ETV Bharat / entertainment

'ರೂಪಾಂತರ'ದ ಕಿತ್ತಾಳೆ ಸವಿ: ರಾಜ್ ಬಿ ಶೆಟ್ಟಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು - Kittale Song From Roopanthara - KITTALE SONG FROM ROOPANTHARA

ಕನ್ನಡದ ಬಹುನಿರೀಕ್ಷಿತ 'ರೂಪಾಂತರ' ಚಿತ್ರದ 'ಕಿತ್ತಾಳೆ' ಹಾಡು ಅನಾವರಣಗೊಂಡಿದೆ.

Raj B Shetty, Roopanthara Poster
ರಾಜ್ ಬಿ ಶೆಟ್ಟಿ, 'ರೂಪಾಂತರ'ದ ಕಿತ್ತಾಳೆ ಹಾಡು ಅನಾವರಣ (ETV Bharat)
author img

By ETV Bharat Karnataka Team

Published : Jul 5, 2024, 8:14 AM IST

ಜಿಟಿ ಜಿಟಿ ಜಿನುಗುವ ಮಳೆಯಲ್ಲಿ ಹಾಡೊಂದನ್ನು ಕೇಳುವ ಮೂಲಕ ಆ ಕ್ಷಣವನ್ನು ಆನಂದಿಸುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇದನ್ನು ಚೆನ್ನಾಗಿ ಅರಿತಂತಿದೆ ''ರೂಪಾಂತರ'' ಚಿತ್ರತಂಡ. ಹೌದು, ಒಂದು ಮೊಟ್ಟೆಯ ಕಥೆಯ ಮೂಲಕ ಚಿತ್ರರಂಗಕ್ಕೆ ಬಂದು ಜನರ ಮೆಚ್ಚುಗೆ ಗಳಿಸಿದ ಅದೇ ಚಿತ್ರತಂಡವೀಗ 'ರೂಪಾಂತರ' ಎನ್ನುವ ಸಿನಿಮಾ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಕಿತ್ತಾಳೆ ಎನ್ನುವ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಸಿನಿರಸಿಕರ, ಸಂಗೀತ ಆಸ್ವಾದಕರ ಮನವನ್ನು ತಣಿಸಿದೆ ಚಿತ್ರತಂಡ.

'ಒಂದು ಮೊಟ್ಟೆಯ ಕಥೆ'ಯ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಜ್ ಬಿ ಶೆಟ್ಟಿ ಮತ್ತು ಮಿಧುನ್ ಮುಕುಂದನ್ ಯಶಸ್ವಿ ಜೋಡಿಯಾಗಿ ಅನೇಕ ಹಿಟ್ ಸಾಂಗ್ಸ್ ಕೊಡುತ್ತಾ ಬಂದಿದ್ದು, ಇದೀಗ 'ರೂಪಾಂತರ' ಚಿತ್ರದ 'ಕಿತ್ತಾಳೆ' ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

ಈ ಹಿಂದೆ ಅನೇಕ ಚಿತ್ರಗಳಿಗೆ ರಾಜ್ ಸಾಹಿತ್ಯ ಬರೆದು, ಮಿಧುನ್ ಸಂಗೀತ ನೀಡಿದ್ದರೂ ಈ ಹಾಡು ಇಬ್ಬರಿಗೂ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಲಿದೆ. ಮಿಧುನ್ ಅವರ ಹಿಂಪಾದ ಸಂಗೀತಕ್ಕೆ ರಾಜ್ ಅವರ ರಸಭರಿತ ಸಾಹಿತ್ಯ ಸಿಹಿಯಾದ ಕಿತ್ತಾಳೆ ಹಣ್ಣನ್ನು ಸವಿದಂತ ಅನುಭವವನ್ನು ನೀಡುತ್ತಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಗರುಡ ಗಮನದ ಮಾದೇವ ಖ್ಯಾತಿಯ ಗಾಯಕಿ ಚೈತ್ರಾ ಜೆ ಆಚಾರ್ ಅವರು ಈ ಹಾಡಿಗೆ ಧ್ವನಿ ನೀಡಿದ್ದು ಇನ್ನೊಂದು ಹೈಲೈಟ್.

ಇದನ್ನೂ ಓದಿ: 'ಒಂದು ಮೊಟ್ಟೆಯ ಕಥೆ'ಯೊಂದಿಗೆ ರಾಜ್ ಬಿ ಶೆಟ್ಟಿ 'ರೂಪಾಂತರ': ಸದ್ಯದಲ್ಲೇ ಹೊಸ ಸಿನಿಮಾ ನಿಮ್ಮ ಮುಂದೆ - Roopantara

ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಗಮನ ಸೆಳೆದಿರುವ 'ರೂಪಾಂತರ', ಮಿಥಿಲೇಶ್ ಎಡವಲತ್ ನಿರ್ದೇಶನದ ಚೊಚ್ಚಲ ಚಿತ್ರ. ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಲೆ ಸೃಷ್ಠಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣಿಸುತ್ತಿದೆ. ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೇ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲ್ಮ್ಸ್ ಮೂಲಕ ತೆರೆಗೂ ತರುತ್ತಿದ್ದಾರೆ. ಒಂದು ಮೊಟ್ಟೆಯ ಕಥೆಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ನಿರ್ಚಹಿಸಿದ್ದರೆ, ಮಿಧುನ್ ಮುಕುಂದನ್ ಸಂಗೀತ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಹೊರಟಿದೆ.

ಇದನ್ನೂ ಓದಿ: 'ಭೈರವನ ಕೊನೆ ಪಾಠ' ಹೇಳಲು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ: ಶಿವಣ್ಣನಿಗೆ ಹೇಮಂತ್ ಡೈರೆಕ್ಷನ್​​ - Bhairavana Kone PaaTa

ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿತರರು ತಾರಾಗಣದಲ್ಲಿದ್ದಾರೆ. ಸಂಕಲನದ ಜವಾಬ್ದಾರಿಯನ್ನು ಭುವನೇಶ್ ಮಣಿವಣ್ಣನ್ ಹೊತ್ತಿದ್ದಾರೆ. ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ. ಹಾಡು ಲೈಟರ್ ಬುದ್ಧ ಸಂಸ್ಥೆಯ ಯೂಟ್ಯೂಬ್ ಚಾನಲ್​​ನಲ್ಲಿ ಲಭ್ಯವಿದ್ದು, ಈ ಹೊಸ ಪ್ರಯತ್ನವನ್ನು ಕನ್ನಡಿಗರು ಸ್ವಾಗತಿಸುತ್ತಾರೆ ಎಂಬುದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವಾಂಕರ್ ಅವರ ಅಭಿಪ್ರಾಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.