ಒಡಿಶಾದ ಭುವನೇಶ್ವರದಲ್ಲಿರುವ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯದ 19ರ ಹರೆಯದ ವಿದ್ಯಾರ್ಥಿನಿ ತ್ರಿಷ್ಣಾ ರೇ (Trishna Ray) 2024ರ ಮಿಸ್ ಟೀನ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಇದೊಂದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
ನವೆಂಬರ್ 1 ರಿಂದ 9ರ ವರೆಗೆ ದಕ್ಷಿಣ ಆಫ್ರಿಕಾದ ಕಿಂಬರ್ಲಿಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಇದಾಗಿತ್ತು. ಪೆರು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಕೀನ್ಯಾ, ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 10 ಫೈನಲಿಸ್ಟ್‌ಗಳು ಸ್ಪರ್ಧಿಸಿದ್ದರು. ಈ ಪ್ರತಿಭಾನ್ವಿತ ಸ್ಪರ್ಧಿಗಳ ಗುಂಪಿನಲ್ಲಿ, ತ್ರಿಷ್ಣಾ ರೇ ಅವರ ಪ್ರತಿಭೆ ಮತ್ತು ಸೌಂದರ್ಯದಿಂದ ಪ್ರತಿಷ್ಠಿತ ಕಿರೀಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಯಿತು. ಪೆರು ರಾಷ್ಟ್ರದ ಆನ್ನೆ ಥಾರ್ಸೆನ್ ಮತ್ತು ನಮೀಬಿಯಾದ ಪ್ರೆಶಿಯಸ್ ಆಂಡ್ರೆವ್ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
Congratulate #Odisha’s Trishna Ray on being crowned Miss Teen Universe 2024 in Kimberley, South Africa. May she scale new heights in her career and make our state proud. Wish her the best for the future. pic.twitter.com/xkqRa9FhGe
— Naveen Patnaik (@Naveen_Odisha) November 12, 2024
ಕೆ.ಐ.ಐ.ಟಿ ವಿಶ್ವವಿದ್ಯಾನಿಲಯದಲ್ಲಿ ಫ್ಯಾಷನ್ ತಂತ್ರಜ್ಞಾನ ವಿದ್ಯಾಭ್ಯಾಸ ಪಡೆಯುತ್ತಿರುವ ತ್ರಿಷ್ಣಾ ರೇ, ಕರ್ನಲ್ ದಿಲ್ಲಿಪ್ ಕುಮಾರ್ ರೇ ಮತ್ತು ರಾಜಶ್ರೀ ರೇ ದಂಪತಿಯ ಪುತ್ರಿ. ಈ ಸಾಧನೆ ಅಷ್ಟು ಸುಲಭವಾಗಿರಲಿಲ್ಲ. ಅವರ ಪಯಣ ಅಡೆತಡೆಗಳಿಲ್ಲದೇ ಏನು ಸಾಗಲಿಲ್ಲ. ವೀಸಾ ಸಮಸ್ಯೆಯಿಂದಾಗಿ ಕೊಲಂಬಿಯಾ ಮತ್ತು ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ಕಳೆದುಕೊಂಡಿರುವುದು ಸೇರಿದಂತೆ ಈ ಹಿಂದೆ ಕೆಲ ಸವಾಲುಗಳನ್ನು ಎದುರಿಸಿಯೇ ಈ ಹಂತ ತಲುಪಿದ್ದಾರೆ. ಸಾಧಿಸಬೇಕೆಂಬ ಹಠ, ಪರಿಶ್ರಮ ಹಿನ್ನೆಲೆ, ಫೈನಲಿ ದಕ್ಷಿಣ ಆಫ್ರಿಕಾದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ: ಭೀಮನ ಮೊಮ್ಮಗನ ಕಥೆ 'ಬಾರ್ಬರಿಕ್'
ಮಿಸ್ ಟೀನ್ ಯೂನಿವರ್ಸ್ 2024 ಗೆಲುವಿಗೆ ಭಾಜನರಾದ ಬೆನ್ನಲ್ಲೇ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಡಾ. ಅಚ್ಯುತ ಸಮಂತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ''ತ್ರಿಷ್ಣಾ ರೇ ಅವರ ನಿರ್ಣಯ ಮತ್ತು ಸ್ಥಿತಿಸ್ಥಾಪಕತ್ವವು ಅವರನ್ನು ಹೇಗೆ ವಿಶೇಷವಾಗಿ ಅರ್ಥಪೂರ್ಣಗೊಳಿಸಿತು ಎಂಬುದನ್ನು ತೋರಿಸುತ್ತದೆ'' ಎಂದು ತಿಳಿಸಿದ್ದಾರೆ. ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ತಿಳಿಸಿದ್ದಾರೆ. "ದಕ್ಷಿಣ ಆಫ್ರಿಕಾದ ಕಿಂಬರ್ಲಿಯಲ್ಲಿ 2024ರ ಮಿಸ್ ಟೀನ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಒಡಿಶಾದ ತ್ರಿಷ್ಣಾ ರೇ ಅವರಿಗೆ ಅಭಿನಂದನೆಗಳು. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕ್ಷಣ ತಂದುಕೊಡಲಿ. ಅವರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Watch: 'ಮರ್ಯಾದೆ ಪ್ರಶ್ನೆ' ಸಿನಿಮಾಗೆ ಸುದೀಪ್ ಸಪೋರ್ಟ್, ಏನಂದ್ರು ಕಿಚ್ಚ?
ಕಳೆದ ವರ್ಷ ಏಪ್ರಿಲ್ 13 ರಂದು ಮಿಸ್ ಟೀನ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ನಂತರ ಈ ಪ್ರತಿಷ್ಠಿತ ವಿಜಯಕ್ಕೆ ಸಾಕ್ಷಿಯಾಗಿದ್ದಾರೆ. ಕೆಐಐಟಿ ವಿಶ್ವವಿದ್ಯಾನಿಲಯ ತನ್ನ ವೆಬ್‌ಸೈಟ್‌ನಲ್ಲಿ ಅಭಿನಂದನಾ ಪೋಸ್ಟ್ ಹಂಚಿಕೊಂಡಿದೆ. ಹಲವು ಸವಾಲುಗಳನ್ನು ಮೆಟ್ಟಿ, ಸದ್ಯ ಒಡಿಶಾ ಮತ್ತು ಭಾರತ ಹೆಮ್ಮೆ ಪಡುವ ಕ್ಷಣವನ್ನು ಸೃಷ್ಟಿಸಿದ್ದಾರೆ.