20 ವರ್ಷಗಳ ಹಿಂದೆ, ಈ ದಿನದಂದು ಅಂದರೆ 2004ರ ಜನವರಿ 30ರಂದು 'ಮಕ್ಬೂಲ್' (Maqbool) ಸಿನಿಮಾ ತೆರೆಗಪ್ಪಳಿಸಿತ್ತು. ವಿಶಾಲ್ ಭಾರದ್ವಾಜ್ ಆ್ಯಕ್ಷನ್ ಕಟ್ ಹೇಳಿದ್ದ ಈ ಕ್ರೈಮ್ ಸಿನಿಮಾ ಶೇಕ್ಸ್‌ಪಿಯರ್ ಅವರ 'ಮ್ಯಾಕ್‌ಬೆತ್'ನ (Macbeth) ರೂಪಾಂತರ. ಇರ್ಫಾನ್ ಖಾನ್ ಅವರು ಈ ಚಿತ್ರದ ಮೂಲಕ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು. ಅಮೋಘ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಯಿತು. ಇರ್ಫಾನ್ ಈ ಚಿತ್ರಕ್ಕೂ ಮುನ್ನ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದರೂ, 'ಮಕ್ಬೂಲ್' ಹೆಚ್ಚು ಸದ್ದು ಮಾಡಿತು. ಅವರ ವೃತ್ತಿಜೀವನದ ಪ್ರಮುಖ ಸ್ಥಾನದಲ್ಲಿ ಈ ಚಿತ್ರವಿದೆ.
- " class="align-text-top noRightClick twitterSection" data="">
ಇರ್ಫಾನ್ ಖಾನ್ ಈ ಚಿತ್ರದಲ್ಲಿ ಕೇಂದ್ರ ಪಾತ್ರವಾದ ಮಿಯಾನ್ ಮಕ್ಬೂಲ್ ಅನ್ನು ನಿರ್ವಹಿಸಿದ್ದರು. ಡಾನ್ ಮತ್ತು ಪ್ರೇಮಿಯಾಗಿ ಪಾತ್ರವನ್ನು ಚಿತ್ರಿಸಿದ್ದರು. ಪಂಕಜ್ ಕಪೂರ್, ಟಬು, ಓಂ ಪುರಿ ಮತ್ತು ನಾಸೀರುದ್ದೀನ್ ಶಾ ಅವರಂತಹ ದಿಗ್ಗಜರೊಂದಿಗೆ ಇರ್ಫಾನ್ ಖಾನ್ ತೆರೆ ಹಂಚಿಕೊಂಡು ಗಮನ ಸೆಳೆದರು.
- " class="align-text-top noRightClick twitterSection" data="">
ಆರಂಭದಲ್ಲಿ ಚಿತ್ರಕ್ಕೆ ಕೇ ಕೇ ಮೆನನ್ ಮತ್ತು ಕಮಲ್ ಹಾಸನ್ ಅವರಂತಹ ಸ್ಟಾರ್ ನಟರನ್ನು ಪರಿಗಣಿಸಲಾಗಿತ್ತು. ಇದು ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರಿಗೆ ದೊಡ್ಡ ಸವಾಲೊಡ್ಡಿತ್ತು. ಅದಾಗ್ಯೂ, ತಿಗ್ಮಾನ್ಶು ಧುಲಿಯಾ ಅವರ ಕ್ರೈಮ್ ಡ್ರಾಮಾ 'ಹಾಸಿಲ್'ನಲ್ಲಿ ಇರ್ಫಾನ್ ಅವರ ಅಭಿನಯದಿಂದ ಆಕರ್ಷಿತರಾದ ಭಾರದ್ವಾಜ್, ಈ ಚಿತ್ರಕ್ಕೆ ಇರ್ಫಾನ್ ಸೂಕ್ತ ಎಂಬುದನ್ನು ಅರಿತುಕೊಂಡರು.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, 'ಮಕ್ಬೂಲ್'ಗಾಗಿ ಇರ್ಫಾನ್ ಅವರ ಆಡಿಷನ್ ನಡೆಸಿದ್ರಾ/ನಡೆಸಬೇಕೆಂದುಕೊಂಡ್ರಾ? ಎಂಬ ಪ್ರಶ್ನೆ ಎದುರಾಗಿದ್ದು, ನಿರ್ದೇಶಕರು 'ನಗು'ವಿನ ಉತ್ತರ ಕೊಟ್ಟರು. ''ಇರ್ಫಾನ್ ಅವರ ಆಡಿಷನ್ ಮಾಡಲು ಯಾರು ತಾನೆ ಧೈರ್ಯ ಮಾಡಬಹುದು? ದೊಡ್ಡ ಮೂರ್ಖರು ಇರ್ಫಾನ್ ಅವರ ಆಡಿಷನ್ ಮಾಡಬಹುದು" ಎಂದು ತಿಳಿಸಿದರು. ಈ ಪಾತ್ರವನ್ನು ನೀಡಲಾಯಿತಷ್ಟೇ. ನಂತರ ನಡೆದಿದ್ದು ಚಮತ್ಕಾರ. ಇರ್ಫಾನ್ ಅವರ ಸಮ್ಮೋಹನಗೊಳಿಸುವ ಕಣ್ಣುಗಳು ಮತ್ತು ಅವರು ಹೊಂದಿದ್ದ ಆ ವಿಶಿಷ್ಟ ಆಕರ್ಷಣೆಗೆ ಧನ್ಯವಾದಗಳು ಎಂದು 'ಮಕ್ಬೂಲ್' ನಿರ್ದೇಶಕ ವಿಶಾಲ್ ಭಾರದ್ವಾಜ್ ತಿಳಿಸಿದ್ದರು.
- " class="align-text-top noRightClick twitterSection" data="">
ಇದನ್ನೂ ಓದಿ: 'ಕರಟಕ ದಮನಕ' ಟೈಟಲ್ ಸಾಂಗ್ ರಿಲೀಸ್: 'ಅಂಬಿ' ವಿಶೇಷ ವಿಡಿಯೋ ಅನಾವರಣ
ಕುತೂಹಲಕಾರಿ ವಿಚಾರ ಎಂದರೆ ಮನೋಜ್ ಬಾಜಪೇಯಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಉತ್ಸುಕರಾಗಿದ್ದರು. ಹಾಗಾಗಿ ಇವರು ವಿಶಾಲ್ ಅವರನ್ನು ಅನೇಕ ಬಾರಿ ಸಂಪರ್ಕಿಸಿದ್ದರು ಕೂಡ. ಆದರೆ, ಮನೋಜ್ ಬಾಜಪೇಯಿ ಈಗಾಗಲೇ ರಾಮ್ ಗೋಪಾಲ್ ವರ್ಮಾ ಅವರ ಸತ್ಯ ಸಿನಿಮಾದಲ್ಲಿ ದರೋಡೆಕೋರ ಭಿಕು ಮ್ಹತ್ರೆ ಪಾತ್ರವನ್ನು ನಿರ್ವಹಿಸಿದ್ದ ಹಿನ್ನೆಲೆ, ನಿರ್ದೇಶಕರು ಇತರರ ಕಡೆ ಗಮನ ಹರಿಸಿದರು.
'ಮಕ್ಬೂಲ್'ನ ಕುತೂಹಲಕಾರಿ ಅಂಶಗಳು:
- ಮಕ್ಬೂಲ್ ಚಿತ್ರೀಕರಣ ಪ್ರಾರಂಭವಾಗುವ ಮೊದಲು, ನಾಸೀರುದ್ದೀನ್ ಶಾ ಅವರು ಎಲ್ಲಾ ನಟರಿಗೆ ವರ್ಕ್ಶಾಪ್ ನಡೆಸಿದ್ದರು. ಆಗ ಕಾರ್ಯಾಗಾರಗಳು ಹೆಚ್ಚು ರೂಢಿಯಲ್ಲಿರಲಿಲ್ಲ. ಅದಾಗ್ಯೂ, 'ಮಾನ್ಸೂನ್ ವೆಡ್ಡಿಂಗ್' ಯಶಸ್ಸಿಗೆ ಪ್ರಿ-ಶೂಟ್ ತರಬೇತಿ ಸಹಾಯ ಮಾಡಿದ್ದ ವಿಚಾರ ಮಕ್ಬೂಲ್ ತಂಡಕ್ಕೆ ಸ್ಫೂರ್ತಿ ನೀಡಿತ್ತು. ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಕೋರಿಕೆಯ ಮೇರೆಗೆ, ನಟರ ಪಾತ್ರಗಳನ್ನು ರೂಪಿಸುವಲ್ಲಿ ನಾಸೀರುದ್ದೀನ್ ಶಾ ಅವರು ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು.
- ಆರಂಭದಲ್ಲಿ ಕಾಕಾ (ಪಿಯೂಷ್ ಮಿಶ್ರಾ ಅವರ ಪಾತ್ರ) ಪಾತ್ರಕ್ಕೆ ನಿರ್ದೇಶಕರು ಪಂಕಜ್ ಕಪೂರ್ ಮೇಲೆ ಕಣ್ಣಿಟ್ಟಿದ್ದರು. ನಂತರ ಅಬ್ಬಾಜಿಯಾಗಿ ನಟಿಸಲು ಅವಕಾಶ ಕೊಟ್ಟರು.
- ಪಂಕಜ್ ಕಪೂರ್ ಅವರಿಗೆ ಬೇರೊಂದು ಪಾತ್ರ ಕೊಡಲಾಗಿತ್ತು. ಆದ್ರೆ ನಾಸಿರುದ್ದೀನ್ ಶಾ ಇದು ಸೂಕ್ತವಲ್ಲ ಎಂಬ ಸಲಹೆ ಕೊಟ್ಟರು. ನಂತರ ಕಾನ್ಸ್‌ಟೇಬಲ್ ಪಾತ್ರಕ್ಕೆ ಆದ್ಯತೆ ನೀಡಿದರು. ಅಂತಿಮವಾಗಿ ಕಪೂರ್ ಅವರನ್ನು ಕಾನ್ಸ್‌ಟೇಬಲ್ ಆಗಿ ನಟಿಸಲು ಸೂಚಿಸಿದರು.
- ಆರಂಭದಲ್ಲಿ ಕೇ ಕೇ ಮೆನನ್ ಮಕ್ಬೂಲ್ ಚಿತ್ರಕ್ಕಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಅವರು ಹಿಂದೆ ಸರಿಯಬೇಕಾಯಿತು. ಸಿನಿಮಾ ವಿಳಂಬವಾಯಿತು. ಪುನರಾರಂಭಗೊಂಡಾಗ, ಕಾಸ್ಟಿಂಗ್ ಬದಲಾವಣೆಗೆ ಕಾರಣವಾಯಿತು.
- ನಾಸೀರುದ್ದೀನ್ ಶಾ ಅವರು ಕಮಲ್ ಹಾಸನ್ ಅವರನ್ನು ನಿರಾಕರಿಸಿದ ನಂತರ ಇರ್ಫಾನ್ ಖಾನ್ ಮಕ್ಬೂಲ್ಗೆ ಆಯ್ಕೆ ಆದರು.
- ಮನೋಜ್ ಬಾಜಪೇಯಿ ಅವರು ವಿಶಾಲ್ ಭಾರದ್ವಾಜ್ ಅವರಿಗೆ ಮಕ್ಬೂಲ್‌ನ ಪ್ರಮುಖ ಪಾತ್ರಕ್ಕಾಗಿ ಸತತ 21 ಕರೆಗಳನ್ನು ಮಾಡಿದ್ದರು.
- ಸಿನಿಮಾಗೆ ಇನ್ನೇನು ಎರಡು ವಾರಗಳಿರುವಂತೆ, ಇಡೀ ಚಿತ್ರತಂಡವನ್ನು ಮಧ್ಯಪ್ರದೇಶದ ಭೋಪಾಲ್‌ಗೆ ಕಳುಹಿಸುವ ವೆಚ್ಚವನ್ನು ಭರಿಸಲು ನಿರ್ಮಾಪಕರು ನಿರಾಕರಿಸಿದ ಹಿನ್ನೆಲೆ ವಿಶಾಲ್ ಭಾರದ್ವಾಜ್ ಅವರು ಸಿನಿಮಾ ತೊರೆಯುವುದರಲ್ಲಿದ್ದರು.
- ಭೋಪಾಲ್‌ನ ನಿರ್ದಿಷ್ಟ ಹವೇಲಿಯೊಂದರಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಭಾರದ್ವಾಜ್ ಬ್ಯುಸಿಯಾದರು. ಬಜೆಟ್ ಸಮಸ್ಯೆಗಳು ಎದುರಾದಾಗ, ಭಾರದ್ವಾಜ್ ಅವರ 30 ಲಕ್ಷ ರೂಪಾಯಿಗಳನ್ನು ಬಿಡಲು ನಿರ್ಮಾಪಕರು ಕೇಳಿದಾಗ, ಅವರು ಯಾವುದೇ ಎರಡನೇ ಆಲೋಚನೆಯಿಲ್ಲದೇ ಒಪ್ಪಿಕೊಂಡರು.
- ಭಾರದ್ವಾಜ್ ಅವರ 30 ಲಕ್ಷ ರೂ. ಸಂಭಾವನೆ, ಸಂಗೀತ, ನಿರ್ದೇಶನ ಮತ್ತು ಬರವಣಿಗೆಗೆ ಸಂಬಂಧಿಸಿದ್ದಾಗಿತ್ತು. ಆದ್ರೆ ಸಿನಿಮಾ ಉತ್ತಮವಾಗಿ ಮೂಡಿಬರುವ ಗುರಿಯೊಂದಿಗೆ ತಮ್ಮ ಸಂಭಾವನೆ ಬಿಡಲು ಸಜ್ಜಾದರು.
ಇದನ್ನೂ ಓದಿ: ಧನುಷ್ ಸಿನಿಮಾ ಶೂಟಿಂಗ್: ತಿರುಪತಿಯಲ್ಲಿ ಸಂಚಾರ ಅಸ್ತವ್ಯಸ್ತ - ವಿಡಿಯೋ