ETV Bharat / entertainment

ಮೋಕ್ಷಿತಾ - ತ್ರಿವಿಕ್ರಮ್​​​ ವಾಕ್ಸಮರ: ನಿಮ್ಮ ಪ್ರಕಾರ ಈ ಮನೇಲಿ 10 ವಾರ ಉಳಿಯೋರು ಯಾರು? - BIGG BOSS KANNADA 11

ತಾಳ್ಮೆಯ ಪ್ರತಿರೂಪದಂತಿದ್ದ ಮೋಕ್ಷಿತಾ ಅವರು ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿ ಕೆರಳಿ ಕೆಂಡವಾಗಿದ್ದಾರೆ.

Bigg Boss Kannada 11
ಬಿಗ್​ ಬಾಸ್​ ಕನ್ನಡ​ ಸೀಸನ್​ 11 (Bigg Boss Poster)
author img

By ETV Bharat Entertainment Team

Published : Oct 28, 2024, 12:41 PM IST

'ಬಿಗ್​ ಬಾಸ್​​ ಸೀಸನ್​ 11'ರ ನಾಲ್ಕನೇ ವಾರಾಂತ್ಯದ ಎಲಿಮಿನೇಷನ್​ ಬಗೆಗಿನ ಕುತೂಹಲ ಬಹಳಾನೇ ಇತ್ತು. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್​ ಎಪಿಸೋಡ್​ಗಳನ್ನು ಈ ಬಾರಿ ಕಿಚ್ಚ ಸುದೀಪ್​​​ ಅವರು ನಡೆಸಿಕೊಟ್ಟಿಲ್ಲ. ಬದಲಾಗಿ ಚಂದನವನದ ಖ್ಯಾತ ನಿರ್ದೇಶಕ ಯೋಗರಾಜ್​​ ಭಟ್​​​ ಮತ್ತು ಜನಪ್ರಿಯ ಹೋಸ್ಟ್ ಸೃಜನ್​ ಲೋಕೇಶ್​​ ಅವರುಗಳು ತಮ್ಮದೇ ಶೈಲಿಯಲ್ಲಿ ನಡೆಸಿಕೊಟ್ಟರು. ನಿನ್ನೆ ಸಂಚಿಕೆಯ ಕೊನೆಯಲ್ಲಿ ತಿಳಿದು ಬರಬೇಕಿದ್ದ ಎಲಿಮಿನೇಷನ್​​ ಸ್ಪರ್ಧಿಯ ಹೆಸರನ್ನು ಬಿಗ್​ ಬಾಸ್​ ಬಹಿರಂಗಪಡಿಸದೇ ಇಂದಿನ ಸಂಚಿಕೆಗೆ ಕಾಯ್ದಿರಿಸಿದ್ದಾರೆ. ಆದ್ರೆ ಓರ್ವ ಸ್ಪರ್ಧಿ ಹೊರಹೋಗುವ ಮುನ್ನವೇ ಮನೆಯಲ್ಲಿ ದೊಡ್ಡ ಮಟ್ಟದ ವಾದ ವಿವಾದ ನಡೆದಿದೆ.

''ತ್ರಿವಿಕ್ರಮ್-ಮೋಕ್ಷಿತಾ ಮಧ್ಯೆ ಹೊತ್ತಿಕೊಳ್ತಾ ಬೆಂಕಿ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ದೃಶ್ಯದಲ್ಲಿ ಕರುಣಾಮಯಿಯಂತಿದ್ದ ಪಾರು ಖ್ಯಾತಿಯ ಮೋಕ್ಷಿತಾ ಅವರು ಮನೆಯಲ್ಲಿ ಇದೇ ಮೊದಲ ಬಾರಿ ತಾಳ್ಮೆ ಕಳೆದುಕೊಂಡು, ತಮ್ಮ ಆಕ್ರೋಶ ಹೊರಹಾಕಿರುವುದನ್ನು ಕಾಣಬಹುದು. ತ್ರಿವಿಕ್ರಮ್ ಅವರೊಂದಿಗೆ ಮಾತಿನ ಚಕಮಕಿ ಜೋರಾಗೇ ನಡೆದಿದೆ.

ಕಳೆದ ರಾತ್ರಿ ಪ್ರಸಾರವಾದ ಸಂಚಿಕೆಯಲ್ಲಿ ಎಲಿಮಿನೇಷನ್​ಗೆ ನಾಮಿನೇಷನ್​​​ ಆದವರ ಪೈಕಿ ಒಬ್ಬೊಬ್ಬರನ್ನೇ ಸೇವ್​ ಮಾಡುತ್ತಾ ಬರಲಾಯಿತು. ಕೊನೆಯಲ್ಲಿ ಮೋಕ್ಷಿತಾ ಮತ್ತು ಹಂಸ ಅವರುಗಳು ಉಳಿದಿದ್ದಾರೆ. ಈ ಇಬ್ಬರಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ಕೊನೆಯಲ್ಲಿ ಬಿಗ್​ ಬಾಸ್​ ಈ ಇಬ್ಬರ ಬಳಿಯೂ ಅಭಿಪ್ರಾಯ ಕೇಳಿದಾಗ, ಓರ್ವರನ್ನು ನೇರ ಮಾಮಿನೇಟ್​ ಮಾಡಲು ತಿಳಿಸಿದಾಗ ಮೋಕ್ಷಿತಾ ಅವರು ತ್ರಿವಿಕ್ರಮ್​​ ಆಟದ ಬಗ್ಗೆ ಮಾತನಾಡಿದ್ದರು. ಸ್ಟ್ರಾಟಜಿ ನಡೆಯುತ್ತಿದೆ ಎಂದು ತಿಳಿಸಿ ಅವರ ಹೆಸರನ್ನು ಸೂಚಿಸಿದ್ದರು. ಅಲ್ಲಿಗೆ ಕಳೆದ ಎಪಿಸೋಡ್​​​ ಮುಕ್ತಾಯಗೊಂಡಿದೆ.

ಇದನ್ನೂ ಓದಿ: 'ನಾನು ಏನು ಬೇಕಾದರೂ ಮಾಡಬಲ್ಲೆ': ಅಭಿಷೇಕ್​ ಬಚ್ಚನ್​​ ಜೊತೆಗಿನ ಡೇಟಿಂಗ್​ ವದಂತಿಗೆ ನಿಮ್ರತ್ ಕೌರ್ ಪ್ರತಿಕ್ರಿಯೆ

ನಂತರ ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ಈ ಹಿಂದೆ ಉಗ್ರಂ ಮಂಜು ಮತ್ತು ತ್ರಿವಿಕ್ರಮ್​​ ನಡೆಸಿದ್ದ ಚರ್ಚೆ ಒಂದನ್ನು ಮಂಜು ಅವರು ಮೋಕ್ಷಿತಾ ಬಳಿ ಹೇಳುತ್ತಾರೆ. ಅಂದು ಇವರೆಲ್ಲ 10 ವಾರಗಳವರೆಗೆ ಇರುತ್ತಾರೆ, ನಂತರ ಇಲ್ಲಿ ಕೆಲಸ ಇಲ್ಲ ಎಂಬಂತೆ ತ್ರಿವಿಕ್ರಮ್​​ ಮಾತನಾಡಿರುತ್ತಾರೆ. ಇವುಗಳು ಮೋಕ್ಷಿತಾ ಅವರನ್ನು ಕೆಣಕಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮಾತಿನ ಮಲ್ಲ ಸೃಜನ್​ ಲೋಕೇಶ್​​: ಯಾರು ಎಲಿಮಿನೇಟ್​ ಆಗ್ಬೇಕು?

ನಾವು 10 ವಾರವಷ್ಟೇ ಇರೋದು ಅಂತಾ ನಿರ್ಧರಿಸಲು ಇವರಾರು? ಎಂದು ಮೋಕ್ಷಿತಾ ಹೇಳಿದರೆ, ಆಯ್ತಮ್ಮಾ ನೀನ್​ ಫಿನಾಲೆಗೆ ಹೋಗು ಎಂದು ತ್ರಿವಿಕ್ರಮ್ ತಿಳಿಸಿದ್ದಾರೆ. ಇವರೊಬ್ಬರೇ (ತ್ರಿವಿಕ್ರಮ್​) ಫಿನಾಲೆಗೆ ಹೋಗುವವರು. ನಾವೆಲ್ಲಾ ಐದೈದು ವರ್ಷ ಸೀರಿಯಲ್​ ಮಾಡಿ ಬಂದವರಷ್ಟೇ ಅಲ್ವಾ ಎಂದು ತ್ರಿವಿಕ್ರಮ್​ ಎದುರು ಮೋಕ್ಷಿತಾ ಅಸಮಾಧಾನ ಹೊರಹಾಕಿದ್ದಾರೆ. ಘೋಮುಖ ವ್ಯಾಘ್ರನಂತೆ ಆಟವಾಡುತ್ತಿದ್ದೀರ ಎಂದು ಮೋಕ್ಷಿತಾ ಹೇಳಿದ್ದು, ನೀವೇನು ತಿಳಿದುಕೊಂಡಿದ್ದೀರೋ ಅದನ್ನೇ ನಾನು ಸುಳ್ಳು ಮಾಡ್ತೀನಿ ಎಂದು ತ್ರಿವಿಕ್ರಮ್​ ತಿಳಿಸಿದ್ದಾರೆ. ಕೆರಳಿದ ಮೋಕ್ಷಿತಾ ಈ ಮನೆಯಲ್ಲಿ ಯಾರು 10 ವಾರ ಇರೋದು ಅನ್ನೋದನ್ನು ನಾನೂ ನೋಡೇ ಬಿಡ್ತೀನಿ ಎಂದು ಚಾಂಲೆಂಜ್​​ ಹಾಕಿ, ಇಂದಿನಿಂದ ನಿಜವಾದ ಆಟ ಶರು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.