ಹೈದರಾಬಾದ್: ನಟಿ ಪರಿಣಿತಿ ಚೋಪ್ರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಬಾಲಿವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬೆಡಗಿಯ ಸಿನಿ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಹಲವು ವರ್ಷಗಳ ಹಿಂದೆ ಬಾಲಿವುಡ್ನಲ್ಲಿ ನಟಿ ಪರಿಣಿತಿ ಹಲವು ಸವಾಲುಗಳನ್ನು ಎದುರಿಸಿದ್ದರು. ಅದು ಆರ್ಥಿಕ ಬಿಕ್ಕಟ್ಟಿನಿಂದ ಪಾತ್ರದ ಕಳೆದುಕೊಳ್ಳುವವರೆಗೆ ಅನೇಕ ಸಮಸ್ಯೆ ಎದುರಿಸಿದರು. ಆಕೆಯ ಇಂದಿನ ಯಶಸ್ಸಿನ ಹಿಂದೆ ಉದ್ಯಮದ ಘೋರ ನೈಜತೆಯು ಇದ್ದು, ನಿಮ್ಮ ಪ್ರತಿಭೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂದು ತೋರಿಸಿದ್ದಾರೆ.
ಮಾಸಿಕ 4 ಲಕ್ಷದ ವೇತನ ಕೊಟ್ಟು ಫಿಟ್ನೆಸ್ ಕೋಚ್: ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಪರಿಣಿತಿ ಬಾಲಿವುಡ್ ಪ್ರವೇಶಕ್ಕೆ ಅನೇಕ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರು. ಪೋಡ್ಕಾಸ್ಟ್ವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ಆರಂಭದಲ್ಲಿ ನನಗೆ ಮಾಸಿಕ 4 ಲಕ್ಷ ವೇತನದ ಫಿಟ್ನೆಸ್ ತರಬೇತುದಾರರು ಮತ್ತು ಪೌಷ್ಟಿಕಾಂಶ ತಜ್ಞರನ್ನು ಹೊಂದುವಂತೆ ಸಲಹೆ ನೀಡಲಾಗಿತ್ತು. ಮೊದಲ ಸಿನಿಮಾಕ್ಕೆ 5 ಲಕ್ಷ ಪಡೆದ ನನಗೆ ಅಷ್ಟು ದುಬಾರಿ ಸಲಹೆ ಭಾರವಾಗಿತ್ತು.
ನಾನು ತುಂಬಾ ಸರಳ, ಮಧ್ಯಮ ವರ್ಗದ ಹುಡುಗಿ. ನನಗೆ ನಿಜವಾಗಿಯೂ ಬಾಲಿವುಡ್ ಅರ್ಥವಾಗಿಲ್ಲ. ಬೇರೆಯವರು ಹೊಂದಿರುವಂತೆ ನನಗೆ ಇಲ್ಲಿ ಸ್ನೇಹಿತರ ಸಂಪರ್ಕವಿಲ್ಲ, ನನ್ನ ಬಗ್ಗೆ ತಿಳಿದಿರುವವರೇ ನನ್ನ ಬಗ್ಗೆ ಒಂದು ತೀರ್ಮಾನ ನೀಡುತ್ತಿದ್ದರು. ಇನ್ನು ತಮ್ಮ ಸಹ ನಟನೊಂದಿಗೆ ಆದ ಅನುಭವ ಹಂಚಿಕೊಂಡ ಅವರು, ನಾನು ಇಷ್ಟು ದುಬಾರಿಯಾದುದನ್ನು ಪಡೆಯಲು ಸಾಧ್ಯವಿಲ್ಲ ಎಂದು ಆತನಿಗೆ ತಿಳಿಸಿದೆ. ಅದಕ್ಕೆ ಪ್ರತಿಯಾಗಿ, ನಿನಗೆ ಸಾಧ್ಯವಿಲ್ಲ ಎಂದರೆ, ಈ ವೃತ್ತಿಗೆ ಬರಬಾರದು ಎಂದು ಮುಖಕ್ಕೆ ಹೊಡೆದಂತೆ ತಿಳಿಸಿದರು ಎಂದು ನೆನಪಿಸಿಕೊಂಡರು.
ಪಾತ್ರ ತಪ್ಪಿಸಿದರು: ಬಾಲಿವುಡ್ ಮಂದಿಯಂತೆ ಸಾಮಾಜೀಕರಣದ ಸಂಸ್ಕೃತಿಗೆ ಒಗ್ಗಿಕೊಳ್ಳದ ನನಗೆ ಅವಕಾಶಗಳು ತಪ್ಪಿದವು ಎಂದು ಕೂಡ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಕಳೆದ ಪ್ರಾಜೆಕ್ಟ್ನಲ್ಲಿ ನಾನು ಪಾರ್ಟಿ ಅಥವಾ ಇತರ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಇದೆ ಕಾರಣದಿಂದ ನನ್ನ ಪಾತ್ರ ಕಳೆದುಕೊಂಡೆ. ನಾನು ಅವಕಾಶಕ್ಕಾಗಿ ಊಟ ಅಥವಾ ಪಾರ್ಟಿಗೆ ಹೋಗುವುದಿಲ್ಲ. ನನ್ನ ಪ್ರತಿಭೆ ಮತ್ತು ಕಠಿಣ ಶ್ರಮ ನೋಡಿ ನಿರ್ದೇಶಕರು ಮತ್ತು ನಿರ್ಮಾಪಕರು ನನಗೆ ಪಾತ್ರ ನೀಡುತ್ತಾರೆ ಹೊರತು ಪಾರ್ಟಿಯಲ್ಲಿ ನಾನಿದ್ದೇನೆ ಎಂಬ ಕಾರಣಕ್ಕೆ ನೀಡುವುದಿಲ್ಲ ಎಂಬುದು ನನ್ನ ನಂಬಿಕೆ ಎಂದರು.
ನನ್ನ ನೇರ ವ್ಯಕ್ತಿತ್ವವೂ ನನಗೆ ಅನೇಕ ಬಾರಿ ನನ್ನ ಪರವಾಗಿ ಕೆಲಸ ಮಾಡಿಲ್ಲ. ನಾನು ಜನರೊಂದಿಗೆ ಬೆರೆಯುವುದಿಲ್ಲ ಎಂಬ ಕಾರಣಕ್ಕೆ ನಾನು ಪಾತ್ರ ಕಳೆದುಕೊಂಡೆ. ಬಾಲಿವುಡ್ನಲ್ಲಿ ಸರಿಯಾಗಿ ಕ್ಲಿಕ್ ಆಗಲು ಅನೇಕ ಬಾರಿ ಪ್ರತಿಭೆಗಿಂತ ಇದು ಮುಖ್ಯವಾಗಿತ್ತದೆ ಎಂದಿದ್ದಾರೆ.
ಬಾಲಿವುಡ್ನಲ್ಲಿನ ಲಾಬಿ: ಬಾಲಿವುಡ್ನಲ್ಲಿ ಲಾಬಿ ಕುರಿತು ಮಾತನಾಡಿದ ನಟಿ, ಅನೇಕ ಬಾರಿ ನಿಮ್ಮ ಪಾತ್ರಗಳು ನಿಮ್ಮ ನಟನೆ ಮತ್ತು ಪ್ರತಿಭೆ ಮೇಲೆ ಆಧಾರವಾಗಿರುವುದಿಲ್ಲ. ನೀವು ಸರಿಯಾದ ಸ್ನೇಹಿತರ ಬಳಗವನ್ನು ಹೊಂದಿರಬೇಕು. ಬಾಲಿವುಡ್ ಹೆಚ್ಚಿನ ಆಟವಾಡುವ ಕ್ಷೇತ್ರವಾಗಿದೆ. ಇಲ್ಲಿ ಎಲ್ಲರಿಗೂ ಸಂಪರ್ಕಗಳ ಹೊರತಾಗಿ ಸಮ ಪ್ರಮಾಣದ ಅವಕಾಶಗಳು ಲಭ್ಯವಿದೆ. ಈ ಬಾಲಿವುಡ್ ಲಾಬಿಯನ್ನು ನಾನು ಮುರಿಯಬೇಕು. ನಟರಂತೆ ನನಗೂ ಅವಕಾಶ ಸಿಕ್ಕಿದೆ ಎಂದರು.
ಪ್ರತಿಭೆ ಗುರುತಿಸುವ ನಿರ್ದೇಶಕರಿಗೆ ಧನ್ಯವಾದ: ಅನೇಕ ಅಡೆತಡೆ ನಡುವೆ, ಪರಿಣಿಗೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಂಡು, ತಮ್ಮ ಕಾರ್ಯಕ್ಕೆ ಮೆಚ್ಚುಗೆ ಪಡೆದಿದ್ದಾರೆ. ಸಂದೀಪ್ ಔರ್ ಪಿಂಕಿ ಫರಾರ್ ಮತ್ತು ಅಮರ್ ಸಿಂಗ್ ಚಮ್ಕಿಲಾ ಸಿನಿಮಾ ಮೂಲಕ ನಿರ್ದೇಶಕಾರ ದಿಬಕರ್ ಬ್ಯಾನರ್ಜಿ ಮತ್ತು ಇಮ್ತಿಯಾಜ್ ಆಲಿ ನಟಿಯಲ್ಲಿನ ನಟನಾ ಕೌಶ್ಯಲ ಹೊರ ತೆಗೆದಿದ್ದಾರೆ.
ದಿಬಕರ್ ಬ್ಯಾನರ್ಜಿ ಮತ್ತು ಇಮ್ತಿಯಾಜ್ ಸರ್ನಂತವರನ್ನು ಎಲ್ಲಾ ಕಡೆ, ಪ್ರತಿನಿತ್ಯ ಕಾಣಲು ಸಾಧ್ಯವಿಲ್ಲ. ಅವರು ನನ್ನ ಕೆಲಸಕ್ಕಾಗಿ ಪಾತ್ರ ನೀಡಿದರೆ ಹೊರತು, ನನ್ನ ಹಿಂದಿನ ಸಿನಿಮಾ ಪ್ರದರ್ಶನಕ್ಕೆ ಅಲ್ಲ. ನನ್ನ ಎರಡು ಹಿಂದಿನ ಸಿನಿಮಾ ಸೋತಿದ್ದರೂ, ಅವುಗಳನ್ನು ಅವರು ಪರಿಗಣಿಸಲಿಲ್ಲ. ಅವರು ನನ್ನ ಪ್ರತಿಭೆ ಬಗ್ಗೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಭವಿಷ್ಯದಲ್ಲಿ ಮತ್ತಷ್ಟು ಪ್ರತಿಭಾನಿತ್ವ ಪ್ರದರ್ಶನದತ್ತ ಎದುರು ನೋಡುತ್ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ನೀಲ್ ಬರೆದ 'ಬಘೀರ' ಕಥೆ ಕಣ್ಮುಚ್ಚಿ ಒಪ್ಪಿಕೊಂಡೆ: ನಟ ಶ್ರೀಮುರಳಿ