ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಮತ್ತೊಂದು ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಸ್ವತಃ ನಟಿಯೇ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಪ್ರಣಿತಾ ಸುಭಾಷ್ ಇನ್ಸ್ಟಾ ಪೋಸ್ಟ್: ಹೌದು, ಪ್ರಣಿತಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಗರ್ಭಿಣಿ ಆಗಿರುವ ವಿಚಾರವನ್ನು ಚೆಂದುಳ್ಳಿ ಚೆಲುವೆ ಹಂಚಿಕೊಂಡಿದ್ದಾರೆ. ಐದು ಫೋಟೋಗಳನ್ನು ಹಂಚಿಕೊಂಡಿರುವ ನಟಿ ರೌಂಡ್ 2, ಪ್ಯಾಂಟ್ ಫಿಟ್ ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್ಗೆ ಬ್ಲ್ಯಾಕ್ ಸೀವ್ಲೆಸ್ ಟಾಪ್ ಧರಿಸಿದ್ದು, ತಾಯಿಯಾಗುತ್ತಿರುವ ಕಳೆ ನಟಿಯ ಮೊಗದಲ್ಲಿ ಎದ್ದು ಕಾಣುತ್ತಿದೆ.
2022ರ ಜೂನ್ನಲ್ಲಿ ಮೊದಲ ಮಗು ಜನನ: ಪ್ರಣಿತಾ ಸುಭಾಷ್, ಸ್ಯಾಂಡಲ್ವುಡ್ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿದ್ದ ನಟಿ ಮದುವೆ, ಮಗು ಎಂದು ತಮ್ಮ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟರು. 2022ರ ಜೂನ್ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.
2021ರಲ್ಲಿ ದಾಂಪತ್ಯ ಜೀವನ ಆರಂಭ: 2021ರ ಮೇ ತಿಂಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಕೋವಿಡ್, ಮದುವೆ, ಮಗು ಎಂದು ಚಿತ್ರರಂಗದಿಂದ ಕೊಂಚ ದೂರ ಉಳಿದ ನಟಿ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದರು. ತಮ್ಮ ಗ್ಲ್ಯಾಮರಸ್ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾ ಸಖತ್ ಸದ್ದು ಮಾಡುವ ನಟಿ ಇವರು. ಸರಳವಾಗಿ ಸೀಮಂತ ಮಾಡಿಕೊಂಡಿದ್ದ ಚಿತ್ರವನ್ನೂ ಕೂಡ ಶೇರ್ ಮಾಡಿ ಗಮನ ಸೆಳೆದಿದ್ದರು. ಮಗಳೊಂದಿಗಿನ ಹಲವು ಚೆಂದದ ಫೋಟೋಗಳು ಸಹ ಫ್ಯಾನ್ಸ್ ಪ್ರೀತಿಗೆ ಪಾತ್ರವಾಗಿವೆ. ಇದೀಗ ಶೇರ್ ಮಾಡಿರುವ ಲೇಟೆಸ್ಟ್ ಬೇಬಿ ಬಂಪ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ತಮ್ಮ ಕಿರಿವಯಸ್ಸಿನಲ್ಲೇ ಪ್ರಣಿತಾ ಚಿತ್ರರಂಗದಲ್ಲಿ ಪ್ರಜ್ವಲಿಸಿದರು. 2010ರಲ್ಲಿ 'ಪೊರ್ಕಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣಿತಾ, ಅತಿ ಕಡಿಮೆ ಸಮಯದಲ್ಲಿ ಜನಪ್ರಿಯರಾಗಿ ಬೇಡಿಕೆ ಹೆಚ್ಚಿಸಿಕೊಂಡರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ 'ಡೆವಿಲ್' ರಿಲೀಸ್ ಮುಂದೂಡಿಕೆ ಸಾಧ್ಯತೆ: ಆತಂಕದಲ್ಲಿ ನಿರ್ದೇಶಕ ಪ್ರಕಾಶ್ - Darshan Devil Movie
ಫ್ಯಾಮಿಲಿ ಟೈಮ್ ಎಂದು ಸಖತ್ ಬ್ಯುಸಿಯಿದ್ದ ಪ್ರಣಿತಾ ಇತ್ತಿಚೆಗಷ್ಟೇ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ರಿಷಿ ಹಾಗೂ ಶುಭ್ರ ಅಯ್ಯಪ್ಪ ಜೊತೆ 'ರಾಮನ ಅವತಾರ' ಎಂಬ ಚಿತ್ರದಲ್ಲಿ ಪ್ರಣಿತಾ ಕಾಣಿಸಿಕೊಂಡಿದ್ದಾರೆ. ಇದೇ ಸಾಲಿನ ಮೇ 10ರಂದು ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಇದನ್ನೂ ಓದಿ: ಲಂಡನ್ನಿಂದ ಅನುಷ್ಕಾ - ವಿರಾಟ್ ಹೊಸ ಫೋಟೋ ವೈರಲ್: ಫ್ಯಾನ್ಸ್ ಮೆಚ್ಚುಗೆ - Virat Anushka