ಹೈದರಾಬಾದ್: ಸದ್ಯ ಸಿನಿ ಉದ್ಯಮದಲ್ಲಿ ಸಾಕಷ್ಟು ಪ್ರಖ್ಯಾತಿ ಹೊಂದಿರುವ ತಾರಾ ಜೋಡಿಗಳಲ್ಲಿ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿಯೂ ಒಂದಾಗಿದೆ. ತಮ್ಮ ಪ್ರೀತಿಯ ಕೆಮಿಸ್ಟ್ರಿಯನ್ನು ತೋರಿಸುವಲ್ಲಿ ಈ ಜೋಡಿಗಳು ಎಂದಿಗೂ ಹಿಂದೆ ಉಳಿದಿಲ್ಲ. ತಮ್ಮ ನಡುವಿನ ಅಗಾಧ ಪ್ರೀತಿಯ ಅಳತೆ ವ್ಯಕ್ತಪಡಿಸುವ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದನ್ನು ಈ ಜೋಡಿ ಮರೆಯುವುದಿಲ್ಲ.
ಅಗ್ಗಿಂದಾಗಲೇ ತಮ್ಮಿಬ್ಬರ ಜೋಡಿ ಮತ್ತು ಮಕ್ಕಳ ಫೋಟೋವನ್ನು ಹಂಚಿಕೊಳ್ಳುವ ನಟಿ ನಯನತಾರ ಇದೀಗ ಮತ್ತೊಂದು ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ತಮ್ಮ ಮನೆಯ ಲಾನ್ನಲ್ಲಿ ಬೆಳಕಿನಿಂದ ಚಿತ್ತಾರಗೊಂಡ ಮರದ ಎದುರು ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಬಿಗಿ ಅಪ್ಪುಗೆಯಲ್ಲಿ ನಿಂತು ತಮ್ಮ ಸಮಯ ಕಳೆಯುತ್ತಿರುವ ಫೋಟೋ ಇದಾಗಿದೆ. ಎರಡು ದೃಷ್ಟಿ ಕಣ್ಣಿನೊಂದಿಗೆ ಕೆಂಪು ಹೃದಯದ ಎಮೋಜಿಯೊಂದಿಗೆ ನಟಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಘ್ನೇಶ್ ನನ್ನ ಮೆಚ್ಚಿನ ಸ್ಥಳ ಎಂದಿದ್ದಾರೆ.
ಶೂಟಿಂಗ್ಗಾಗಿ 20 ದಿನಗಳ ಕಾಲ ಮನೆಯಿಂದ ದೂರಾಗಿದ್ದ ವಿಘ್ನೇಶ್ ಶಿವನ್ ಮನೆಗೆ ಮರಳಿದಾಕ್ಷಣ ನಯನತಾರ ಈ ಚಿತ್ರ ಹಂಚಿಕೊಂಡಿರುವುದು ವಿಶೇಷವಾಗಿದೆ. ವಿಘ್ನೇಶ್ ಶಿವನ್ ಕೆಲಸದ ಬದ್ಧತೆ ಹೊಗಳಿರುವ ಅವರು ಅದಕ್ಕಾಗಿ ಮನೆಯಿಂದ ದೂರ ಇದ್ದು, ಇದೀಗ ಮನೆಗೆ ಮರಳಿದ್ದಾರೆ ಎಂಬುದನ್ನು ಅಡಿ ಬರಹದಲ್ಲಿ ನಟಿ ಕೂಡ ತಿಳಿಸಿದ್ದಾರೆ. '20 ದಿನದ ಶೂಟಿಂಗ್ನಿಂದ ನಿಮ್ಮನ್ನು ಎಷ್ಟು ಮಿಸ್ ಮಾಡಿದ್ದೆವು ಎಂದು ನಾವು ಮೂರು ಮಂದಿ ವಿವರಿಸಲಾಗದು' ಎಂದು ತಿಳಿಸಿದ್ದಾರೆ
2022ರ ಜೂನ್ 9ರಂದು ನಯನತಾರ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಕುಟುಂಬ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಅಜಿತ್ ಕುಮಾರ್, ವಿಜಯ್ ಸೇತುಪತಿ, ರಜನಿಕಾಂತ್ ಮತ್ತು ಶಾರುಖ್ ಖಾನ್ ಸೇರಿದಂತೆ ಕೆಲವು ಪ್ರಮುಖ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗಿದ್ದರು. ಈ ಜೋಡಿ 2022ರಲ್ಲಿ ಸರೋಗೆಸಿ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ.
ವೃತ್ತಿ ಜೀವನದಲ್ಲಿ ನೋಡುವುದಾದರೆ, ನಟಿ ನಯನತಾರ ಎಸ್ ಶಶಿಕಾಂತ್ ನಿರ್ದೆಶನದ ಕ್ರೀಡಾ ಕಥೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಮತ್ತೊಂದು ಚಿತ್ರದಲ್ಲಿ ಆರ್ ಮಧವನ್, ಸಿದ್ಧಾರ್ಥ್, ಮೀರಾ ಜಾಸ್ಮಿನ್ ಮತ್ತು ಇತರೆ ನಟ - ನಟಿಯರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ ಯೋಗಿ ಬಾಬು ಜೊತೆಗೆ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ವಿಚ್ಛೇದನ ವದಂತಿಗೆ ಫುಲ್ಸ್ಟಾಪ್: ಪತಿ, ಮಕ್ಕಳೊಂದಿಗಿನ ಫೋಟೋ ಹಂಚಿಕೊಂಡ ನಯನತಾರಾ