ETV Bharat / entertainment

ನಾಟ್ ಔಟ್: ಫಸ್ಟ್ ಹಾಫ್ ಫ್ರೀಯಾಗಿ ವೀಕ್ಷಿಸಿ, ಸೆಕೆಂಡ್​ ಹಾಫ್​​​ ನೋಡೋ ನಿರ್ಧಾರ ನಿಮಗೆ ಬಿಟ್ಟದ್ದು! - Not Out Free Ticket - NOT OUT FREE TICKET

'ನಾಟ್ ಔಟ್' ಚಿತ್ರದ ಫಸ್ಟ್ ಹಾಫ್​​ ಅನ್ನು ಫ್ರೀಯಾಗಿ ವೀಕ್ಷಿಸಿ, ಸೆಕೆಂಡ್​ ಹಾಫ್​​​ ಅನ್ನು ನೋಡಬೇಕೋ? ಅಥವಾ ಬೇಡವೋ? ಎಂಬ ನಿರ್ಧಾರವನ್ನು ನೀವು ಮಾಡುವ ಅವಕಾಶವನ್ನು ಚಿತ್ರತಂಡ ನೀಡಿದೆ.

Not Out poster
ನಾಟ್ ಔಟ್ ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 17, 2024, 8:15 PM IST

'ನಾಟ್ ಔಟ್' ಚಿತ್ರತಂಡ (ETV Bharat)

ಚಂದನವನದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳು ಬರುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಹಿನ್ನೆಲೆ, ಟ್ರೇಲರ್​​​ನಿಂದಲೇ ಸ್ಯಾಂಡಲ್​​ವುಡ್​ನಲ್ಲಿ ಗೆಲ್ಲುವ ಸೂಚನೆ ನೀಡಿರುವ 'ನಾಟ್ ಔಟ್' ಚಿತ್ರತಂಡ ಸಿನಿಪ್ರೇಮಿಗಳಿಗೆ ಭರ್ಜರಿ ಆಫರ್ ಒಂದನ್ನು ನೀಡಿದೆ.

ಈ ಹಿಂದೆ ಪುರುಷೋತ್ತಮ ಪ್ರಸಂಗ ಎಂಬ ಚಿತ್ರದ ಮೂಲಕ ಭರವಸೆ ಮೂಡಿಸಿರೋ ಅಜಯ್ ಪೃಥ್ವಿ ಹಾಗೂ ಲವ್ ಮಾಕ್​​ಟೈಲ್ ಖ್ಯಾತಿಯ ರಚನಾ ಇಂದರ್ ತೆರೆ ಹಂಚಿಕೊಂಡಿರುವ ಈ ಚಿತ್ರ ಕಂಟೆಂಟ್ ಜೊತೆಗೆ ಸ್ಟಾರ್ ಕಾಸ್ಟ್ ವಿಚಾರಕ್ಕೆ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪ್ರೇಕ್ಷಕರಿಗೆ ಸಿನಿಮಾದ ಗುಣಮಟ್ಟ ತಿಳಿಸುವ ಉದ್ದೇಶದಿಂದ ಫಸ್ಟ್ ಹಾಫ್ ಸಿನಿಮಾವನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಡುತ್ತಿದೆ. ಸೆಕೆಂಡ್ ಹಾಫ್ ಸಿನಿಮಾ ನೋಡುವ ಕುತೂಹಲ ಇದ್ದರೆ ಮಧ್ಯಂತರದಲ್ಲಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡುವ ಆಫರ್ ಅನ್ನು ನೀಡುವ ಮೂಲಕ ಹೊಸತನಕ್ಕೆ ನಾಂದಿ ಹಾಡುತ್ತಿದೆ.

ಈ ಬಗ್ಗೆ ಮಾತನಾಡಿದ ನಾಟ್ ಔಟ್ ಚಿತ್ರದ ನಿರ್ದೇಶಕ ಅಂಬರೀಷ್ ಎಂ ಕನ್ನಡ ಸಿನಿಮಾಗಳಿಗೆ ಅದರಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತುಗಳಿವೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಪರಭಾಷೆ ಸಿನಿಮಾಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆ ಕನ್ನಡ ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್​​​ನಲ್ಲಿ ಹೆಚ್ಚು ಶೋಗಳನ್ನು ಕೊಡುತ್ತಿಲ್ಲ ಎಂಬ ಆರೋಪವಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಬೇಕಿದೆ. ಈ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕಂಟೆಂಟ್ ಸಿನಿಮಾ ಯಾವುದು? ಎಂಟರ್​ಟೈನ್ಮೆಂಟ್​​ ಸಿನಿಮಾ ಯಾವುದು ಅನ್ನೋ? ಗೊಂದಲ ಕೂಡ ಪ್ರೇಕ್ಷಕರಲ್ಲಿರುತ್ತದೆ. ಜೊತೆಗೆ, ಸಿನಿಪ್ರಿಯರು ಒಂದು ಚಿತ್ರದ ಟ್ರೇಲರ್​​, ಫಸ್ಟ್ ಹಾಫ್ ಸಿನಿಮಾ ನೋಡಿ ಇಷ್ಟೇ ಸಿನಿಮಾ ಅಂತಾ ಡಿಸೈಡ್ ಮಾಡ್ತಾರೆ.

ಇನ್ನೂ, 90ರ ದಶಕದಲ್ಲಿ ಟ್ರೇಲರ್ ಎಂಬ ಕಾನ್ಸೆಪ್ಟ್ ಇರಲಿಲ್ಲ. ಡೈರೆಕ್ಟ್ ಆಗಿ ಸಿನಿಮಾ ನೋಡುತ್ತಿದ್ದರು. 2000ರ ಈಚೆಗೆ ಟ್ರೇಲರ್, ಮೋಶನ್ ಪಿಕ್ಚರ್, ಸಾಂಗ್ ರಿಲೀಸ್ ಎಂಬ ಕಾನ್ಸೆಪ್ಟ್ ಶುರುವಾಯ್ತು. 2024ರಲ್ಲಿ ಫಸ್ಟ್ ಸಿನಿಮಾವನ್ನು ಉಚಿತವಾಗಿ ನೋಡಿ, ಸೆಂಕೆಂಡ್ ಹಾಫ್ ಅನ್ನು ದುಡ್ಡು ಕೊಟ್ಟು ವೀಕ್ಷಿಸಿ ಎಂಬ ಕಾನ್ಸೆಪ್ಟ್​​​ ಬಂದಿದೆ.

ಇದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ. ಮಲ್ಟಿಫ್ಲೆಕ್ಸ್​​ ಥಿಯೇಟರ್​​ಗಳಿಗೆ ಅನ್ವಯಿಸುವುದಿಲ್ಲ. ಈಗಾಗಲೇ 30 ಚಿತ್ರಮಂದಿರಗಳಲ್ಲಿ ಮಾತುಕತೆ ನಡೆಸಿದ್ದೇವೆ. ಯಾವ ಯಾವ ಚಿತ್ರಮಂದಿರ ಅನ್ನೋದನ್ನು ವಿತರಕರು, ಪ್ರೊಡಕ್ಷನ್ ಹೌಸ್ ಹಾಗೂ ಚಿತ್ರಮಂದಿರದ ಮಾಲೀಕರ ಜೊತೆ ಮಾತುಕಥೆ ಆಗುತ್ತಿದೆ ಎಂದು ನಿರ್ದೇಶಕ ಅಂಬರೀಷ್ ಹೇಳಿದರು. ಈ ಸಂದರ್ಭ ನಾಯಕ ನಟ ಅಜಯ್ ಪೃಥ್ವಿ, ಕಲಾವಿದರಾದ ಪ್ರಶಾಂತ್ ಸಿದ್ಧಿ, ಕಾಕ್ರೋಜ್ ಸುಧೀ ನಿರ್ದೇಶಕರಿಗೆ ಸಾಥ್ ನೀಡಿದರು.

ಇದನ್ನೂ ಓದಿ: 'ರೂಪಾಂತರ ನನಗೆ ಬಹಳ ಇಷ್ಟವಾದ ಸಿನಿಮಾ': ರಾಜ್ ಬಿ ಶೆಟ್ಟಿ - Roopantara

ನಿರ್ದೇಶಕ ಅಂಬರೀಶ್ ಎಂ ಆ್ಯಕ್ಷನ್ ಕಟ್ ಹೇಳಿರುವ ನಾಟ್ ಔಟ್ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ಕಥೆಯನ್ನು ಹೊಂದಿದೆ. ಟ್ರೇಲರ್​ನಲ್ಲಿ ಆಮುರ್ಗಂ ಖ್ಯಾತಿಯ ರವಿಶಂಕರ್ ಗೌಡ ಹಾಗೂ ಗೋಪಾಲ ಕೃಷ್ಣದೇಶಪಾಂಡೆ ಅವರಂತಹ ಹಿರಿಯ ನಟರ ಜೊತೆ ಯುವ ನಟ ಅಜಯ್ ಪೃಥ್ವಿ ನಟಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ಪ್ರೇಕ್ಷಕರೇಗೆ ರಿಸೀವ್ ಮಾಡುತ್ತಾರೆನ್ನುವ ಭಯವಿತ್ತು: ಚಂದನ್ ಶೆಟ್ಟಿ - Vidhyarthi Vidyarthiniyare

ಚಿತ್ರದಲ್ಲಿ ಅಜಯ್ ಪೃಥ್ವಿ ಆ್ಯಂಬುಲೆನ್ಸ್ ಡ್ರೈವರ್ ಪಾತ್ರ ನಿರ್ವಹಿಸಿದ್ದು, ರಚನಾ ಇಂದರ್ ಜೋಡಿಯಾಗಿದ್ದಾರೆ.ಇವರ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಕಾಕ್ರೋಜ್ ಸುಧೀ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಾಣ ಮಾಡಿದ್ದು, ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಅವರ ಛಾಯಾಗ್ರಹಣವಿದೆ. ಚಿತ್ರ ಇದೇ ಜುಲೈ 19ರಂದು ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ನಾಟ್ ಔಟ್ ಚಿತ್ರತಂಡ ಕೊಟ್ಟಿರುವ ಈ ಆಫರ್​ಗೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಮಾಡ್ತಾರೆ ಅನ್ನೋದು ಈ ಶುಕ್ರವಾರ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.