ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತು ಅವರ ಮಕ್ಕಳು ಆಧ್ಯಾ - ಅಕಿರಾ ಕಳೆದ ಕೆಲ ದಿನಗಳಿಂದ ಟ್ರೋಲ್‌ಗೆ ಒಳಗಾಗಿದ್ದಾರೆ. ರೇಣು ದೇಸಾಯಿ ಅವರೀಗ ಟ್ರೋಲಿಗರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಪ್ರಮಾಣವಚನ ಸಮಾರಂಭದಿಂದ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಮತ್ತು ಮಕ್ಕಳಾದ ಆಧ್ಯಾ - ಅಕಿರಾ ಅವರ ಫೋಟೋಗಳು ವೈರಲ್ ಆದ ನಂತರ ಟ್ರೋಲರ್ಗಳು ರೇಣು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೇವಾ (Anna Lezhneva) ಮತ್ತು ಮಕ್ಕಳು ಆಧ್ಯಾ - ಅಕಿರಾ ಇತ್ತೀಚೆಗೆ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಧ್ಯಾ - ಅಕಿರಾ ಇಬ್ಬರೂ ಪವನ್ ಕಲ್ಯಾಣ್ ಮತ್ತು ಎರಡನೇ ಪತ್ನಿ ರೇಣು ದೇಸಾಯಿ ಅವರ ಮಕ್ಕಳು. ಅನ್ನಾ ಲೆಜ್ನೇವಾ ಜೊತೆ ಪವನ್ ಮತ್ತು ಮಕ್ಕಳ ಫೋಟೋ ವೈರಲ್ ಆಗಿತ್ತು. ಅಂದು ರೇಣು ದೇಸಾಯಿ ಅವರು ಅನ್ನಾ ಲೆಜ್ನೇವಾ ಅವರ ಫೋಟೋವನ್ನು ಕ್ರಾಪ್ ಮಾಡಿ ಉಳಿದ ಮೂವರ (ಮಾಜಿ ಪತಿ, ಮಕ್ಕಳು) ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು ಎಂದು ಹೇಳಲಾಗಿದೆ. ಕ್ರಾಪ್ ಫೋಟೋವನ್ನಿಡು ಟ್ರೋಲಿಗರು ಆಟ ಶುರುಮಾಡಿದ್ದಾರೆ. ರೇಣು ದೇಸಾಯಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಹೇಟ್ ಕಲ್ಚರ್ಗೆ ಪ್ರತಿಕ್ರಿಯಿಸಿರುವ ರೇಣು, ಈ ಮಾನವರೇಗೆ ಸಂವೇದನಾಶೀಲ ಜೀವಿಗಳಾಗಿ ವಿಕಸನಗೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ರೇಣು ದೇಸಾಯಿ ಪೋಸ್ಟ್ ಹೀಗಿದೆ: ರೇಣು ಅವರೇಗೆ ಕ್ರಾಪ್ ಫೋಟೋ ಪೋಸ್ಟ್ ಮಾಡುತ್ತಾರೆ? ಎಂದು ಹಾಸ್ಯ ಚಟಾಕಿ ಹಾರಿಸುವ ನೀವೆಲ್ಲರೂ ಭಯಾನಕ ಸಂವೇದನಾಶೀಲರಹಿತ ಜನರು. ನಿಮಗೂ ಕುಟುಂಬವಿದೆ ಎಂಬುದನ್ನು ನೆನಪಿಡಿ. ಇಂದು ಬೆಳಗ್ಗೆ ನನ್ನ ಮಗಳು ಇನ್ಸ್ಟಾಗ್ರಾಮ್ನಲ್ಲಿ ತಾಯಿಯ ಅಸಹ್ಯ ಟ್ರೋಲ್ (nasty meme) ಪೋಸ್ಟ್ ಕಂಡು ಕಣ್ಣೀರಿಟ್ಟಳು. ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಕುಟುಂಬವನ್ನು ಗೇಲಿ ಮಾಡುವ ನೀವೆಲ್ಲರೂ ನಿಮ್ಮ ಮನೆಯಲ್ಲೂ ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ'' ಎಂದು ಬರೆದುಕೊಂಡಿದ್ದಾರೆ.
"ನೆನಪಿಡಿ, ಇಂದು ನನ್ನ ಮಗಳು ಅನುಭವಿಸಿದ ನೋವು, ಕಣ್ಣೀರು ಕೆಟ್ಟ 'ಕರ್ಮ'ವಾಗಿ ನಿಮ್ಮ ಬಳಿ ಬರಲಿದೆ. ಮೀಮ್ಸ್ ಪೇಜ್ ನಿರ್ವಹಿಸುವ ನೀವೆಲ್ಲರೂ ಭಯಾನಕ ಮನುಷ್ಯರು. ತಾಯಿಯ ಈ ಶಾಪ ನಿಮ್ಮ ಹೆಗಲೇರಲಿದೆ" ಎಂಬುದಾಗಿಯೂ ಬರೆದುಕೊಂಡಿದ್ದಾರೆ.
ವೈರಲ್ ಫೋಟೋದಲ್ಲಿ, ನಟ-ರಾಜಕಾರಣಿ ಪವನ್ ಕಲ್ಯಾಣ್ ಬಿಳಿ ಕುರ್ತಾ-ಪೈಜಾಮ ಧರಿಸಿದ್ದರು. ಪತ್ನಿ ಅನ್ನಾ ಕಾಟನ್ ಸೀರೆಯಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಮಗ ಅಕಿರಾ, ಸಾಂಪ್ರದಾಯಿಕ ಕೆಂಪು ಶರ್ಟ್ ಮತ್ತು ಲುಂಗಿ ಧರಿಸಿದ್ದರು. ಮಗಳು ಆಧ್ಯಾ ಕುರ್ತಾದಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಕರ್ ಸದಸ್ಯರಾಗಲು ರಾಜಮೌಳಿ ದಂಪತಿ ಸೇರಿ ಭಾರತದ ಹಲವರಿಗೆ ಆಹ್ವಾನ - SS Rajamouli got invitation
ಜೂನ್ 12 ರಂದು ಸಿಎಂ ಆಗಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಆಗಿ ಪವನ್ ಕಲ್ಯಾಣ್ ಅವರು ಪ್ರಮಾಣವಚನ ಸ್ವೀಕರಿಸಿದ್ದರು.