ETV Bharat / entertainment

ಹೊಸ ಪ್ರತಿಭೆಗಳ 'ಒನ್ ಅಂಡ್ ಹಾಫ್' ಸಿನಿಮಾದಲ್ಲಿ ಟಗರು ಪುಟ್ಟಿ ಮಿಂಚಿಂಗ್; ಹಾಡು ಅನಾವರಣ - One And Half movie - ONE AND HALF MOVIE

ಟಗರು ಪುಟ್ಟಿ ಮಾನ್ವಿತಾ ಕಾಮತ್ ಅಭಿನಯಿಸಿರೋ 'ಒನ್ ಅಂಡ್ ಹಾಫ್' ಚಿತ್ರದ ಹಾಡೊಂದನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು.

one and a half event
'ಒನ್ ಅಂಡ್ ಹಾಫ್' ಈವೆಂಟ್ (ETV Bharat)
author img

By ETV Bharat Karnataka Team

Published : Jun 30, 2024, 5:22 PM IST

ಸ್ಯಾಂಡಲ್​ವುಡ್​ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲ ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಅಥವಾ ಹಿನ್ನಡೆ ಕಾಣಲಿ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಪ್ರಿಯರ ಅಭಿಪ್ರಾಯ.

ಅಪ್ಪ ಐ ಲವ್ ಯೂ ಚಿತ್ರದ ಬಳಿಕ ಟಗರು ಪುಟ್ಟಿ ಅಭಿನಯಿಸಿರೋ ಚಿತ್ರ ''ಒನ್ ಅಂಡ್ ಹಾಫ್''. ಯುವ ಪ್ರತಿಭೆ ಶ್ರೇಯಸ್ ಚಿಂಗಾ ಅಭಿನಯಿಸುವುದರ ಜೊತೆಗೆ ನಿರ್ದೇಶನ ಮಾಡಿರೋ ಚಿತ್ರವಿದು. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಆರ್​ ಚರಣ್ ಒನ್ ಅಂಡ್ ಹಾಫ್ ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇತ್ತೀಚೆಗೆ ಖಾಸಗಿ ಹೋಟೆಲ್​ನಲ್ಲಿ ಚಿತ್ರದ ಹಾಡೊಂದನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

one and a half event
'ಒನ್ ಅಂಡ್ ಹಾಫ್' ಈವೆಂಟ್ (ETV Bharat)

ಮೊದಲು ಮಾತನಾಡಿದ ಮಾನ್ವಿತಾ ಕಾಮತ್, ನನಗಿದು ಬಹಳ ವಿಶೇಷವಾದ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್​ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್​ಗೆ ಕುಂತ್ರೆ ಮಣಿ ಅಣ್ಣ ಸೂಪರ್. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ ಮೂವರಲ್ಲೂ ಒಳ್ಳೆ ಬಾಂಡಿಂಗ್ ಇದೆ. ಶ್ರೇಯಸ್ ಡೈರೆಕ್ಟರ್, ಆ್ಯಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.

ನಿರ್ದೇಶಕ, ನಾಯಕ ಶ್ರೇಯಸ್ ಚಿಂಗಾ ಮಾತನಾಡಿ, ಇದು ತಂತ್ರಜ್ಞನರ ಸಿನಿಮಾ. ಪ್ರತೀ ತಂತ್ರಜ್ಞರು ಕೂಡ ಫ್ಯಾಮಿಲಿಯಂತೆ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ಸಿನಿಮಾಗೆ ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಈ ಸಮಯದಲ್ಲಿ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗಿರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ ಎಂದು ಅಭಿಪ್ರಾಯಪಟ್ಟರು.

one and a half event
'ಒನ್ ಅಂಡ್ ಹಾಫ್' ಈವೆಂಟ್ (ETV Bharat)

ನಿರ್ಮಾಪಕ ಆರ್.ಚರಣ್ ಸುಬ್ಬಯ್ಯ ಮಾತನಾಡಿ, ನಾನು ಗಾಂಧಿನಗರದ ಹುಡ್ಗ. ಶ್ರೇಯಸ್ ಮಾಡಿದ್ದ ಡೇವಿಡ್ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಆ ರೀತಿ ಸಿನಿಮಾ ಮಾಡಿದ್ದಾರೆ ಎಂದರು. ಯಾವುದಾದರು ಕಾನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವರು ಹೇಳಿದ ಕಥೆ ನನಗೆ ಇಷ್ಟವಾಗಿ ಅಡ್ವಾನ್ಸ್ ಕೊಟ್ಟಿದ್ದೆ. ಒಂದೊಳ್ಳೆ, ಬ್ಯೂಟಿಫುಲ್ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್​​ಗೆ ಬಂದು ನೋಡಬೇಕು ಎಂದರು.

ಇದನ್ನೂ ಓದಿ: ಅಭಿಜಿತ್ ಅಭಿನಯದ 'ಅಡವಿಕಟ್ಟೆ' ಸಿನಿಮಾಗೆ ಸಿಕ್ತು ಡಿ.ಕೆ ಸುರೇಶ್ ಸಾಥ್: ಟ್ರೇಲರ್ ರಿಲೀಸ್ - Adavi Katte

ಈ ಹಿಂದೆ ರಂಗ್‌ಬಿರಂಗಿ, ಡೇವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದ ನಟ ಶ್ರೇಯಸ್ ಚಿಂಗಾ ಇದೀಗ ಒನ್ ಅಂಡ್ ಹಾಫ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಒನ್ ಅಂಡ್ ಹಾಫ್ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮನರಂಜನೆ ಪಕ್ಕಾ ಅನ್ನೋದು ಚಿತ್ರತಂಡದ ಭರವಸೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಹೀರೋನ ಹೆಸರನ್ನು ಕನ್ನಡ ಅಂತಾ ಇಡಲಾಗಿದೆ.

ಇದನ್ನೂ ಓದಿ: ಜುಲೈ 19ರಂದು ರಾಜ್ಯಾದ್ಯಂತ 'ಬ್ಯಾಕ್ ಬೆಂಚರ್ಸ್' ತೆರೆಗೆ - Backbenchers

ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, 'ಸ್ಪರ್ಶ' ರೇಖಾ, ಅನಂತು, ಸುಂದರಶ್ರೀ, 'ಕಾಮಿಡಿ ಕಿಲಾಡಿ' ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ದೇವೇಂದ್ರ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾಗೆ ಸುಲಕ್ಷ್ಮೀ ಫಿಲ್ಮ್ಸ್‌ ಬ್ಯಾನರ್‌ನಡಿ ಆರ್.ಚರಣ್ ಹಣ ಹಾಕುತ್ತಿದ್ದಾರೆ. ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.