ETV Bharat / entertainment

ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು - Kriti Kharbanda

ಶುಕ್ರವಾರ ಪುಲ್ಕಿತ್ ಸಾಮ್ರಾಟ್ ಹಾಗೂ ಕೃತಿ ಖರಬಂದ ಮದುವೆ ಸಮಾರಂಭ ಜರುಗಲಿದ್ದು, ಇಂದು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ.

Pulkit Samrat Kriti Kharbanda
ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ
author img

By ETV Bharat Karnataka Team

Published : Mar 13, 2024, 1:10 PM IST

ಬಾಲಿವುಡ್​​​ನಲ್ಲೀಗ ನಟ ಪುಲ್ಕಿತ್ ಸಾಮ್ರಾಟ್ ಮತ್ತು ನಟಿ ಕೃತಿ ಖರಬಂದ ಮದುವೆ ಸಂಭ್ರಮ ಮನೆ ಮಾಡಿದೆ. ಕೆಲ ಸಮಯದಿಂದ ಡೇಟಿಂಗ್​​​ನಲ್ಲಿದ್ದ ಈ ಪ್ರೇಮಪಕ್ಷಿಗಳೀಗ ತಮ್ಮ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ, ಲವ್​ಬರ್ಡ್ಸ್ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೆದುರು ಪಂಜಾಬಿ ಸಂಪ್ರದಾಯಗಳ ಪ್ರಕಾರ ದಾಂಪತ್ಯ ಜೀವ ಆರಂಭಿಸಿಸಲಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 15ರಂದು ಮನೇಸರ್‌ನ ರಾಯಲ್​ ಹೋಟೆಲ್‌ನಲ್ಲಿ ಜೋಡಿ ಮದುವೆಯಾಗಲಿದ್ದು, ಇಂದಿನಿಂದ ಮದುವೆ ಮುನ್ನದ ಶಾಸ್ತ್ರ-ಸಮಾರಂಭಗಳು ಪ್ರಾರಂಭವಾಗಲಿವೆ.

"ವಿವಾಹಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮಾತುಕತೆ, ಆಚರಣೆಗಳು ನಡೆದಿವೆ. ಮನೇಸರ್‌ನಲ್ಲಿ ಮದುವೆಯ ಮುಖ್ಯ ಶಾಸ್ತ್ರ ಜರುಗಲಿದೆ" ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ. ಪಂಜಾಬಿ ಸಂಪ್ರದಾಯದಂತೆ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ವಿಶೇಷ ಖಾದ್ಯಗಳು ಆಚರಣೆಯ ಕೇಂದ್ರಬಿಂದುವಾಗಲಿದೆ. ರಿಚಾ ಚಡ್ಡಾ, ಅಲಿ ಫಜಲ್ ಒಳಗೊಂಡತೆ ಫುಕ್ರೆ (ಸಿನಿಮಾ) ಗ್ಯಾಂಗ್‌ ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ವರದಿಗಳ ಪ್ರಕಾರ, ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ ಇಂದು (ಬುಧವಾರ, ಮಾರ್ಚ್ 13) ಮೆಹೆಂದಿ ಕಾರ್ಯಕ್ರಮದೊಂದಿಗೆ ಪ್ರಯಾಣ ಆರಂಭಿಸಲಿದ್ದಾರೆ. ನಾಳೆ (ಗುರುವಾರ, ಮಾರ್ಚ್ 14) ಬೆಳಗ್ಗೆ ಹರಿಶಿನ ಶಾಸ್ತ್ರ ನಡೆಯಲಿದೆ. ಸಂಜೆ ಅತಿಥಿಗಳಿಗಾಗಿ ಕಾಕ್ಟೈಲ್ ನೈಟ್​ ಈವೆಂಟ್​ ಆಯೋಜಿಸಿದ್ದಾರೆ. ನಾಡಿದ್ದು (ಶುಕ್ರವಾರ, ಮಾರ್ಚ್ 15) ಪಂಜಾಬಿ ಪದ್ಧತಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಪುಲ್ಕಿತ್​​​ ಕೈ ಹಿಡಿಯಲಿರುವ 'ಗೂಗ್ಲಿ' ಬೆಡಗಿ: ಮದುವೆ ಸ್ಥಳಕ್ಕೆ ತೆರಳಿದ ಕೃತಿ ಖರಬಂದ - ವಿಡಿಯೋ

ಚಿತ್ರರಂಗದಿಂದ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಜೋಯಾ ಅಖ್ತರ್, ರಿತೇಶ್ ಸಿಧ್ವಾನಿ, ಲವ್ ರಂಜನ್, ರಿಚಾ ಚಡ್ಡಾ, ಅಲಿ ಫಜಲ್, ವರುಣ್ ಶರ್ಮಾ, ಮನ್ಜೋತ್ ಸಿಂಗ್ ಮತ್ತು ಮಿಕಾ ಸಿಂಗ್ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಫೇಸ್ಟಲ್​ ಥೀಮ್​ನಲ್ಲಿ ಸಮಾರಂಭ ಜರುಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 'ಗೂಗ್ಲಿ' ನಟಿ ಕೃತಿ ಖರಬಂದ ಮದುವೆ: ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ವರನ ಮನೆ-ವಿಡಿಯೋ

ವೀರೆ ಕಿ ವೆಡ್ಡಿಂಗ್, ತೈಶ್ ಮತ್ತು ಪಾಗಲ್ಪಂತಿ ಸಿನಿಮಾಗಳಲ್ಲಿ ಕೃತಿ-ಪುಲ್ಕಿತ್​ ಸ್ಕ್ರೀನ್​ ಶೇರ್ ಮಾಡಿದ್ದಾರೆ​. ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಅಧಿಕೃತ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೊದಲ ಬಾರಿ ಪಾಗಲ್ಪಂತಿ ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾಗಿದ್ದು, ಅಲ್ಲೇ ಪ್ರೇಮಾಂಕುರವಾಗಿದೆ ಎಂದು ನಂಬಲಾಗಿದೆ. ಸಿನಿಮಾ ಪ್ರಮೋಶನ್​​ ಸಂದರ್ಭ ಊಹಾಪೋಹಗಳನ್ನು ಉದ್ದೇಶಿಸಿ ಮಾತನಾಡಿದ್ದ ಕೃತಿ ಅವುಗಳು ಕೇವಲ ವದಂತಿಗಳಲ್ಲ ಎಂದು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.