ಮುಂಬೈ: ಬಿಗ್ ಬಾಸ್ 14 ಕಾರ್ಯಕ್ರಮದ ವೇಳೆ ಜಾಸ್ಮಿನ್ ಭಾಸಿನ್ ಜೊತೆಗಿನ ಸಂಬಂಧ ಕುರಿತು ಅಲಿ ಗೋನಿ ಮಾತನಾಡಿದ್ದಾರೆ. ನತಾಶಾ ಸ್ಟಾಂಕೋವಿಕ್ನಿಂದ ದೂರವಾದ ಬಳಿಕ ಆಲಿ ಜಾಸ್ಮಿನ್ ಭಾಸಿನ್ ಜೊತೆ ಸಂಬಂಧದಲ್ಲಿದ್ದು, ಕಾರ್ಯಕ್ರಮದಲ್ಲಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದರು. ಇತ್ತೀಚಿಗೆ ಭರ್ತಿ ಸಿಂಗ್ ಮತ್ತು ಹರ್ಷ ಲಿಂಬಚಿಯ ಪೋಡ್ಕಾಸ್ಟ್ಗೆ ಬಂದಿದ್ದ ಅಲಿ, ಜಾಸ್ಮಿನ್ ಜೊತೆಗಿನ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ, ನತಾಶಾ ಜೊತೆಗಿನ ಹಳೆಯ ಸಂಬಂಧ ಕುರಿತು ಚರ್ಚಿಸಿದ್ದಾರೆ. ನಾತಾಶ ಜೊತೆ ಸಂಬಂಧ ಕಡಿದುಕೊಂಡ ಕಾರಣವನ್ನು ಬಯಲು ಮಾಡಿದ್ದಾರೆ.
ನತಾಶ ಹೆಸರನ್ನು ತೆಗೆದುಕೊಳ್ಳದೇ ಮಾತನಾಡಿದ ಅಲಿ, ತಮ್ಮ ಹಿಂದಿನ ಸಂಬಂಧದಲ್ಲಿ ತಾವು ಗಂಭೀರವಾಗಿ ಹಾಗೂ ಬದ್ಧತೆಯಿಂದ ಇದ್ದೆ. ಆದರೆ, ಆಕೆ ನಾನು ಮದುವೆಯಾದ ಮೇಲೆ ಭವಿಷ್ಯದಲ್ಲಿ ನಾವು ಪ್ರತ್ಯೇಕವಾಗಿರುವಂತೆ ತಿಳಿಸಿದಳು. ಅದು ನನಗೆ ಸೂಕ್ತ ಎನಿಸಲಿಲ್ಲ ಎಂದರು.
ನಾನು ಎಲ್ಲಿಯೇ ಹೋದರೂ ನನ್ನ ಕುಟುಂಬವನ್ನು ಕರೆದೊಯ್ಯುತ್ತೇನೆ. ನಾನು ಕುಟುಂಬದಿಂದ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಶಕ್ತಿ ಬಂದರೂ ನಾನು ಅವರನ್ನು ತೊರೆಯುವುದಿಲ್ಲ. ಜಾಸ್ಮಿನ್ ಭಾಸಿನ್ಗಿಂತ ಮುಂಚೆಯೇ ಇದು ಎಲ್ಲರಿಗೂ ತಿಳಿದಿತ್ತು ಎಂದು ಗೋನಿ ಭಾವುಕವಾಗಿ ಮಾತನಾಡಿದ್ದಾರೆ.
ಆ ರೀತಿ ಸಂಗಾತಿ ಸಿಗುವುದು ಕಷ್ಟ: ಸದ್ಯ ಜಾಸ್ಮಿನ್ ಜೊತೆ ಸಂಬಂಧದಲ್ಲಿರುವ ಅಲಿ ಗೋನಿ, ಆಕೆ ನಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ಪ್ರೀತಿಸುತ್ತಾರೆ. ಆಕೆ ಆಪ್ತತೆಯಿಂದ ಎಲ್ಲರೂ ನಮ್ಮವರೇ ಎಂಬ ರೀತಿ ಕಾಳಜಿ ಮಾಡುತ್ತಾರೆ. ನಿಮ್ಮ ಪೋಷಕರನ್ನು ನಿಮ್ಮಷ್ಟೇ ಪ್ರೀತಿಸುವ ಸಂಗಾತಿ ಸಿಗುವುದು ಬಲು ಕಷ್ಟ ಎಂದಿದ್ದಾರೆ.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಜೊತೆಗಿನ ಸಂಬಂಧ ಹೊಂದುವುದಕ್ಕೆ ಮುಂಚೆ ನತಾಶಾ, ಅಲಿ ಗೋನಿಯೊಂದಿಗೆ ಸಂಬಂಧದಲ್ಲಿದ್ದರು. 4-5 ವರ್ಷಗಳ ಕಾಲ ಇಬ್ಬರು ಡೇಟಿಂಗ್ ನಡೆಸಿದ್ದರು. 2019ರಲ್ಲಿ ನಚ್ ಬಲಿಯೇ 9ನೇ ಸೀಸನ್ನಲ್ಲಿ ನಾವಿಬ್ಬರು ಸಂಬಂಧದಲ್ಲಿರಲಿಲ್ಲ ಎಂದು ಅಲಿ ತಿಳಿಸಿದ್ದಾರೆ.
2020ರಲ್ಲಿ ಅಲಿ ಜಾಸ್ಮಿನ್ ಅವರನ್ನು ಭೇಟಿಯಾಗಿದ್ದರು. ಕತ್ರೋ ಕಿ ಖಿಲಾಡಿ ಕಾರ್ಯಕ್ರಮದಿಂದ ಇಬ್ಬರು ಸ್ನೇಹಿತರಾದರು. ಕಾರ್ಯಕ್ರಮದ ವೇಳೆ ಇವರಿಬ್ಬರ ನಡುವಿನ ಸಂಬಂಧ ಬಲವಾಯಿತು. ಬಳಿಕ ಬಿಗ್ ಬಾಸ್ 14ರ ಕಾರ್ಯಕ್ರಮದಲ್ಲಿ ನಾವು ಪರಸ್ಪರ ಪ್ರೀತಿಸುತ್ತಿರುವುದು ತಿಳಿಯಿತು ಎಂದು ಅಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ 'ಪುಷ್ಪ 2' ಖಡಕ್ ಲುಕ್ಗೆ ಫ್ಯಾನ್ಸ್ ಫಿದಾ: ಅದ್ಭುತ ಸಿನಿಮೀಯ ಅನುಭವಕ್ಕಿನ್ನು 100 ದಿನ