ETV Bharat / entertainment

'ಫಾರೆಸ್ಟ್' ಸಿನಿಮಾ ಸಾಂಗ್​ನಲ್ಲಿ ಸಖತ್ ಸ್ಟೆಪ್ ಹಾಕಿದ ಚಿಕ್ಕಣ್ಣ, ರಂಗಾಯಣ ರಘು - FOREST MOVIE SONG - FOREST MOVIE SONG

'ಕಾಡಿನ ಕಥೆ' ಆಧರಿಸಿದ 'ಫಾರೆಸ್ಟ್' ಚಿತ್ರದಿಂದ ಓಡೋ ಓಡೋ ಹಾಡು ಅನಾವರಣಗೊಂಡಿದೆ.

Forest Movie team
'ಫಾರೆಸ್ಟ್' ಚಿತ್ರತಂಡ (ETV Bharat)
author img

By ETV Bharat Karnataka Team

Published : Jul 6, 2024, 9:13 AM IST

ಸ್ಯಾಂಡಲ್​ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಸ್ನೇಹಿತರು ಜೊತೆಗೂಡಿ ಸಿನಿಪ್ರಿಯರಿಗೆ 'ಕಾಡಿನ ಕಥೆ' ಹೇಳೋಕೆ ಬರುತ್ತಿದ್ದಾರೆ. ಶೇಕಡ 80ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ 'ಫಾರೆಸ್ಟ್' ಎಂದೇ ಹೆಸರಿಡಲಾಗಿದೆ. ಈ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಅನಾವರಣಗೊಂಡಿದೆ.

ಓಡೋ ಓಡೋ ಎಂದು ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿಯಾಗಿ ಪದ ಪೊಣಿಸಿದ್ದಾರೆ. ಖ್ಯಾತ ಗಾಯಕ ಕೈಲಾಸ್ ಖೇರ್ ಹಾಗೂ ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮ ವಿಶ್ ಹಾಡಿಗೆ ಸಂಗೀತ ನೀಡಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ, ರಂಗಾಯಣ ರಘು, ಫಸ್ಟ್ ರ್ಯಾಂಕ್ ರಾಜು, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಸೇರಿ ಒಟ್ಟಿಗೆ ಸ್ಟೆಪ್ ಹಾಕಿದ್ದಾರೆ.

ಈ ಹಿಂದೆ ಡಬಲ್ ಇಂಜಿನ್, ಬಾಂಬೆ ಮಿಠಾಯಿ ಬ್ರಹ್ಮಚಾರಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾ. ಹಿರಿಯ ನಟ ಅವಿನಾಶ್, ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್ ರೈ ಪಣಾಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಎಲ್ಲವೂ 'ಪೌಡರ್'ಮಯ ಅಂತಿದ್ದಾರೆ ದೂದ್ ಪೇಡಾ ದಿಗಂತ್: ಚಿತ್ರದ ಮೊದಲ ಗೀತೆ ಅನಾವರಣ - POWDER MOVIE

ಫಾರೆಸ್ಟ್ ಸಿನಿಮಾಗೆ ಎನ್.ಎಂ.ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ. ರವಿಕುಮಾರ್ ಅವರ ಕ್ಯಾಮರಾ ಕೈಳಚಕವಿರಲಿದೆ. ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬಿಡುಗಡೆ ತಯಾರಿಯಲ್ಲಿ ಬ್ಯುಸಿಯಾಗಿದೆ. ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ 'ಫಾರೆಸ್ಟ್' ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಪ್ಲ್ಯಾನ್​ ಹಾಕಿಕೊಂಡಿದೆ.

ಇದನ್ನೂ ಓದಿ: ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ ವಾಪಸ್ ಕೊಟ್ಟಿದ್ದೇನಷ್ಟೇ: ವಿಚಾರಣೆ ಬಳಿಕ ಮೋಹನ್ ರಾಜ್ - Mohan Raj On Darshan Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.