ಬಿಡುಗಡೆಗೆ ಸಜ್ಜಾಗಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ'ಯ ಪ್ರಚಾರ ಜೋರಾಗೇ ನಡೆಯುತ್ತಿದೆ. ಜೂನ್ 27ರಂದು ಚಿತ್ರಮಂದಿರ ಪ್ರವೇಶಿಸಲಿರುವ ಬಹುತಾರಾಗಣದ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಸರ್ವಪ್ರಯತ್ನ ಮಾಡುತ್ತಿದೆ. ಪ್ರಭಾಸ್ 'ಬುಜ್ಜಿ'ಯೊಂದಿಗೆ ಈಗಾಗಲೇ ಚಿತ್ರದ ಪ್ರಚಾರವನ್ನು ಆಕರ್ಷಕ ಟೀಸರ್‌ಗಳ ಮೂಲಕ ಶುರು ಮಾಡಿದ್ದಾರೆ. ಚಿತ್ರದ ಸುತ್ತಲಿನ ಹೈಪ್ ಹೆಚ್ಚಿಸಿದ್ದಾರೆ.
ಈ ಮಧ್ಯೆ, ಬುಜ್ಜಿಯು ತನ್ನ ವಿನ್ಯಾಸ ಮತ್ತು ಗಾತ್ರದಿಂದ ಈಗಾಗಲೇ ಸಾಕಷ್ಟು ಖ್ಯಾತಿ ಗಳಿಸಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರೀಗ ಈ ವಾಹನದ ಟೆಸ್ಟ್ ಡ್ರೈವ್ಗೆ ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರನ್ನು ಆಹ್ವಾನಿಸಿದ್ದಾರೆ.
ನಾಗ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ, ''ಡಿಯರ್ ಎಲೋನ್ ಮಸ್ಕ್ ಸರ್, ನಮ್ಮ ಬುಜ್ಜಿ ನೋಡಲು ಮತ್ತು ಓಡಿಸಲು ನಾವು ನಿಮ್ಮನ್ನು ಆಹ್ವಾನಿಸಲು ಇಷ್ಟಪಡುತ್ತೇವೆ. ಇದು 6 ಟನ್ ಬೀಸ್ಟ್. ಮೇಡ್ ಇನ್ ಇಂಡಿಯಾ. ಸಂಪೂರ್ಣ ಎಲೆಕ್ಟ್ರಿಕ್ ಆಗಿದ್ದು, ಎಂಜಿನಿಯರಿಂಗ್ ಸಾಧನೆ. ಬುಜ್ಜಿ ನಿಮ್ಮ ಸೈಬರ್ ಟ್ರಕ್‌ನೊಂದಿಗೆ ಉತ್ತಮ ಫೋಟೋ ಆಗಬಹು. (ಒಟ್ಟಿಗೆ ಸಂಚರಿಸುವುದನ್ನು ನೋಡುವುದು ಒಂದು ಉತ್ತಮ ದೃಶ್ಯ)" ಎಂದು ಬರೆದುಕೊಂಡಿದ್ದಾರೆ.
ಕಲ್ಕಿ 2898 ಎಡಿ ಚಿತ್ರವೀಗ ಹೊಚ್ಚ-ಹೊಸ ಪಾತ್ರ (ಬುಜ್ಜಿ)ದಿಂದ ಗಮನ ಸೆಳೆಯುತ್ತಿದೆ. ರೋಬೋಟ್ ಆಟೋಮೊಬೈಲ್ ಬುಜ್ಜಿ ಪಾತ್ರದ ಬಗ್ಗೆ ಪ್ರೇಕ್ಷಕರು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ತಯಾರಕರು ಇತ್ತೀಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 'ಬುಜ್ಜಿ'ಯನ್ನು ಪರಿಚಯಿಸಿದರು. ನಾಯಕ ನಟ ಪ್ರಭಾಸ್ ಇದೇ ಕಾರ್ನಲ್ಲಿ ಪ್ರವೇಶಿಸಿ ಪ್ರೇಕ್ಷಕರನ್ನು ಆಕರ್ಷಿಸಿದರು. ಬ್ರೈನ್ ಕಂಟ್ರೋಲ್ಡ್ ಕ್ಯಾರೆಕ್ಟರ್ 'ಬುಜ್ಜಿ'ಗೆ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ. ಕಥಾವಸ್ತುವಿಗೆ ಹೊಸ ದೃಷ್ಟಿಕೋನ ನೀಡಲಿದೆ ಎಂಬ ವಿಶ್ವಾಸ ನೋಡುಗರದ್ದು. ಸಿನಿಮಾಗಿದು ಬುದ್ಧಿವಂತ ಮತ್ತು ಥ್ರಿಲ್ಲಿಂಗ್ ಅಂಶವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: 'ಮಾರಿಗೆ ದಾರಿ': ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಟನೆ ಎಲ್ಲವೂ ಅಗಸ್ತ್ಯರದ್ದೇ! - Maarige Daari
ಅಭಿಮಾನಿಗಳು 'ಬುಜ್ಜಿ' ಬಗ್ಗೆ ಮಾತನಾಡುತ್ತಿರುವ ಈ ಹೊತ್ತಲ್ಲಿ, ಮಹೀಂದ್ರಾ ಗ್ರೂಪ್‌ನ ಚೇರ್ಮನ್ ಆನಂದ್ ಮಹೀಂದ್ರ ಅವರು ಚಿತ್ರತಂಡದ ಕ್ರಿಯೇಟಿವಿಟಿಯನ್ನು ಶ್ಲಾಘಿಸಿದರು. ಮಹೀಂದ್ರಾದಲ್ಲಿನ ಇಂಜಿನಿಯರ್‌ಗಳು ತಮ್ಮ ಪರಿಕಲ್ಪನೆಯನ್ನು ಅರಿತುಕೊಳ್ಳುವಲ್ಲಿ ಚಿತ್ರದ ಸಿಬ್ಬಂದಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. 6 ಟನ್ ತೂಕವಿರುವ ಬುಜ್ಜಿ 94kW ಪವರ್ ಉತ್ಪಾದಿಸುತ್ತದೆ. 47 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 6075 ಎಂಎಂ ಉದ್ದ, 3380 ಎಂಎಂ ಅಗಲ ಮತ್ತು 2186 ಎಂಎಂ ಎತ್ತರವಿರುವ ಕಾರು ಬಹಳ ದೊಡ್ಡದಾಗಿದೆ.
ವಾಹನದಲ್ಲಿ ಮೂರು ಟೈಯರ್‌ಗಳಿವೆ: ಹಿಂಭಾಗದಲ್ಲಿ ಒಂದ ಚಕ್ರ ಮತ್ತು ಮುಂಭಾಗದಲ್ಲಿ ಎರಡು ಚಕ್ರವಿದೆ. ಕಲ್ಕಿ 2898 ಎಡಿ ಚಿತ್ರ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಪೌರಾಣಿಕ ವಿಷಯದೊಂದಿಗೆ ಸೈನ್ಸ್ ಫಿಕ್ಷನ್ ಆಗಿದೆ. ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆಗೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ನಟಿಸಿದ್ದಾರೆ. ಇನ್ನೂ, ಜೂನ್ ಮೊದಲ ವಾರದಲ್ಲಿ ಕಲ್ಕಿ 2898 ಎಡಿ ಟ್ರೇಲರ್ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.