ETV Bharat / entertainment

ಮಾಲಿವುಡ್ ಮೆಗಾಸ್ಟಾರ್ ಮೋಹನ್ ಲಾಲ್ ಆರೋಗ್ಯದಲ್ಲಿ ಚೇತರಿಕೆ - Mohanlal Health Update - MOHANLAL HEALTH UPDATE

ಮಾಲಿವುಡ್ ಮೆಗಾಸ್ಟಾರ್ ಮೋಹನ್ ಲಾಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Mollywood megastar Mohanlal
ಮಾಲಿವುಡ್ ಮೆಗಾಸ್ಟಾರ್ ಮೋಹನ್ ಲಾಲ್ (ANI)
author img

By ETV Bharat Entertainment Team

Published : Aug 19, 2024, 6:38 PM IST

ಹೈದರಾಬಾದ್: ಮಾಲಿವುಡ್ ಮೆಗಾಸ್ಟಾರ್ ಮೋಹನ್ ಲಾಲ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಚಿಕಿತ್ಸೆ ಸಲುವಾಗಿ ಕೇರಳದ ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಕಾಣಿಸಿಕೊಂಡ ನಂತರ ಅವರನ್ನು ಅಮೃತಾ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ಮೋಹನ್ ಲಾಲ್ ಎರ್ನಾಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಐದು ದಿನಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಆದರೆ ಇನ್ನೊಂದೆಡೆ, ನಟ ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮೋಹನ್ ಲಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳನ್ನು ಆಸ್ಪತ್ರೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಮೋಹನ್ ಲಾಲ್ ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಲು ನಟನ ಆಪ್ತ ಮೂಲಗಳು ನಿರಾಕರಿಸಿವೆ.

ನಟ ಆಗಸ್ಟ್ 15ರಂದು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಅಧಿಕೃತ ಹೇಳಿಕೆ ಆಗಸ್ಟ್ 16ರಂದು ಬಂತು. ಅಲ್ಲದೇ ನಟ ಮೇಜರ್ ರವಿ ಅವರ ಸೋಷಿಯಲ್ ಮೀಡಿಯಾ ಪೋಸ್ಟ್​ ಗಮನ ಸೆಳೆದಿತ್ತು. ಮೋಹನ್‌ಲಾಲ್ ಅಸ್ವಸ್ಥರಾದ ದಿನ, ಅವರೊಂದಿಗೆ ಹಲವು ಸಭೆಗಳಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: 'ವಿನಯ್ ರಾಜ್​ಕುಮಾರ್​​ ಮಲಯಾಳಂ ನಟನಂತೆ ಕಾಣ್ತಾನೆ': ಪೆಪೆ ಟ್ರೇಲರ್ ಅನಾವರಣಗೊಳಿಸಿದ ಶಿವಣ್ಣ​ - PEPE Trailer

ಮೋಹನ್‌ಲಾಲ್ ಅವರ ಸಿನಿಮಾ ವಿಚಾರ ಗಮನಿಸೋದಾದರೆ, ಇತ್ತೀಚೆಗೆ ತಮ್ಮ ಎಲ್​2: ಎಂಪುರಾನ್ ಚಿತ್ರದ ಕೆಲಸ ಪೂರ್ಣಗೊಳಿಸಿ ಗುಜರಾತ್‌ನಿಂದ ಮರಳಿದರು. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ಬರೋಝ್ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ. ಬರೋಝ್ ನಟ ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರವಾಗಿರೋ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಚಿತ್ರ ಇದೇ ಸಾಲಿನ ಅಕ್ಟೋಬರ್​​ 2ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಎಲ್​2: ಎಂಪುರಾನ್ ಕೂಡ ಬಿಡುಗಡೆಗೆ ಅಣಿಯಾಗುತ್ತಿದೆ. ಕೊನೆಯದಾಗಿ ಮೋಹನ್‌ಲಾಲ್ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಪೀರಿಯಾಡಿಕಲ್​​ ಆ್ಯಕ್ಷನ್ ಡ್ರಾಮಾ ಮಲೈಕೊಟ್ಟೈ ವಾಲಿಬನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್​​ ಹೀರೋ ಶೂಟಿಂಗ್​​ ಸೆಟ್​ಗೆ ರಾಕಿಂಗ್​​ ಸ್ಟಾರ್ ಎಂಟ್ರಿ: ಶಿವಣ್ಣ-ಯಶ್​​​ ಭೇಟಿ ವಿಡಿಯೋ ನೋಡಿ - Yash Met Shiva Rajkumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.