ್ತು ರಾಧಿಕಾ ಪಂಡಿತ್ ಅವರನ್ನು ಬ್ರ್ಯಾಂಡ್​​ ಅಂಬಾಸಿಡರ್‌ಗಳಾಗಿ ಮಾಡಿತ್ತು. ಶಿಕ್ಷಣ, ಕಾನೂನು ಕುರಿತು ಪತ್ರಿಕೆ ಮತ್ತು ಟಿವಿ ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಸರ್ವಶಿಕ್ಷಣ ಅಭಿಯಾನದ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದ ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಆಗಾಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಡ್ರಾಪ್-ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಸಾಕಷ್ಟು ಶ್ರಮಿಸಿದ್ದರು. ಕೌಶಲ್ಯ ಅಭಿವೃದ್ಧಿ ಮಂಡಳಿಯ ಬ್ರ್ಯಾಂಡ್​ ಅಂಬಾಸಿಡರ್ ಆಗಲು ಸಹ ಅವರು ಒಪ್ಪಿಕೊಂಡಿದ್ದರು. ಈ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಂದಿನ ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವಥ್ ನಾರಾಯಣ್​​, ಪುನೀತ್ ರಾಜ್​ಕುಮಾರ್​ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.

ಕೆಎಂಎಫ್​ ಬ್ರ್ಯಾಂಡ್​ ಅಂಬಾಸಿಡರ್: ಅಪ್ಪು ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರ ಹಾದಿಯಲ್ಲಿ ಹೆಜ್ಜೆ ಹಾಕಿದ್ದರು ಎಂಬುದಕ್ಕೆ, ಯಾವುದೇ ಸಂಭಾವನೆ ಸ್ವೀಕರಿಸದೇ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದರು. ಕೆಎಂಎಫ್ ಉತ್ಪನ್ನಗಳನ್ನು ಪುನೀತ್ 10 ವರ್ಷಗಳ ಕಾಲ ಪ್ರಚಾರ ಮಾಡಿದ್ದಾರೆ. ಆದ್ರೆ ಅವರ ಮತ್ತು ಫೆಡರೇಶನ್ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಸಂಭಾವನೆ ಸ್ವೀಕರಿಸದೇ ತಮ್ಮ ಸೇವೆ ಒದಗಿಸಿದ್ದಾರೆ.

ಈ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಾಜಿ ಕೆಎಂಎಫ್ ಎಂಡಿ ಎಎಸ್ ಪ್ರೇಮನಾಥ್, 1990ರ ದಶಕದಲ್ಲಿ ಡಾ.ರಾಜ್‌ಕುಮಾರ್ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದರು. ಪತ್ರಿಕೆಗಳು ಮತ್ತು ದೂರದರ್ಶನದಲ್ಲಿ ಜಾಹೀರಾತು ಕೊಡಲಾಯಿತು. ಆದ್ರೆ ಖ್ಯಾತ ನಟ ಹಣ ತೆಗೆದುಕೊಂಡಿಲ್ಲ. 2006ರಲ್ಲಿ ಅವರ ನಿಧನದ ನಂತರ ಕೆಎಂಎಫ್‌ಗೆ ಕೆಲ ವರ್ಷಗಳ ಕಾಲ ರಾಯಭಾರಿ ಇರಲಿಲ್ಲ. 2011ರಲ್ಲಿ, ನಾನು ಪುನೀತ್ ಅವರನ್ನು ಭೇಟಿಯಾಗಿ ಕೆಎಂಎಫ್ ಅನ್ನು ಬೆಂಬಲಿಸಬಹುದೇ ಎಂದು ಕೇಳಿದೆ. ಅವರು ಆ ತಕ್ಷಣ ಒಪ್ಪಿಕೊಂಡರು. ಇದು ಅಂದಿನ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರ ಐಡಿಯಾ ಕೂಡಾ ಆಗಿತ್ತು ಎಂದು ತಿಳಿಸಿದರು. ಆದ್ರೆ ಅಪ್ಪು ಇಲ್ಲಿ ಯಾವುದೇ ಸಂಭಾವನೆ ಪಡೆದಿಲ್ಲ. ಸಂಭಾವನೆ ಬಗ್ಗೆ ಕೇಳಿದಾಗ, ''ನನ್ನ ತಂದೆ ನಿಮ್ಮ ಉತ್ಪನ್ನಗಳಿಗೆ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಬೆಂಬಲಿಸಿದಾಗ ನಾನೇಗೆ ಹಣಕ್ಕೆ ಬೇಡಿಕೆ ಇಡಲಿ?'' ಎಂದು ಅಪ್ಪು ತಿಳಿಸಿದ್ದರಂತೆ.

ಇದನ್ನೂ ಓದಿ: ರೀ ರಿಲೀಸ್​ನಲ್ಲೂ ಒಳ್ಳೆ ಗಳಿಕೆ ಮಾಡಿದ ಉಪೇಂದ್ರ, ಜಾಕಿ, ರಾಬರ್ಟ್, ಕರಿಯ, ಎ ಸಿನಿಮಾಗಳು - Re Released Movies collection

ಇಲ್ಲಿ ನಾವು ತಿಳಿಸಿರುವುದು ಕೆಲವೇ ಕೆಲ ವಿಷಯಗಳು. ಆದ್ರೆ ಅವರ ಸೇವೆ ಮಾತ್ರ ಅಪಾರ. ಧರ್ಮಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್ ಅವರೀಗ ಆ ಪುಣ್ಯಕಾರ್ಯಗಳನ್ನು ಮುಂದುವರಿಸಿದ್ದಾರೆ. ಅಭಿಮಾನಿಗಳು ಸಹ ಅಪ್ಪು ಹೆಸರಲ್ಲಿ ಸಮಾಜಕ್ಕೆ ಒಳಿತಾಗುವಂತಹ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ. ಪುನೀತ್​ ಹೆಸರಲ್ಲಿ ದೇಗುಲಗಳು ನಿರ್ಮಾಣಗೊಂಡಿರುವುದು ನಿಮಗೆ ತಿಳಿದೇ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.