ETV Bharat / entertainment

ಮಲೈಕಾ ಅರೋರಾ ಮಲತಂದೆ ಆತ್ಮಹತ್ಯೆ: ಮಾಜಿ ಪತಿ ಅರ್ಬಾಜ್​ ಕುಟುಂಬ ಸೇರಿ ಸೆಲೆಬ್ರಿಟಿಗಳ ಆಗಮನ - ಪೊಲೀಸರು ಹೇಳಿದ್ದಿಷ್ಟು - Malaika Arora - MALAIKA ARORA

ನಟಿ, ರೂಪದರ್ಶಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ನಿವಾಸಕ್ಕೆ ಬಾಲಿವುಡ್​ ಗಣ್ಯರು ಭೇಟಿ ಕೊಡುತ್ತಿದ್ದಾರೆ. ಕ್ರೈಂ ಬ್ರಾಂಚ್​​ನ ಡಿಸಿಪಿ ರಾಜ್ ತಿಲಕ್ ರೋಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Malaika Arora's Father Dies by Suicide
ಮಲೈಕಾ ಅರೋರಾ ತಂದೆ ಆತ್ಮಹತ್ಯೆ (IANS/ ETV Bharat)
author img

By ETV Bharat Karnataka Team

Published : Sep 11, 2024, 6:17 PM IST

ಹೈದರಾಬಾದ್: ಬಾಲಿವುಡ್ ಚಿತ್ರರಂಗದಲ್ಲಿ ಇಂದು ಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ದಿಢೀರ್​ ಹೊರಬಿತ್ತು. ಅಷ್ಟಕ್ಕೂ ಖ್ಯಾತ ನಟಿಯ ತಂದೆಯ ಸಾವಿನ ವಿಚಾರ ಅವರ ಕುಟುಂಬಸ್ಥರಿಗಷ್ಟೇ ಅಲ್ಲದೇ, ಬಂಧು ಬಳಗ, ಆಪ್ತರಿಗೆ ಆಘಾತವನ್ನುಂಟು ಮಾಡಿದೆ.​ ತನ್ನ ಮಲತಂದೆಯ ಈ ಅನುಮಾನಾಸ್ಪದ ಸಾವಿನ ವಿಷ್ಯ ತಿಳಿದು ಪುಣೆಯಲ್ಲಿದ್ದ ನಟಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಸ್ಥಳಕ್ಕಾಗಮಿಸಿದ ಬಾಲಿವುಡ್​ ಗಣ್ಯರು (ETV Bharat, ANI)

ನಟಿ, ರೂಪದರ್ಶಿ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಕುಲದೀಪ್​​​ ಮೆಹ್ತಾ ಬುಧವಾರ ಬೆಳಗ್ಗೆ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಪುಣೆಯಲ್ಲಿದ್ದ ಮಗಳು ಮಲೈಕಾ ಮುಂಬೈನ ನಿವಾಸಕ್ಕೆ ಆಗಮಿಸಿದರು. ಮಾಜಿ ಪತಿ ಅರ್ಬಾಜ್​​ ಖಾನ್​​ ಕುಟುಂಬ, ರೂಮರ್​​ ಬಾಯ್​ಫ್ರೆಂಡ್ (ಮಾಜಿ) ಅರ್ಜುನ್​​ ಕಪೂರ್​​ ಸೇರಿದಂತೆ ಬಾಲಿವುಡ್​ನ ಗಣ್ಯರು ನಟಿಯ ಅಪಾರ್ಟ್​​​ಮೆಂಟ್​ಗೆ ಭೇಟಿ ಕೊಟ್ಟಿದ್ದಾರೆ.

ತಂದೆ ಆತ್ಮಹತ್ಯೆಗೆ ಶರಣಾದಾಗ ಮಲೈಕಾ ಅರೋರಾ ಮನೆಯಲ್ಲಿರಲಿಲ್ಲ. ಅವರು ಪುಣೆಯಲ್ಲಿದ್ದರು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮುಂಬೈಗೆ ಮರಳಿದ್ದಾರೆ. ಈ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಆ ನಿವಾಸ ತಲುಪಿದರು. ದುರಂತ ನಡೆದ ಸ್ಥಳಕ್ಕೆ ಮೊದಲು ಆಗಮಿಸಿದ ಕುಟುಂಬಸ್ಥರಲ್ಲಿ ಅರ್ಬಾಜ್​​ ಖಾನ್​​ ಮೊದಲಿಗರು.

ಕ್ರೈಂ ಬ್ರಾಂಚ್​​ನ ಡಿಸಿಪಿ ರಾಜ್ ತಿಲಕ್ ರೋಷನ್ (ETV Bharat)

ಗೆಳೆಯ ಅರ್ಜುನ್​ ಕಪೂರ್​​, ಮಗ ಆರ್ಹಾನ್​ ಖಾನ್​​, ನಟರಾದ ಸೈಫ್​ ಅಲಿ ಖಾನ್​, ಕರೀನಾ ಕಪೂರ್ ಖಾನ್​​, ಅನನ್ಯಾ ಪಾಂಡೆ, ಚಂಕಿ ಪಾಂಡೆ ಸೇರಿದಂತೆ ಹಲವರು ಆಗಮಿಸಿದ್ದಾರೆ. ಮಾಜಿ ಪತಿ ಅರ್ಬಾಜ್ ಖಾನ್ (ಸಲ್ಮಾನ್​ ಖಾನ್​ ಸಹೋದರ) ಕುಟುಂಬಸ್ಥರು ಕೂಡಾ ಭೇಟಿ ಕೊಟ್ಟಿದ್ದಾರೆ. ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಸಲೀಮ್​ ಖಾನ್,​ ಸಲ್ಮಾ ಖಾನ್​, ಸೊಹೈಲ್​ ಖಾನ್​, ನಿರ್ವಾಣ್​​ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ ಇನ್ನೂ ಹಲವರು ಭೇಟಿ ಕೊಟ್ಟಿದ್ದಾರೆ.

ಪೊಲೀಸರ ಪ್ರಕಾರ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಬಾಂದ್ರಾ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮೃತ ಅನಿಲ್ ಮೆಹ್ತಾ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ತಲುಪುವ ಮೊದಲೇ ಅವರು ಸಾವನ್ನಪ್ಪಿದ್ದಾರೆ. ಘಟನೆ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ.

ಕ್ರೈಂ ಬ್ರಾಂಚ್​​ನ ಡಿಸಿಪಿ ರಾಜ್ ತಿಲಕ್ ರೋಷನ್ ಈ ಕುರಿತು ಮಾತನಾಡಿ, 62 ವರ್ಷದ ಅನಿಲ್​ ಮೆಹ್ತಾ ಅವರ ಮೃತದೇಹ ಮುಂಬೈ ನಿವಾಸದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಫೋರೆನ್ಸಿಕ್ ತಂಡಗಳು ಮತ್ತು ಪೊಲೀಸರು ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಪೊಲೀಸರು ಸ್ಥಳದಲ್ಲಿ 'ಪಂಚನಾಮ' (ಪರಿಶೀಲನೆ) ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ತನಿಖೆ ಭಾಗವಾಗಿ ಅನಿಲ್ ಮೆಹ್ತಾ ಅವರ ಮೃತ ದೇಹವನ್ನು ವಶಪಡಿಸಿಕೊಂಡ ಕಟ್ಟಡದ ಆವರಣದ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಘಟನೆಯ ಸಂಪೂರ್ಣ ವಿವರಕ್ಕಾಗಿ ಕಟ್ಟಡ ಆವರಣದ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಪುಣೆಯಿಂದ ಮನೆ ತಲುಪಿದ ನಟಿ, ​ಅರ್ಜುನ್​ ಕಪೂರ್​ ಸಾಥ್ - Malaika And Arjun

ಮೂಲವೊಂದು ಸುದ್ದಿವಾಹಿನಿಗೆ, "ಮಲೈಕಾ ಅವರ ತಂದೆ ಇಂದು ಬೆಳಗ್ಗೆ ನಿಧನರಾದರು ನಿಜ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ಅಪಘಾತ. ಅವರಿಗೆ ಯಾವುದೇ ಕಾಯಿಲೆ ಅಥವಾ ಮಾನಸಿಕ ಒತ್ತಡ ಇಲ್ಲದ ಕಾರಣ ಕುಟುಂಬಸ್ಥರೆಲ್ಲರೂ ಆಘಾತಕ್ಕೊಳಗಾಗಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಲೈಕಾ ಅರೋರಾ ತಂದೆ ಅನಿಲ್ ಆತ್ಮಹತ್ಯೆ: ನಟಿಯ ಮನೆಗೆ ಬಂದ ಮಾಜಿ ಪತಿ ಅರ್ಬಾಜ್ ಖಾನ್ - Malaika Arora Father Suicide

ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಈ ಸಾವು ಅಪಘಾತ (ಆತ್ಮಹತ್ಯೆ ಅಲ್ಲ) ಎಂದು ತಿಳಿಸಿದೆ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ತಿಳಿಸಿದರು. ಕುಟುಂಬ ಆಘಾತದಲ್ಲಿದ್ದು, ಮಾಧ್ಯಮಗಳ ಪ್ರಶ್ನೆಗಳಿಗೆ ಅವರಿನ್ನೂ ಪ್ರತಿಕ್ರಿಯಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.