ETV Bharat / entertainment

ಶಿವರಾಜ್​​​​ಕುಮಾರ್​​ ಮಗಳ ನಿರ್ಮಾಣದ 'ಫೈರ್ ಫ್ಲೈ' ಶೂಟಿಂಗ್​ ಪೂರ್ಣ: ಮನದ ಮಾತು ಹಂಚಿಕೊಂಡ ನಿವೇದಿತಾ - Niveditha Shivarajkumar Fire Fly - NIVEDITHA SHIVARAJKUMAR FIRE FLY

ಸೆಂಚುರಿ ಸ್ಟಾರ್ ಶಿವರಾಜ್​​​​ಕುಮಾರ್​​ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ 'ಫೈರ್ ಫ್ಲೈ'. ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಶೂಟಿಂಗ್ ಜರ್ನಿಯ ಝಲಕ್ ಶೇರ್ ಮಾಡಿದೆ. ಜೊತೆಗೆ ನಿವೇದಿತಾ ಕೂಡಾ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.

'Fire fly' film team
'ಫೈರ್‌ ಫ್ಲೈ' ಚಿತ್ರತಂಡ (ETV Bharat)
author img

By ETV Bharat Karnataka Team

Published : Aug 26, 2024, 12:51 PM IST

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಹ್ಯಾಟ್ರಿಕ್​ ಹೀರೋ ಶಿವರಾಜ್​​​​ಕುಮಾರ್​​ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಫೈರ್‌ ಫ್ಲೈ'. ಚಿತ್ರದ ಶೀರ್ಷಿಕೆ ಹಾಗೂ ಸ್ಟಾರ್ ಕಾಸ್ಟ್ ವಿಚಾರವಾಗಿ ಸ್ಯಾಂಡಲ್​​​​ವುಡ್​ನಲ್ಲಿ ಸಖತ್​​ ಸದ್ದು ಮಾಡುತ್ತಿರುವ 'ಫೈರ್ ಪ್ಲೈ' ಪ್ರೊಜೆಕ್ಟ್​​ನ ಚಿತ್ರೀಕರಣ ಮುಕ್ತಾಯಗೊಂಡಿದೆ. ಶೂಟಿಂಗ್ ಜರ್ನಿಯ ಝಲಕ್ ಹಂಚಿಕೊಳ್ಳೋ ಮೂಲಕ ಚಿತ್ರತಂಡ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ನಿವೇದಿತಾ ಶಿವರಾಜ್​​ಕುಮಾರ್ ಸ್ಪೆಷಲ್​ ಪೋಸ್ಟ್​​: ತಮ್ಮ 'ಫೈರ್ ಫ್ಲೈ' ಪಯಣದ ಬಗ್ಗೆ‌ ನಿವೇದಿತಾ ಶಿವರಾಜ್​​ಕುಮಾರ್ ಮನದ ಮಾತನ್ನು ಹಂಚಿಕೊಂಡಿದ್ದಾರೆ. ''ಚಿಕ್ಕವಳಿದ್ದಾಗಿನಿಂದಲೂ ಸಿನಿಮಾಗಳು, ಕಥೆಗಳೊಡನೆ ಬೆಳೆದವಳು ನಾನು. ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ "ಫೈರ್ ಪ್ಲೈ". ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು, ಅತ್ಯದ್ಭುತ ಪ್ರತಿಭೆಗಳು, ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರು ಹಾಗೂ ಅವರೊಂದಿಗಿನ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು''.

''ಶುರುವಾದ ಪ್ರತೀ ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ, ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಕೂಡಾ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ "ಫೈರ್ ಪ್ಲೈ" ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ - ನಿವೇದಿತಾ ಶಿವರಾಜ್​​​ಕುಮಾರ್​​'' ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರೋ ಈ ಪೋಸ್ಟ್​​ಗೆ ''ಈ ನನ್ನ ಹೃದಯದ ಭಾಗವಾಗಿರುವ 'ಫೈರ್ ಫ್ಲೈ' ಎಂಬ ಪಯಣವನ್ನು ನಿಮಗೆ ತಲುಪಿಸಲು ಎಂದಿನಂತೆ ನಾ ಉತ್ಸುಕಳಾಗಿರುವೆ'' ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ: 7 ಜೈಲು ಅಧಿಕಾರಿಗಳ ಅಮಾನತು - Actor Darshan Photo Viral

ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಜವಾಬ್ದಾರಿ ಹೊತ್ತಿರುವ ಫೈರ್ ಫ್ಲೈ ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ, ಮೂಗು ಸುರೇಶ್ ಸೇರಿದಂತೆ ಕೆಲವರು ಅಭಿನಯಿಸಿದ್ದಾರೆ. ವಂಶಿಗೆ‌ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ: ನಟಿಯರ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್, ನಟ ಸಿದ್ದಿಕ್ ರಾಜೀನಾಮೆ - sexual assault allegations

ಚಿತ್ರದಲ್ಲಿ ಅಭಿಲಾಷ್ ಕಳತ್ತಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ನಾಯಕ ಹಾಗೂ ನಿರ್ದೇಶಕನ ಜವಾಬ್ದಾರಿ ಹೊತ್ತಿರುವ ವಂಶಿ ಜೊತೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ. ಸದ್ಯ ಪೋಸ್ಟರ್​​‌ನಿಂದ ಕುತೂಹಲ ಹುಟ್ಟಿಸಿರೋ ಫೈರ್ ಪ್ಲೈ ಚಿತ್ರ ಈ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.