ETV Bharat / entertainment

ಧ್ರುವ ಸರ್ಜಾರ 'ಕೆ.ಡಿ' ಅಡ್ಡಕ್ಕೆ ಬಳುಕುವ ಬಳ್ಳಿ ನೋರಾ ಫತೇಹಿ ಎಂಟ್ರಿ

author img

By ETV Bharat Karnataka Team

Published : Jan 24, 2024, 7:30 AM IST

Nora Fatehi: ಧ್ರುವ ಸರ್ಜಾ ಅಭಿನಯ ಹಾಗೂ ಪ್ರೇಮ್ ನಿರ್ದೇಶನದ 'ಕೆ.ಡಿ ಸಿನಿಮಾ'ಗೆ ಖ್ಯಾತ ಡ್ಯಾನ್ಸರ್ ನೋರಾ ಫತೇಹಿ ಪ್ರವೇಶವಾಗಿದೆ.

Nora Fatehi entry to KD Movie
ಕೆಡಿ ಸಿನಿಮಾಗೆ ನೋರಾ ಫತೇಹಿ ಎಂಟ್ರಿ
ಕೆಡಿ ಸಿನಿಮಾಗೆ ನೋರಾ ಫತೇಹಿ ಎಂಟ್ರಿ

ಕನ್ನಡದ ಸಿನಿಮಾಗಳಿಗೆ ಭಾರತೀಯ ಚಿತ್ರರಂಗವಲ್ಲದೇ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಅದ್ಧೂರಿ ಮೇಕಿಂಗ್, ಅತ್ಯುತ್ತಮ ಕಂಟೆಂಟ್‌ ಮೂಲಕ ಚಿತ್ರಗಳು ಯಾವ ಭಾಷೆಗೂ ಕಮ್ಮಿ ಇಲ್ಲ ಎಂಬ ಮಟ್ಟಿಗೆ ನಿರ್ಮಾಣವಾಗುತ್ತಿವೆ. ಹೀಗಾಗಿ ಬಹುಭಾಷಾ ನಟರು ಕೂಡಾ ಕನ್ನಡದಲ್ಲಿ ಅಭಿನಯಿಸಲು ಒಲವು ತೋರುತ್ತಿದ್ದಾರೆ. ಈಗಾಗಲೇ ಹಲವು ತಾರೆಯರು ಸ್ಯಾಂಡಲ್​​ವುಡ್​ ಕಡೆಗೆ ಮುಖ ಮಾಡುತ್ತಿದ್ದಾರೆ. ಇದೀಗ ವಿಭಿನ್ನ ಟೈಟಲ್‌ನಿಂದ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಧ್ರುವ ಸರ್ಜಾ ನಟನೆಯ ಹಾಗೂ ಪ್ರೇಮ್ ನಿರ್ದೇಶನದ 'ಕೆ.ಡಿ ಸಿನಿಮಾ' ಅಡ್ಡಕ್ಕೆ ಮತ್ತೋರ್ವ ಬಾಲಿವುಡ್ ಸೆಲೆಬ್ರಿಟಿಯ ಆಗಮನವಾಗಿದೆ.

ಕೆಡಿ ಸಿನಿಮಾಗೆ ನೋರಾ ಫತೇಹಿ ಎಂಟ್ರಿ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ 'ಕೆಡಿ'ಯಲ್ಲಿ ಬಾಲಿವುಡ್​ನ ಖಳನಾಯಕ ಸಂಜಯ್ ದತ್ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಿಳಿದಿರುವ ವಿಚಾರ. ಪ್ರೇಮ್ ಅವರು ಸಂಜಯ್ ದತ್‌ ಅವರ ಆ್ಯಕ್ಷನ್ ಸಿಕ್ವೇನ್ಸ್​​​ಗಳನ್ನು ಈಗಾಗಲೇ ಚಿತ್ರೀಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ಚಿತ್ರೀಕರಣ ಮಾಡಿಸಿದ್ದಾರೆ. ಇದೀಗ ಶೂಟಿಂಗ್​ ಅಡ್ಡಕ್ಕೆ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬಾಲಿವುಡ್ ಬ್ಯೂಟಿ, ಕೆನಡಿಯನ್ ಸುಂದರಿಯನ್ನು ಕೆ ಡಿ ಕರೆತಂದಿದೆ.

ಬಾಲಿವುಡ್, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಮೋಡಿ ಮಾಡಿರುವ ಕೆನಡಿಯನ್‌ ಸುಂದರಿ ನೋರಾ ಫತೇಹಿ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಮೂಲತಃ ಕೆನಡಾದವರಾದ ನೋರಾ ಭಾರತೀಯ ಸಿನಿಮಾ ರಂಗದಲ್ಲಿ ನೆಲೆ ಕಂಡವರು. ಬಾಲಿವುಡ್‌ ಸಿನಿಮಾಗಳಲ್ಲಿ ಹಲ್‌ಚಲ್‌ ಎಬ್ಬಿಸಿರುವ ನೋರಾ ಸ್ಪೆಷಲ್ ಹಾಡುಗಳಲ್ಲಿ ಮೈ ಬಳುಕಿಸುವ ಮೂಲಕ ಪಡ್ಡೆ ಹುಡುಗರಿಂದ ಹಿಡಿದು ಎಲ್ಲಾ ವರ್ಗದವರಿಗೂ ಹಿಡಿಸಿದ್ದಾರೆ. ಸ್ಟೇಜ್​ ಹತ್ತಿದರೆ ಇವರು ಬಳುಕುವ ಬಳ್ಳಿಯೇ. ಪ್ರೇಕ್ಷಕರ ಹುಬ್ಬೇರಿಸುವಂತಹ ಅದ್ಭುತ ನೃತ್ಯಗಾರ್ತಿ.

ಇದನ್ನೂ ಓದಿ: 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆಯಂದು ನಡೆಯಿತು ಧ್ರುವ ಸರ್ಜಾ ಮಕ್ಕಳ ನಾಮಕರಣ ಶಾಸ್ತ್ರ - ವಿಡಿಯೋ

ಇದೀಗ ಜೋಗಿ ಪ್ರೇಮ್ ನೋರಾ ಫತೇಹಿ ಅವರನ್ನು ಕರೆಸಿರುವುದು ನೋಡಿದರೆ ಕೆಡಿ ಚಿತ್ರದ ಭರ್ಜರಿ ಹಾಡೊಂದಕ್ಕೆ ನೋರಾ ಫತೇಹಿ ಸೊಂಟ ಬಳುಕಿಸಲಿರುವುದು ಬಹುತೇಕ ಪಕ್ಕಾ. ಆದರೆ ಪ್ರೇಮ್ ತಮ್ಮ ಚಿತ್ರದ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಸದ್ಯ ರಿವೀಲ್ ಮಾಡಿರುವ ವಿಡಿಯೋ ನೋಡಿದರೆ ನೋರಾ ಮಸ್ತ್ ಡ್ಯಾನ್ಸ್ ಇರಬಹುದು ಅಂತಿದ್ದಾರೆ ಪ್ರೇಕ್ಷಕರು. ಯಾಕಂದ್ರೆ ಪಕ್ಕದಲ್ಲಿ ಪ್ರಖ್ಯಾತ ಡ್ಯಾನ್ಸ್ ಮಾಸ್ಟರ್ ರಾಜು ಸುಂದರಂ ಇರುವುದು ಇದಕ್ಕೆ ಸಾಕ್ಷಿ.

ಇದನ್ನೂ ಓದಿ: 'ಎಮರ್ಜೆನ್ಸಿ' ರಿಲೀಸ್​ ಡೇಟ್ ಅನೌನ್ಸ್: ತೆರೆ ಮೇಲೆ ಬರಲಿದೆ ಇಂದಿರಾ ಗಾಂಧಿ ಆಡಳಿತಾವಧಿ

ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆ.ವಿ.ಎನ್ ಪ್ರೊಡಕ್ಷನ್ ಸಂಸ್ಥೆಯಡಿ ಕೆಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಅರ್ಜುನ್ ಜನ್ಯ ಸಂಗೀತವಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಕೆ ಡಿಗೆ ಶೂಟಿಂಗ್ ಹಂತದಲ್ಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ನಿರೀಕ್ಷೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.