ETV Bharat / entertainment

'ಒಂದು ಸರಳ ಪ್ರೇಮಕಥೆ' ಪ್ರೀ-ರಿಲೀಸ್ ಈವೆಂಟ್​​: ವಿನಯ್ ರಾಜ್​​ಕುಮಾರ್ ಸಿನಿಮಾಗೆ ದೊಡ್ಮನೆ ಸಾಥ್ - Ondhu Sarala Prema Kathe

ಬಹುನಿರೀಕ್ಷಿತ ಸಿನಿಮಾ 'ಒಂದು ಸರಳ ಪ್ರೇಮಕಥೆ'ಯ ಪ್ರೀ-ರಿಲೀಸ್ ಈವೆಂಟ್​​ ಅದ್ಧೂರಿಯಾಗಿ ನಡೆಯಿತು.

Ondhu Sarala Prema Kathe
ಒಂದು ಸರಳ ಪ್ರೇಮಕಥೆ
author img

By ETV Bharat Karnataka Team

Published : Feb 8, 2024, 1:38 PM IST

ಒಂದು ಸರಳ ಪ್ರೇಮಕಥೆ

ನಟ ವಿನಯ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬೋದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ 'ಒಂದು ಸರಳ ಪ್ರೇಮಕಥೆ'. ಗ್ಲಿಂಪ್ಸ್, ಹಾಡುಗಳಿಂದ ಸಿನಿಪ್ರಿಯರಲ್ಲಿ ಕೌತುಕ ಮೂಡಿಸಿರೋ ಒಂದು ಸರಳ ಪ್ರೇಮಕಥೆ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ, ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಚಿತ್ರದ ಪ್ರೀ-ರಿಲೀಸ್ ಈವೆಂಟ್​​ ನಡೆಯಿತು. ಕಾರ್ಯಕ್ರಮಕ್ಕೆ ದೊಡ್ಮನೆಯಿಂದ ಹಲವು ಗಣ್ಯರು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್​​​ಕುಮಾರ್​, ರಾಘವೇಂದ್ರ ರಾಜ್​​ಕುಮಾರ್ ಹಾಗೂ ಅವರ ಪತ್ನಿ, ವಿನಯ್ ಸಹೋದರ ಯುವ ರಾಜ್​​​ಮಾರ್, ಶ್ರೀಮುರಳಿ, ಧೀರೆನ್ ರಾಮ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ನಟ ಶ್ರೀಮುರಳಿ ಮಾತನಾಡಿ, ಒಂದು ಸರಳ ಪ್ರೇಮಕಥೆಯಲ್ಲಿ ವಿನು ಬಹಳ ಚೆನ್ನಾಗಿ ಕಾಣಿಸಿದ್ದಾರೆ. ವಿನು ಕ್ಯಾರೆಕ್ಟರ್ ಬಿಟ್ಟು ಕಿಂಚಿತ್ತೂ ಅಲ್ಲಾಡದೇ, ಪಾತ್ರವನ್ನು ಬಹಳ ತೂಕದಿಂದ, ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಈ ಬಗ್ಗೆ ಹೆಮ್ಮೆ ಇದೆ. ಚಿತ್ರದಲ್ಲಿ ಪ್ರತೀ ಪಾತ್ರಗಳೂ ಅಚ್ಚುಕಟ್ಟಾಗಿ ಕಾಣಿಸಿದ್ದಾರೆ. ಇಬ್ಬರು ಹೀರೋಯಿನ್​ಗಳೂ ಬಹಳ ಮುದ್ದಾಗಿ ಕಾಣಿಸಿದ್ದಾರೆ. ಸುನಿ ಅವರ ಮೇಕಿಂಗ್ ಸ್ಟೈಲ್ ಸೂಪರ್. ಅವರು ಚೆನ್ನಾಗಿ ಪ್ರಿಪೇರ್ ಆಗ್ತಾರೆ. ಅವರು ಹೀರೋನಾ ಪ್ರೀತಿಸ್ತಾರೆ. ಆಗ ಸಿನಿಮಾ ಚೆನ್ನಾಗಿ ಮೂಡಿ ಬರುತ್ತದೆ. ನಾಳೆ ಚಿತ್ರ ಬಿಡುಗಡೆಯಾಗುತ್ತಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ನಟ ವಿನಯ್ ರಾಜ್​ಕುಮಾರ್ ಮಾತನಾಡಿ, ಕಳೆದೊಂದು ವಾರದಿಂದ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಕಷ್ಟು ಪ್ರೀತಿ ಸ್ವೀಕರಿಸಿದ್ದೇವೆ. ಶೂಟಿಂಗ್ ನಂತರ ಎಲ್ಲರನ್ನೂ ನೋಡುತ್ತಿದ್ದೇನೆ. ಖುಷಿಯಾಗುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದರೆ ನನಗೆ ಬಹಳ ಇಷ್ಟ. ಮನಸಿಗೆ ಸಾಕಷ್ಟು ಸಮಾಧಾನ ಕೊಡುತ್ತದೆ. ಖುಷಿ, ತೃಪ್ತಿ ಸಿಗುತ್ತದೆ. ಅತಿಶಯ ಪಾತ್ರ ಪ್ಲೇ ಮಾಡಲು ತುಂಬಾ ಖುಷಿಕೊಡ್ತು ಎಂದು ಹರ್ಷ ಹಂಚಿಕೊಂಡರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಮ್ಮ ಸಿನಿಮಾಗೆ ಹಾರೈಸಲು ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಶ್ವಿನಿ ಮೇಡಂ ಸಿನಿಮಾ ಸೆಟ್​ಗೆ ಬಂದಿದ್ರಿ, ಸಾಂಗ್ ರಿಲೀಸ್ ಮಾಡಿಕೊಟ್ರಿ, ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮ ಜೊತೆಗೆ ಇರೋದಿಕ್ಕೆ ಧನ್ಯವಾದಗಳು. ಒಂದು ಸರಳ ಪ್ರೇಮಕಥೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ರಿಜಿಸ್ಟ್ರಾರ್ ಮಾಡಿದ ಟೈಟಲ್. ನಾಳೆ ನಮ್ಮ ಸಿನಿಮಾ ನಿಮ್ಮ ಎದುರು ಬರಲಿದೆ, ನಿಮ್ಮ ಬೆಂಬಲ ಹಾರೈಕೆ ಇರಲಿ ಎಂದು ತಿಳಿಸಿದರು.

ನಾಯಕಿ ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ಒಂದು ಸರಳ ಪ್ರೇಮ ಕಥೆ ನನ್ನ ಮೊದಲ ಕನ್ನಡ ಸಿನಿಮಾ. ತುಂಬಾ ಖುಷಿಯಾಗುತ್ತಿದೆ. ನಾನು ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದೇನೆ. ರಿಯಲ್ ಲೈಫ್​​ನಲ್ಲಿ ನಾನು ಜರ್ನಲಿಸಂ ಸ್ಟೂಡೆಂಟ್. ಸುನಿ ಸರ್, ವಿನಯ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್. ನಿಮ್ಮ ಕುಟುಂಬದ ಜೊತೆ ಸಿನಿಮಾ ನೋಡಿ. ನಿಮಗೆ ಖಂಡಿತ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಕನ್ನಡ ಹುಡುಗಿಯನ್ನು ಬಿಟ್ಟುಕೊಂಡುವುದಿಲ್ಲ ಅಂತಾ ಗೊತ್ತು. ನಿಮ್ಮ ಬೆಂಬಲ ಬೇಕು ಎಂದು ಕೇಳಿಕೊಂಡರು.

ಇದನ್ನೂ ಓದಿ: 'ಕಪ್ಪು ಬಿಳುಪಿನ ನಡುವೆ': ಇದು ವಿಭಿನ್ನ ಹಾರರ್ ಸಿನಿಮಾ

ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ವಿನಯ್ ರಾಜ್​​ಕು​ಮಾರ್ ನಾಯಕನಾಗಿ, 'ರಾಧಾ ಕೃಷ್ಣ' ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್, ಸ್ವಾತಿಷ್ಠ ಕೃಷ್ಣನ್ ನಾಯಕಿಯರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್​​ಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಸೇರಿದಂತೆ ಹಲವರಿದ್ದಾರೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ರಾಮ್ ಮೂವೀಸ್ ಬ್ಯಾನರ್ ಅಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ. ನಾಳೆ ಈ ಸಿನಿಮಾ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: 'ಗಾಡ್ ಪ್ರಾಮಿಸ್' ನಿರ್ದೇಶಿಸಲಿದ್ದಾರೆ 'ಕಾಂತಾರ'ದ ಫಾರೆಸ್ಟ್ ಗಾರ್ಡ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.