ETV Bharat / entertainment

ರೋಹಿತ್ ಶೆಟ್ರ ''ಸಿಂಗಂ ಅಗೈನ್​​''ನ ಟ್ರೇಲರ್ ಔಟ್​​: ಚಿತ್ರದಲ್ಲಿದೆ 'ರಾಮಾಯಣ' ಅಂಶಗಳು; ಹೇಗಿದೆ ಸೀನ್ಸ್? - Singham Again Trailer - SINGHAM AGAIN TRAILER

ಬಹುನಿರೀಕ್ಷಿತ ''ಸಿಂಗಂ ಅಗೈನ್​​''ನ ಟ್ರೇಲರ್ ಅನಾವರಣಗೊಂಡಿದೆ.

Singham Again Trailer release
ಸಿಂಗಂ ಅಗೈನ್ ಟ್ರೇಲರ್​ ರಿಲೀಸ್​​ (Photo Source: Film Poster)
author img

By ETV Bharat Entertainment Team

Published : Oct 7, 2024, 1:56 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ''ಸಿಂಗಂ ಅಗೈನ್​​''ನ ಟ್ರೇಲರ್ ಅನಾವರಣಗೊಂಡಿದೆ. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಬಾಲಿವುಡ್​ನ ದಿಗ್ಗಜರು ನಟಿಸಿದ್ದಾರೆ ಅನ್ನೋದು ವಿಶೇಷ. ಬಹುತಾರಾಗಣದ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಟ್ರೇಲರ್​​ಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಫೈನಲಿ ಇಂದು ಟ್ರೇಲರ್​ ಅನಾವರಣಗೊಂಡಿದ್ದು, ಸಂಪೂರ್ಣ ಸಿನಿಮಾ ನೋಡುವ ಕುತೂಹಲ ದುಪ್ಪಟ್ಟಾಗಿದೆ.

ಚಿತ್ರದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಅಜಯ್ ದೇವ್​ಗನ್ ಬಾಜಿರಾವ್ ಸಿಂಗಂ ಪಾತ್ರವನ್ನು ಪುನರಾವರ್ತಿಸಿದ್ದಾರೆ. ಇವರ ಜೊತೆ ಬಾಲಿವುಡ್​ನ ಬಹುಬೇಡಿಕೆ ತಾರೆಯರಾದ ಕರೀನಾ ಕಪೂರ್ ಖಾನ್, ರಣ್​​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಟ್ರೇಲರ್ ಸೋಷಿಯಲ್​ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ರೋಹಿತ್ ಶೆಟ್ಟಿ ಅವರ ವಿಶಿಷ್ಟ ನಿರ್ದೇಶನ ಶೈಲಿ ಮತ್ತೊಮ್ಮೆ ಸಾಬೀತಾಗಿದೆ. ಪವರ್​ಫುಲ್​ ಆ್ಯಕ್ಷನ್, ಡ್ರಾಮಾಗಳನ್ನೊಳಗೊಂಡ ಟ್ರೇಲರ್​​ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಅಂತಾರೆ ಹೆಚ್ಚಿನ ಸಂಖ್ಯೆಯ ಸಿನಿನಿಪ್ರಿಯರು. ಟ್ರೇಲರ್​ ನೋಡಿದ್ರೆ ಅಭಿಮಾನಿಗಳು ನಿರಾಶೆಗೊಳ್ಳುವುದಿಲ್ಲ ಅನ್ನೋದು ಬಹುತೇಕ ಖಚಿತವಾಗಿದೆ. ಅದ್ಭುತ ಸಿನಿಮೀಯ ಅನುಭವ ನೀಡಲು 'ಸಿಂಗಂ'ನ ಮುಂದುವರಿದ ಭಾಗ ಸಜ್ಜಾಗಿದೆ.

ಸೂಪರ್​ ಸ್ಟಾರ್ ಅಜಯ್ ದೇವ್​ಗನ್​ ಪಾತ್ರ ಸಿಂಗಮ್ ಧೈರ್ಯ, ದೃಢತೆ ಮತ್ತು ತೀವ್ರತೆಯೊಂದಿಗೆ ಮರಳಿರುವ ಹಿನ್ನೆಲೆ ಸಿನಿಮಾ ಸುತ್ತಲಿನ ಉತ್ಸಾಹ ಹೆಚ್ಚಿದೆ. ಭರ್ಜರಿ ಆ್ಯಕ್ಷನ್​ ಸೀನ್​ಗಳೇ ಟ್ರೇಲರ್​ನ ಹೈಲೆಟ್​​.

ಇದನ್ನೂ ಓದಿ: ಶೈನ್ ಶೆಟ್ಟಿ 'ಜಸ್ಟ್ ಮ್ಯಾರಿಡ್' ಅಂದ್ರು ರಿಯಲ್ ಸ್ಟಾರ್ ಉಪೇಂದ್ರ - Just Married

ಸಂಗ್ರಾಮ್ ಭಲೇರಾವ್ (ಸಿಂಬಾ) ಆಗಿ ರಣ್​​ವೀರ್ ಸಿಂಗ್ ಹಿಂದಿರುಗಿರುವುದು ಮತ್ತು ನೋ ನಾನ್ಸೆನ್ಸ್ ವೀರ್ ಸೂರ್ಯವಂಶಿಯಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿರುವುದು ಟ್ರೇಲರ್​​ನ ಆಕರ್ಷಕ ಅಂಶಗಳಲ್ಲೊಂದು. ಮತ್ತೊಂದೆಡೆ, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪವರ್​ಫುಲ್​ ಶಕ್ತಿ ಶೆಟ್ಟಿ ಪಾತ್ರವನ್ನು ಈ ಬಹುನಿರೀಕ್ಷಿತ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಬಿಗ್​​ ಬಾಸ್​​ನಿಂದ ಯಮುನಾ ಔಟ್; ಮನೆಯಲ್ಲಿ ಮತ್ತೆ ಕಿರುಚಾಟ: ನಿಮ್ಮ ಅಭಿಪ್ರಾಯವೇನು? - Bigg Boss Kannada 11

ಸಿನಿಮಾದ ಮುಂದುವರಿದ ಭಾಗಗಳು, ಸಮಗ್ರ ಪಾತ್ರವರ್ಗವು ಬಾಲಿವುಡ್ ಆ್ಯಕ್ಷನ್ ಚಿತ್ರಗಳ ತೂಕ ಹೆಚ್ಚಿಸುತ್ತಿದೆ. ಸಿಂಗಮ್ ಎಗೈನ್​​​ ಬ್ಲಾಕ್​ಬಸ್ಟರ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ನವೆಂಬರ್ 1 ರಂದು ಬಿಡುಗಡೆಯಾಗಲು ಸಿನಿಮಾ ಸಜ್ಜಾಗಿದ್ದು, ಪ್ರಮೋಶನ್​ ಜೋರಾಗೇ ನಡೆಯುತ್ತಿದೆ. ಆದ್ರೆ ಈ ಚಿತ್ರವು ಬಾಲಿವುಡ್​ನ ಮತ್ತೋರ್ವ ಸೂಪರ್​ ಸ್ಟಾರ್ ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯ್ಯಾ 3 ಎದುರು ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.