ETV Bharat / entertainment

ತಾಯ್ತನದ ಸಂಭ್ರಮದಲ್ಲಿ ಮಸಾಬಾ ಗುಪ್ತಾ; ಬೇಬಿ ಶವರ್​ ಫೋಟೋ ವೈರಲ್​ - Masaba Gupta Baby shower

author img

By ANI

Published : Aug 26, 2024, 1:47 PM IST

2023ರಲ್ಲಿ ಸತ್ಯದೀಪ್​ ಮಿಶ್ರಾವರಿಸಿದ್ದ ಮಸಾಬಾ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

masaba-gupta-baby-shower-photo-goest-viral-in-social-media
ಮಸಾಬಾ ಗುಪ್ತಾ ಬೇಬಿ ಶವರ್​ ಫೋಟೋ (ಮಸಾಬಾ ಗುಪ್ತಾ ಬೇಬಿ ಶವರ್​ ಫೋಟೋ)

ಮುಂಬೈ: ಫ್ಯಾಷನ್​ ಡಿಸೈನರ್​ ಮಸಾಬಾ ಗುಪ್ತಾ ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗೆ ಇವರ ಸೀಮಂತ ಸಂಭ್ರಮದ (ಬೇಬಿ ಶವರ್​) ಕಾರ್ಯಕ್ರಮ ಭಾನುವಾರ ಆತ್ಮೀಯರ ಸಮ್ಮುಖದಲ್ಲಿ ನಡೆದಿದ್ದು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಅನೇಕ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

(null)

ಸೋನಿ ರಜಾದನ್​ ಅವರು ಮಗಳು ಶಹೀನ್​ ಭಟ್​​ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮಸಾಬಾ ಅವರ ಬೇಬಿ ಶವರ್​ ಫೋಟೋಗಳನ್ನು ಹಂಚಿಕೊಂಡು ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾರ್ಯಕ್ರಮದಲ್ಲಿ ಮಸಾಬಾ ತಿಳಿ ಕಂದು ಬಣ್ಣದ ದಿರಿಸಿನಲ್ಲಿ, ತಾಯ್ತನದ ಹೊಳಪಿನಲ್ಲಿ ಕಂಗೊಳಿಸಿದರು. ಸೋನಿ ರಜಾದನ್​ ಹಂಚಿಕೊಂಡ ಚಿತ್ರದಲ್ಲಿ ಮಸಾಬಾ ಮತ್ತು ಅವರ ತಾಯಿ ನೀನಾ ಗುಪ್ತಾ ಅವರನ್ನು ಕಾಣಬಹುದಾಗಿದೆ. ನಟಿ ಸೋನಂ ಕಪೂರ್​ ಕೂಡ ಈ ಫೋಟೋವನ್ನು ತಮ್ಮ ಇನ್​​​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದು ಫೋಟೋ ಹಂಚಿಕೊಂಡಿರುವ ಸೋನಂ ಕಪೂರ್​​, ಮಸಾಬಾ ಗುಪ್ತಾ ಮತ್ತು ಸಹೋದರಿ ರಿಯಾ ಕಪೂರ್​ ಅವರನ್ನು ತಬ್ಬಿ ಹಿಡಿದಿದ್ದಾರೆ.

ಏಪ್ರಿಲ್​ನಲ್ಲಿ ತಾವು ತಾಯಿಯಾಗುತ್ತಿರುವ ಕುರಿತು ಖ್ಯಾತ ಡಿಸೈನರ್​ ಆಗಿರುವ ಮಸಾಬಾ ತಮ್ಮ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದರು. 2023ರ ಜನವರಿಯಲ್ಲಿ ಮಸಾಬಾ ನಟ ಸತ್ಯದೀಪ್​ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಈ ಸಮಾರಂಭದಲ್ಲಿ ಅವರ ತಾಯಿ ನೀನಾ ಗುಪ್ತಾ, ತಂದೆ ವಿವಿನ್​ ರಿಚರ್ಡ್ಸ್​​ ಮತ್ತು ಮಲ ತಂದೆ ವಿವೇಕ್​ ಮೆಹ್ರಾ ಒಟ್ಟಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋವನ್ನು ಮಸಾಬಾ ಹಂಚಿಕೊಂಡಿದ್ದರು. ಮೊದಲ ಬಾರಿಗೆ ನಮ್ಮ ಇಡೀ ಕುಟುಂಬ ಒಟ್ಟುಗೂಡಿದ್ದೇವೆ. ನನ್ನ ಸುಂದರ ಕುಟುಂಬ ಎಂಬ ಅಡಿಬರಹವನ್ನು ಕೂಡಾ ಬರೆದಿದ್ದರು.

ಮಸಾಬಾ ಗುಪ್ತಾ ವೃತ್ತಿ ಮತ್ತು ವೈಯಕ್ತಿಕ ಜೀವನದ ಕುರಿತು ಮಸಾಬಾ ಮಸಾಬಾ ಎಂಬ ನೆಟ್​ಫ್ಲಿಕ್ಸ್​ನ ಸೀರಿಸ್​ನಲ್ಲಿ ಸತ್ಯದೀಪ್​ ಜೊತೆಗೆ ಸತ್ಯದೀಪ್​ ಕಾರ್ಯ ನಿರ್ವಹಿಸಿದ್ದರು. ಈ ಮೊದಲು ಮಸಾಬಾ ನಿರ್ಮಾಪಕ ಮಧು ಮಂಟೆನಾ ಜೊತೆಗೆ 2015ರಲ್ಲಿ ಮದುವೆಯಾಗಿದ್ದರು. ಆದರೆ, 2019ರಲ್ಲಿ ಈ ಜೋಡಿ ದೂರಾಗಿತ್ತು. ಸತ್ಯದೀಪ್ ಈ ಮೊದಲು 2013ರಲ್ಲಿ ಅದಿತಿ ರಾವ್​ ಹೈದರಿಯನ್ನು ವರಿಸಿದ್ದು, ಬಳಿಕ ಬೇರ್ಪಟ್ಟಿದ್ದರು.

ಇದನ್ನೂ ಓದಿ: ಹಸೆಮಣೆ ಏರಿದ ಮಸಾಬಾ ಗುಪ್ತಾ - ಸತ್ಯದೀಪ್ ಮಿಶ್ರಾ: ಈ ಜೋಡಿಗಿದು ಎರಡನೇ ಮದುವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.