ETV Bharat / entertainment

ಖ್ಯಾತ ಚಲನಚಿತ್ರ ನಿರ್ಮಾಪಕ ಸಂಗೀತ್ ಶಿವನ್ ನಿಧನ: ಗಣ್ಯರಿಂದ ಕಂಬನಿ - Sangeeth Sivan Passes Away - SANGEETH SIVAN PASSES AWAY

ಮಲಯಾಳಂ ಬ್ಲಾಕ್‌ಬಾಸ್ಟರ್ ಯೋದ್ಧ ಮತ್ತು ಹಿಂದಿ ಹಿಟ್‌ಗಳಾದ ಕ್ಯಾ ಕೂಲ್ ಹೇ ಹಮ್ ಮತ್ತು ಅಪ್ನಾ ಸಪ್ನಾ ಮನಿ ಮನಿ ಸಿನಿಮಾಕ್ಕೆ ಹೆಸರುವಾಸಿಯಾದ ಸಂಗೀತ್ ಶಿವನ್ ಅವರು ಹೃದಯ ಸ್ತಂಭನದಿಂದ ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಳೆ ಮುಂಬೈನಲ್ಲಿ ಸಂಗೀತ್ ಅವರ ಅಂತ್ಯಕ್ರಿಯೆ ನಡೆಯಲಿದೆ.

Sangeeth Sivan
ಸಂಗೀತ್ ಶಿವನ್ (ETV Bharat)
author img

By ETV Bharat Karnataka Team

Published : May 8, 2024, 10:47 PM IST

ಮುಂಬೈ : ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂಗೀತ್ ಶಿವನ್ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಉದ್ಯಮದ ಒಳಗಿನವರು ಬುಧವಾರ ಮಾಹಿತಿ ಹಂಚಿಕೊಂಡಿದ್ದಾರೆ. ಮಲಯಾಳಂ ಮತ್ತು ಹಿಂದಿಯಲ್ಲಿ ಮೂರು ದಶಕಗಳ ವೃತ್ತಿಜೀವನದಲ್ಲಿ ಶಿವನ್​ 20 ಚಿತ್ರಗಳನ್ನು ಮಾಡಿದ್ದಾರೆ. ಹೃದಯಾಘಾತದಿಂದ ಸಂಗೀತ್ ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ.

ಅವರ ಸಹೋದರ ಮತ್ತು ಸಿನಿಮಾಟೋಗ್ರಾಫರ್ ಸಂತೋಷ್ ಶಿವನ್ ಅವರು ಸಂಗೀತ್ ಅವರ ನಿಧನವನ್ನು ಸುದ್ದಿವಾಹಿನಿಗೆ ಖಚಿತಪಡಿಸಿದ್ದಾರೆ. ಸಂಗೀತ್ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಂತೋಷ್ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ ಓಶಿವಾರಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಶಿವನ್ ಅವರ ಮೂವರು ಪುತ್ರರಲ್ಲಿ ಹಿರಿಯರಾದ ಸಂಗೀತ್ ಅವರು 1990 ರಲ್ಲಿ ರಘುವರನ್ ಮತ್ತು ಊರ್ವಶಿಯನ್ನು ಒಳಗೊಂಡ ಮಲಯಾಳಂ ಚಲನಚಿತ್ರ ವ್ಯೂಹಂ ಮೂಲಕ ತಮ್ಮ ನಿರ್ದೇಶನದ ಪ್ರಯಾಣ ಪ್ರಾರಂಭಿಸಿದರು. ಮಲಯಾಳಂ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಶಿವನ್, ಕ್ಯಾ ಕೂಲ್ ಹೈ ಹಮ್, ಅಪ್ನಾ ಸಪ್ನಾ ಮನಿ ಮನಿ, ಮತ್ತು ಯಮ್ಲಾ ಪಗ್ಲಾ ದೀವಾನಾ 2 ನಂತಹ ಗಮನಾರ್ಹ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾವು ಮೂಡಿಸಿದ್ದರು. ಅವರ ಮಲಯಾಳಂ ಸಂಗ್ರಹಗಳಲ್ಲಿ ಯೋದ್ಧ, ಗಂಧರ್ವಂ ಮತ್ತು ನಿರ್ಣಯಂನಂತಹ ಶ್ರೇಷ್ಠ ಚಿತ್ರಗಳಿವೆ.

ಅವರ ನಿಧನದ ಸುದ್ದಿಯು ಶ್ರದ್ಧಾಂಜಲಿಗಳ ಮಹಾಪೂರವನ್ನು ಹರಿಸಿದೆ. ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದರೆ, ಬಾಲಿವುಡ್ ನಟರಾದ ರಿತೇಶ್ ದೇಶ್‌ಮುಖ್ ಮತ್ತು ತುಷಾರ್ ಕಪೂರ್ ತಮ್ಮ ದುಃಖವನ್ನು ವ್ಯಕ್ತಪಡಿಸಿದವರಲ್ಲಿ ಮೊದಲಿಗರು. ದೇಶಮುಖ್ ಅವರು ಉದ್ಯಮದಲ್ಲಿ ಅವರ ಆರಂಭಿಕ ದಿನಗಳಲ್ಲಿ ಶಿವನ್ ಅವರ ಬೆಂಬಲವನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಆದರೆ, ಕಪೂರ್ ಅವರನ್ನು ಮಾರ್ಗದರ್ಶಿ ಮತ್ತು ಅವರ ಹಾಸ್ಯ ಚೊಚ್ಚಲ ಹಿಂದಿನ ಶಕ್ತಿ ಎಂದು ಮನ್ನಣೆ ನೀಡಿದರು.

ಇದನ್ನೂ ಓದಿ : 'ಟೈಟಾನಿಕ್' ಚಿತ್ರದ ಕ್ಯಾಪ್ಟನ್​ ಬರ್ನಾರ್ಡ್ ಹಿಲ್ ಇನ್ನಿಲ್ಲ - Bernard Hill

ETV Bharat Logo

Copyright © 2025 Ushodaya Enterprises Pvt. Ltd., All Rights Reserved.