ETV Bharat / entertainment

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಬಗ್ಗೆ ಟ್ವೀಟ್​ : ಈ ಎಕ್ಸ್​​ ಖಾತೆ ತಮ್ಮದಲ್ಲ ಎಂದ ನಟ ಸಿದ್ದಾರ್ಥ - Not a Single Woman on the Street

ಡಬ್ಲ್ಯೂಪಿಎಲ್​ನಲ್ಲಿ ಮಹಿಳಾ ತಂಡ ಜಯಿಸಿದರೂ ಮಹಿಳೆಯರು ಮುಕ್ತವಾಗಿ ಬೀದಿಯಲ್ಲಿ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿಲ್ಲ. ಇದೆಂತಹ ವಿಡಂಬನಾತ್ಮಕ ಪರಿಸ್ಥಿತಿ ಎಂದು ಸಿದ್ದಾರ್ಥ್​ ಪೋಸ್ಟ್​ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ, ಈ ಪೋಸ್ಟ್​ ತಮ್ಮದಲ್ಲ ಎಂದು ನಟ ಸಿದ್ದಾರ್ಥ್ ತಮ್ಮ ಇನ್​ಸ್ಟಾಗ್ರಾಂ ಖಾತೆ ಮೂಲಕ​ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಎಕ್ಸ್​ ಅಕೌಂಟ್​ ಬಳಕೆದಾರ ಸ್ಪಷ್ಟನೆ ಕೊಟ್ಟಿದ್ದು, ಇದು ನಟ ಸಿದ್ದಾರ್ಥ್​ ಅವರ ಅಕೌಂಟ್​ ಅಲ್ಲ ಎಂದು ಹೇಳಲಾಗಿದೆ.

not-a-single-woman-on-the-street-to-celebrate-siddharth-calls-out-patriarchy-as-rcb-wins-wpl

author img

By ETV Bharat Karnataka Team

Published : Mar 18, 2024, 5:23 PM IST

Updated : Mar 19, 2024, 6:03 PM IST

ಹೈದರಾಬಾದ್​: ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು (ಆರ್​ಸಿಬಿ) ಮಹಿಳಾ ತಂಡ ಈ ಬಾರಿ ಪ್ರಶಸ್ತಿ ​ಗೆಲ್ಲುವ ಮೂಲಕ ಅಭಿಮಾನಿಗಳ ದಶಕದ ಕನಸನ್ನು ನನಸಾಗಿಸಿದೆ. ಮೊದಲ ಬಾರಿಗೆ ಆರ್​​ಸಿಬಿ ಕಪ್​ ಗೆದ್ದ ಹಿನ್ನೆಲೆ ಬೆಂಗಳೂರಿನ ಜನರ ಸಂಭ್ರಮ ಮುಗಿಲು ಮುಟ್ಟಿದ್ದು, ರಸ್ತೆಗಳಲ್ಲಿ ಕುಣಿತು ಕುಪ್ಪಳಿಸಿದರು. ಈ ಸಂಭ್ರಮದ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟ ಸಿದ್ದಾರ್ಥ್​​, ಭಾರತದಲ್ಲಿನ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ಕುರಿತು ಟೀಕಿಸಿದ್ದಾರೆ ಎಂದು ವರದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಪೋಸ್ಟ್​ ಇದೀಗ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಪೋಸ್ಟ್​ ತಮ್ಮದಲ್ಲ ಎಂದು ಇನ್​ಸ್ಟಾಗ್ರಾಂನ ತಮ್ಮ ಖಾತೆ ಮೂಲಕ ನಟ ಸಿದ್ಧಾರ್ಥ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಪೋಸ್ಟ್​ ಸಂಬಂಧ ಎಕ್ಸ್​ ಆ್ಯಪ್​ನ ಬಳಕೆದಾರ ಸಹ ಸ್ಪಷ್ಟನೆ ಕೊಟ್ಟಿದ್ದು, ತಾನು ನಟ ಸಿದ್ದಾರ್ಥ್​ ಅಲ್ಲ ಎಂದು ಹೇಳಿದ್ದಾರೆ.

ಮಹಿಳಾ ಐಪಿಎಲ್​ನಲ್ಲಿ ಆರ್​ಸಿಬಿ ಗೆಲುವಿಗೆ ಪುರುಷರು ಸಂಭ್ರಮ ಪಡುತ್ತಿರುವ ವಿಡಿಯೋವನ್ನು ಎಕ್ಸ್​ನಲ್ಲಿ ಸಿದ್ದಾರ್ಥ್​ ಪೋಸ್ಟ್​ ಮಾಡಿದ್ದಾರೆ. ಪುರುಷರ ತಂಡ ಇಷ್ಟು ವರ್ಷಗಳಿಂದ ಕಂಡಿದ್ದ ಕಪ್​ ಕನಸನ್ನು ಇದೀಗ ಮಹಿಳೆಯರ ತಂಡ ನನಸು ಮಾಡಿದ ಹಿನ್ನೆಲೆ ಆರ್​ಸಿಬಿ ಪುರುಷ ಅಭಿಮಾನಿಗಳು ಸಂತಸದಿಂದ ರಸ್ತೆಯಲ್ಲಿ ಕುಣಿದಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಮಹಿಳೆಯರ ಗೈರಿನ ಕುರಿತು ಗಮನ ಸೆಳೆದಿರುವ ನಟ ಸಿದ್ದಾರ್ಥ್​​, ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆಯಲ್ಲಿನ ಪುರುಷ ಮತ್ತು ಮಹಿಳೆಯರ ಸ್ವಾತಂತ್ರ್ಯದ ಅಸಮಾನತೆ ಕುರಿತು ಧ್ವನಿ ಎತ್ತಿದ್ದಾರೆ ಎಂದು ವರದಿಯಾಗಿತ್ತು.

ವೃತ್ತಿ ವಿಚಾರದಲ್ಲಿ ಮಾತನಾಡುವುದಾದರೆ, ಸಿದ್ಧಾರ್ಥ್​​ ಕಳೆದ ವರ್ಷ ಅಂದರೆ 2023ರಲ್ಲಿ 'ಚಿತ್ಹಾ' ಸಿನಿಮಾವನ್ನು ನಿರ್ಮಾಣ ಮಾಡಿ ನಟಿಸಿದ್ದರು. ಎಸ್​ಯು ಅರುಣ್​​ ಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಬೆಳಕು ಚೆಲ್ಲಿತ್ತು. ಸಿದ್ದಾರ್ಥ್​​ ಸದ್ಯ ಕಮಲ್​ ಹಾಸನ್​ ನಟನೆಯ ಶಂಕರ್​ ನಿರ್ದೇಶನದ 'ಇಂಡಿಯಾ 2' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವೂ 2020ರಲ್ಲಿಯೇ ಸೆಟ್​ ಏರಿತ್ತಾದರೂ ಕೋವಿಡ್​ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು, ಕೆಲವು ಹಾಡಿನ ಶೂಟಿಂಗ್​ ಬಾಕಿ ಇದೆ.

ಇದನ್ನೂ ಓದಿ: ಚೊಚ್ಚಲ ಕಪ್​ ಗೆದ್ದ ಮಹಿಳಾ ಆರ್​​ಸಿಬಿ ತಂಡಕ್ಕೆ ಅಭಿನಂದನೆಗಳ ಮಹಾಪೂರ: ಯಾರು, ಏನಂದ್ರು?

Last Updated : Mar 19, 2024, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.