ETV Bharat / entertainment

100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ? - Nayanathara

100 ಕೋಟಿ ಕೊಟ್ಟರೂ ನಟಿಸುವುದಿಲ್ಲ ಎಂದು ಹೇಳಿ ನಯನತಾರಾ ಅವರು ಸಿನಿಮಾವೊಂದನ್ನು ತಿರಸ್ಕರಿಸಿದ್ದರು ಎಂಬ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

Nayanathara
ನಯನತಾರಾ
author img

By ETV Bharat Karnataka Team

Published : Feb 25, 2024, 5:23 PM IST

Updated : Feb 25, 2024, 8:00 PM IST

ನಯನತಾರಾ, ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಲೇಡಿ ಸೂಪರ್ ಸ್ಟಾರ್ ಎಂದೇ ಜನಪ್ರಿಯರು. ಸಿನಿಮಾಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರ ಸಾಲಿನಲ್ಲಿ ನಯನತಾರಾ ಅಗ್ರ ಸ್ಥಾನದಲ್ಲಿದ್ದಾರೆ. ಪ್ರತೀ ಚಿತ್ರಕ್ಕೆ ಅದರ ಬಜೆಟ್ ಆಧರಿಸಿ 5 ರಿಂದ 10, 15 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ. ಆದ್ರೆ ದುಪ್ಪಟ್ಟು ಸಂಭಾವನೆ ಕೊಡುತ್ತೇನೆಂದರೂ ಆ ಒಂದು ಸಿನಿಮಾಗೆ 'ನೋ' ಅಂದಿದ್ದರಂತೆ. 100 ಕೋಟಿ ರೂ. ಕೊಟ್ಟರೂ ನಟಿಸುವುದಿಲ್ಲ ಎಂದು ನಯನತಾರಾ ಹೇಳಿದ್ದಾರೆ ಅನ್ನೋ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ತಮಿಳುನಾಡಿನ ಖ್ಯಾತ ಉದ್ಯಮಿ 'ಲೆಜೆಂಡ್​ ಸರವಣನ್' (ಅರುಳ್ ಸರವಣನ್) ಈ ನಡುವೆ ಹೀರೋ ಆಗಿ ಹೊರಹೊಮ್ಮಿರುವುದು ಗೊತ್ತೇ ಇದೆ. ಅವರೇ 'ದಿ ಲೆಜೆಂಡ್' ಎಂಬ ಸಿನಿಮಾ ನಿರ್ಮಿಸಿ, ನಾಯಕನಾಗಿ ನಟಿಸಿದ್ದರು. ಆದ್ರೆ 2022ರಲ್ಲಿ ತೆರೆಗಪ್ಪಳಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿನ್ನೆಡೆ ಕಂಡಿತು. ಸರವಣನ್ ಜೊತೆ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ತೆರೆ ಹಂಚಿಕೊಂಡಿದ್ದರು. ಆದರೆ ಊರ್ವಶಿ ರೌಟೇಲಾಗೂ ಮುನ್ನ ನಯನತಾರಾ ಅವರಿಗೆ ಈ ಆಫರ್ ಸಿಕ್ಕಿತ್ತು. ತಮ್ಮ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ಅವರಿಂದ ನಟನೆ ಮಾಡಿಸಲು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ಮಾಹಿತಿ ಇದೆ.

ಆದರೆ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಲೇಡಿ ಸೂಪರ್ ಸ್ಟಾರ್ ನಯನತಾರಾ ತಿಳಿಸಿದ್ದರು. ದುಪ್ಪಟ್ಟು ಸಂಭಾವನೆ ನೀಡುವುದಾಗಿಯೂ ಹೇಳಿದ್ದರು. ಆದರೆ ನಯನತಾರಾ ಈ ಪ್ರಾಜೆಕ್ಟ್​ಗೆ ಗ್ರೀನ್​ ಸಿಗ್ನಲ್​ ಕೊಡಲಿಲ್ಲ. 100 ಕೋಟಿ ರೂ. ಕೊಟ್ಟರೂ ನಟಿಸುವುದಿಲ್ಲ ಎಂದು ನಯನತಾರಾ ತಿಳಿಸಿದ್ದರೆಂದು ಕೆಲ ವರದಿಗಳಾಗಿವೆ. ಬಳಿಕ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಈ ಚಿತ್ರದ ಭಾಗವಾದರು. ಇದಕ್ಕಾಗಿ ಚೆಲುವೆಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ ಎಂಬ ಬಗ್ಗೆ ಸುದ್ದಿ ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ಯೋಧ' ಅಪ್ಡೇಟ್ಸ್; ಶೀಘ್ರದಲ್ಲೇ ಟ್ರೇಲರ್​ ರಿಲೀಸ್​

ಅರುಳ್ ಸರವಣನ್: ಲೆಜೆಂಡ್ ಸರವಣನ್ ಅವರು ಚೆನ್ನೈನಲ್ಲಿ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸರವಣ​​​ ಸ್ಟೋರ್ಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸರವಣನ್ ಸೆಲ್ವರತಿನಂ ಅವರ ಪುತ್ರ. ಸರವಣ ಹೆಸರಿನ ಜವಳಿ, ಆಭರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಅನೇಕ ಮಳಿಗೆ, ಉದ್ಯಮಗಳಿವೆ. ಆದರೆ ಬಾಲ್ಯದಿಂದಲೂ ನಟಿಸುವ ಕನಸು ಹೊಂದಿದ್ದ ಲೆಜೆಂಡ್ ಸರವಣನ್ ಸಿನಿಮಾ ಮಾಡಿದ ಅರುಳ್ ಸರವಣನ್ ಈಗ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: 'ರಶ್ಮಿಕಾ ಅನಿಮಲ್​ ಯಶಸ್ಸಿನ ಶ್ರೇಯಸ್ಸು ತೆಗೆದುಕೊಳ್ಳಲಿಲ್ಲ' ಮಾತಿಗೆ ಸ್ಪಷ್ಟನೆ ಕೊಟ್ಟ ನಟಿ

Last Updated : Feb 25, 2024, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.