ದೂದ್ ಪೇಡಾ ದಿಗಂತ್ ಹಾಗು ಸಂಗೀತಾ ಶೃಂಗೇರಿ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರವೇ 'ಮಾರಿಗೋಲ್ಡ್'. ಟೈಟಲ್ನಿಂದ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗುತ್ತಿರುವ 'ಮಾರಿಗೋಲ್ಡ್' ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಎದುರು ನೋಡುತ್ತಿದೆ. ಇಂದು ಟೀಸರ್ ಅನಾವರಣಗೊಂಡು ನೋಡುಗರ ಕುತೂಹಲ ಹೆಚ್ಚಿಸಿದೆ.
ನಿರ್ದೇಶಕ ರಾಘವೇಂದ್ರ ಎಂ.ನಾಯ್ಕ್ ಮಾತನಾಡಿ, 'ಮಾರಿಗೋಲ್ಡ್' ಗೋಲ್ಡ್ ಬಿಸ್ಕೆಟ್ ಮಾರಲು ಹೋದ ನಾಲ್ವರು ಹುಡುಗರ ಕಥೆ. ಚಿತ್ರದುರ್ಗ, ಬೆಂಗಳೂರು, ಸಕಲೇಶಪುರ ಮತ್ತಿತರ ಕಡೆಗಳಲ್ಲಿ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ನಂತರದ ಬೆಳವಣಿಗೆಗಳಿಂದ ಚಿತ್ರ ವಿಳಂಬವಾಯಿತು. ಸದ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಶುದ್ಧ ಮನರಂಜನೆಗೆ ಒತ್ತು ನೀಡಲಾಗಿದೆ. ದಿಗಂತ್ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿತ್ತು. ಇದು ಮನರಂಜನೆ ಮತ್ತು ಥ್ರಿಲ್ಲರ್ ಕಥೆಯಾಧಾರಿತ ಸಿನಿಮಾ ಎಂದು ಅವರು ಮಾಹಿತಿ ಹಂಚಿಕೊಂಡರು.
ದಿಗಂತ್ ಮಾತನಾಡಿ, ಈ ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದಲ್ಲಿ ಬುದ್ಧಿವಂತ ಸ್ಕ್ಯಾಮರ್ ಪಾತ್ರ ನನ್ನದು ಎಂದರು. ದಿಗಂತ್ ಜೊತೆ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿರುವ ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಮಾತನಾಡಿ, ದಿಗಂತ್ ನನ್ನ ಬಾಲ್ಯದ ಕ್ರಶ್. ಈ ವಿಚಾರವನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ದೃಶ್ಯಗಳನ್ನು ತೋರಿಸಿದ್ದಾರೆ. ಚಿತ್ರದಿಂದ ಸುಮಾರು ವರ್ಷದ ಕನಸು ಕನಸಾಗಿದೆ ಎಂದರು.
- " class="align-text-top noRightClick twitterSection" data="">
ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ, ಮಾರಿಗೋಲ್ಡ್ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಎಂದು ತಿಳಿಸಿದರು. ಇವರ ಜೊತೆ ಕಾಕ್ರೋಚ್ ಸುಧೀ, ಸಂಪತ್ ಮೈತ್ರೇಯ, ವಜ್ರಾಂಗ್ ಶೆಟ್ಟಿ, ಬಾಲ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸಿ ಕಿಸ್ಸಿಂಗ್ ಸೀನ್: 'ಫೈಟರ್'ಗೆ ವಾಯುಪಡೆ ಅಧಿಕಾರಿಯಿಂದ ನೋಟಿಸ್
ಸಂಭಾಷಣೆಕಾರ ರಘು ನಿಡವಳ್ಳಿ, ಚಿತ್ರದಲ್ಲಿ ವಿಭಿನ್ನ ಸಂಭಾಷಣೆ ಇದೆ ಎಂದರೆ, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡುತ್ತಾ, ಚಿತ್ರದಲ್ಲಿ ಎರಡು ಹಾಡುಗಳಿವೆ ಎಂದು ತಿಳಿಸಿದರು. ಇದೊಂದು ಥ್ರಿಲ್ಲರ್, ಆ್ಯಕ್ಷನ್ ಸಿನಿಮಾ. ನಮ್ಮ ಚಿತ್ರ ಹಿಟ್ ಆದರೆ ದಿಗಂತ್ ಆ್ಯಕ್ಷನ್ ಹೀರೋ ಆಗಲಿದ್ದಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ನಿರೂಪ್ ಭಂಡಾರಿ - ಸಾಯಿಕುಮಾರ್ ನಟನೆಯ ಸಿನಿಮಾ ಟೈಟಲ್ ರಿವೀಲ್; ಹೆಚ್ಚಿದ ಕುತೂಹಲ
ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲೆ, ನೃತ್ಯ ಕಲೆ, ಅರ್ಜುನ್ ರಾಜ್ ಸಾಹಸ ಹಾಗೂ ನಿರ್ಮಾಣ ನಿರ್ವಹಣೆ-ಜೇವಿಯರ್ ಫರ್ನಾಂಡಿಸ್ ಚಿತ್ರಕ್ಕಿದೆ. ಆರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ ರಘುವರ್ಧನ್ ನಿರ್ಮಿಸಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಮಾರಿಗೋಲ್ಡ್ ತೆರೆಗೆ ತರುವ ಉದ್ದೇಶವಿದೆ.