ETV Bharat / entertainment

'ಅಮರ್​ ಸಿಂಗ್​ ಚಮ್ಕಿಲಾ' ಚಿತ್ರವನ್ನು ಡೂಡಲ್​ ಮೂಲಕ ಪ್ರಶಂಸಿದ ಅಮೂಲ್​ - Amuls Tribute to Chamkila movie - AMULS TRIBUTE TO CHAMKILA MOVIE

ಅಮೂಲ್​ನ ಡೂಡಲ್​​ನ ಚಿತ್ರವನ್ನು ನಟಿ ಪರಿಣಿತ ಕೂಡ ತಮ್ಮ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

parineeti-chopra-responds-to-amuls-tribute-to-amar-singh-chamkila-starring-diljit-dosanjh-and-her

author img

By ETV Bharat Karnataka Team

Published : Apr 16, 2024, 12:52 PM IST

ಹೈದರಾಬಾದ್​: ನಟ ದಿಲ್ಜೀತ್​ ದೊಸಾಂಜಾ ಮತ್ತು ನಟಿ ಪರಿಣಿತಿ ಚೋಪ್ರಾ ಅಭಿನಯದ 'ಅಮರ್​ ಸಿಂಗ್​ ಚಮ್ಕಿಲಾ' ಸಿನಿಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೆಟ್​ಫ್ಲಿಕ್ಸ್​​ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಚಿತ್ರದ ಸಂಗೀತ ಎಲ್ಲರನ್ನೂ ಸೆಳೆಯುವ ಜೊತೆಗೆ ಕಥೆ ಮತ್ತು ಛಾಯಗ್ರಹಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಕುರಿತು ಪ್ರೇಕ್ಷಕರು ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದು, ವಿಶೇಷವಾಗಿ ಚಿತ್ರದ ನಟ - ನಟಿಗೆ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಪ್ರಖ್ಯಾತ ಅಮೂಲ್​ ಇಂಡಿಯಾ ಡೈರಿ ಕಂಪನಿ ಕೂಡ ಕ್ರಿಯಾತ್ಮಕ ಪೋಸ್ಟರ್​ ಮೂಲಕ ಚಿತ್ರಕ್ಕೆ ಬೆಂಬಲ ನೀಡಿದೆ.

ಅಮೂಲ್​ ಇಂಡಿಯಾ ಇತ್ತೀಚಿಗೆ 'ಅಮರ್​ ಸಿಂಗ್​ ಚಮ್ಕಿಲಾ'ದಲ್ಲಿ ಪರಿಣಿತಿ ಚೋಪ್ರಾ ಮತ್ತು ದಿಲ್ಜೀತ್​ ದೋಸಾಂಜಾ ಅವರ ಪಾತ್ರಗಳನ್ನು ಡೂಡಲ್​​ ಅನ್ನು ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಪೋಸ್ಟರ್​ನಲ್ಲಿ ಈ ಜೋಡಿ ಲೈವ್​ ಪ್ರದರ್ಶನ ನೀಡುತ್ತಿರುವುದರ ಜೊತೆಗೆ ಕೈಯಲ್ಲಿ ಬೆಣ್ಣೆ ಸವರಿದ ಬ್ರೆಡ್​ ಕೈಯಲ್ಲಿಡಿದಿರುವುದು ಕಾಣಬಹುದಾಗಿದೆ. ಈ ಪೋಸ್ಟರ್​​ಗೆ 'ಎಕ್​ ಚಮಚ್​​ ಖಿಲ್​, ಅಮುಲ್​ ಪಂಜಾಬ್​ ದ ಬಟರ್​' ಎಂಬ ಅಡಿ ಬರಹವನ್ನು ನೀಡಲಾಗಿದೆ.

  • " class="align-text-top noRightClick twitterSection" data="">

ಈ ಪೋಸ್ಟರ್​ ಹಂಚಿಕೊಂಡಿರುವ ಡೈರಿ ಬ್ರಾಂಡ್​​​ '#ಅಮಿಲ್​ ಟ್ರೊಪಿಕಲ್​: ಇಮ್ತಿಯಾಜ್​ ಆಲಿ/ ಎಆರ್​ ರೆಹಮಾನ್​ ಮ್ಯೂಸಿಕಲ್​ ಹಿಟ್​ ಸಿನಿಮಾ ಅಮರ್​ ಸಿಂಗ್​ ಚಮ್ಕಿಲಾದಲ್ಲಿ ದಿಲ್ಜೀತ್​ ದೋಸಾಂಜಾ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ' ಎಂದು ಕೂಡ ತಿಳಿಸಿದೆ. ಇದನ್ನು ನಟಿ ಪರಿಣಿತಿ ತಮ್ಮ ಇನ್​​ಸ್ಟಾಗ್ರಾಂನ ಸ್ಟೋರಿಯಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಎರಡು ಹೃದಯಾಕಾರದ ಎಮೋಜಿ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ

ಪಂಜಾಬ್​ನ ಪ್ರಖ್ಯಾತ ಗಾಯಕ ಅಮರ್​ ಸಿಂಗ್​ ಚಮ್ಕಿಲಾ ಜೀವನಾಧರಿತ ಕಥೆ ಇದಾಗಿದ್ದು, ಚಿತ್ರಕ್ಕೆ ಅವರ ಹೆಸರನ್ನೇ ಇಡಲಾಗಿದೆ. 1980ರಲ್ಲಿ ತಮ್ಮ ಅದ್ಬುತ ಸಂಗೀತ ಪ್ರದರ್ಶನದ ಮೂಲಕ ದಾಖಲೆಗಳನ್ನು ಸೃಷ್ಟಿಸಿದ ಗಾಯಕ ಅವರಾಗಿದ್ದಾರೆ. ಅವರ ಬದುಕಿನ ಪ್ರಮುಖ ಘಟನೆಗಳನ್ನು ಸಿನಿಮಾ ರೂಪದಲ್ಲಿ ನಿರ್ದೇಶಕ ಇಮ್ತಿಯಾಜ್​ ಆಲಿ ಕಟ್ಟಿಕೊಡುವ ಯತ್ನ ನಡೆಸಿದ್ದು, ಅವರ ಈ ಪ್ರಯತ್ನಕ್ಕೆ ಸಿನಿತಾರೆಯರು ಮತ್ತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಚಿತ್ರವನ್ನು ಕಾರ್ತಿಕ್​ ಆರ್ಯನ್​, ರಾಜ್​ಕುಮಾರ್​ ರಾವ್​ ಮತ್ತು ತ್ರಿಪ್ತಿ ದಿಮ್ರಿ ಪ್ರಶಂಸಿದ್ದರು.

ನಟ ದಿಲ್ಜೀತ್​ ದೊಸಂಜಾ ಚಮ್ಕಿಲಾ ಪಾತ್ರವನ್ನು ನಿರ್ವಹಿಸಿದ್ದಾರೆ. 1980ರಲ್ಲಿ ಬಡತನದ ನಡುವೆಯು ತಮ್ಮ ಸಂಗೀತದ ಮೂಲಕ ಜಾಗತಿಕ ಮನ್ನಣೆಯನ್ನು ಚಮ್ಕಿಲಾ ಗಳಿಸಿದರು. ಚಮ್ಕಿಲಾ ಹೆಂಡತಿ ಅಮರ್ಜೊತ್​​ ಕೌರ್​ ಪಾತ್ರದಲ್ಲಿ ನಟಿ ಪರಿಣಿತಿ ನಟಿಸಿದ್ದು, ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಏಪ್ರಿಲ್​ 12ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ: ಬನಾರಸ್​ ಸೀರೆಯ ಪ್ರಚಾರದಲ್ಲಿ ರಣವೀರ್ ಸಿಂಗ್, ಕೃತಿ ಸನೋನ್: ಕಾಶಿಘಾಟ್​ನಲ್ಲಿ ರ‍್ಯಾಂಪ್ ವಾಕ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.