ETV Bharat / entertainment

ಸಂದೇಶ್ ಪ್ರೊಡಕ್ಷನ್ ಜೊತೆ ಕೈಜೋಡಿಸಿದ ಕಿಚ್ಚ ಸುದೀಪ್​ - Kichcha Sudeep New Movie - KICHCHA SUDEEP NEW MOVIE

ಸಂದೇಶ್ ಪ್ರೊಡಕ್ಷನ್ ಅಡಿ ಸುದೀಪ್​ ಅವರ ಮುಂದಿನ ಚಿತ್ರ ಬರಲಿದ್ದು, ಈ ಬಗ್ಗೆ ನಿರ್ಮಾಪಕರು ಸದ್ಯದಲ್ಲೇ ಘೋಷಣೆ ಮಾಡಲಿದ್ದಾರೆ.

KICHCHA SUDEEP NEW MOVIE
ಸಂದೇಶ್ ಪ್ರೊಡಕ್ಷನ್ ಜೊತೆ ಕೈಜೋಡಿಸಿದ ಕಿಚ್ಚ ಸುದೀಪ್​ (ಸಾಮಾಜಿಕ ಜಾಲತಾಣ)
author img

By ETV Bharat Karnataka Team

Published : Jun 1, 2024, 6:14 PM IST

ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ ಜೊತೆಗೆ ಕಿಚ್ಚ ಸುದೀಪ್​ ಅವರ ಮುಂದಿನ ಚಿತ್ರ ಬಹುತೇಕ ಖಚಿತವಾದಂತೆ ಕಾಣುತ್ತಿದೆ. 'ಐರಾವತ', 'ಪ್ರಿನ್ಸ್', 'ಒಡೆಯ', ಇತ್ತೀಚೆಗೆ ತೆರೆಕಂಡ 'ಘೋಸ್ಟ್‌' ಸಿನಿಮಾಗಳು ಸೇರಿದಂತೆ ಕನ್ನಡ ಚಿತ್ರೋದ್ಯಮಕ್ಕೆ ಹಲವಾರು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಸಂದೇಶ್ ನಾಗರಾಜ್, ಇದೀಗ ಸುದೀಪ್ ಜೊತೆ ಕೈಜೋಡಿಸಿದ್ದಾರೆ.

Kichcha Sudeep New Movie
ಸಂದೇಶ್ ಪ್ರೊಡಕ್ಷನ್ ಜೊತೆ ಕೈಜೋಡಿಸಿದ ಕಿಚ್ಚ ಸುದೀಪ್​ (ಸಾಮಾಜಿಕ ಜಾಲತಾಣ)

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್​ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಸುದೀಪ್‌ ಅವರ ಮುಂಬರುವ ಚಿತ್ರ ಮೂಡಿಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಸುದೀಪ್‌ ಅವರ ಜೊತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದ್ದವು. ಸಾಲದು ಎಂಬಂತೆ ಸಿನಿಮಾದ ಬಗ್ಗೆ ಚರ್ಚೆ ಕೂಡ ನಡೆಸಿದ್ದಾರೆ ಎಂಬ ಮಾತುಗಳು ಇವೆ. ಹಾಗಾಗಿ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ ಜೊತೆಗೆ ಕಿಚ್ಚ ಸುದೀಪ್​ ಅವರ ಮುಂದಿನ ಚಿತ್ರ ಬಹುತೇಕ ಖಚಿತ ಎಂದು ನೆಟಿಜನ್​ಗಳು ಕೂಡ​ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

Kichcha Sudeep New Movie
ಸಂದೇಶ್ ನಾಗರಾಜ್‌ ಜೊತೆ ಶಿವರಾಜ್​ ಕುಮಾರ್ (ಸಾಮಾಜಿಕ ಜಾಲತಾಣ)

ಇದಕ್ಕೂ ಮುನ್ನ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದು ಮಾತುಗಳು ಹರಿದಾಡುತ್ತಿದ್ದವು. ಇದೀಗ ಆ ಊಹೆ ನಿಜವಾಗಿದ್ದು, ಸುದೀಪ್‌ ಅವರೇ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸೆಟ್ಟೇರಲಿದೆ ಎಂಬ ಮಾತು ಕೂಡ ಇದೆ.

ಚಿತ್ರೀಕರಣ ಯಾವಾಗ? ನಿರ್ದೇಶಕರು ಯಾರು? ನಟಿ ಯಾರು? ಉಳಿದ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ 'ವುಲ್ಫ್' ಸಿನಿಮಾ ಕೂಡ ರೆಡಿಯಾಗಿದೆ. ಅಲ್ಲದೇ ಸೃಜನ್‌ ಲೋಕೇಶ್‌ ಜತೆಗಿನ 'ಜಿಎಸ್‌ಟಿ' ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ 'ಘೋಸ್ಟ್‌ 2' ಅಥವಾ ಶಿವಣ್ಣನ ಜತೆಗಿನ 'ದಳವಾಯಿ ಮುದ್ದಣ್ಣ', 'ಬೀರಬಲ್ 2' ಸಿನಿಮಾಗಳೂ ಸೆಟ್ಟೇರಲಿವೆ.

ಇದನ್ನೂ ಓದಿ: ಕೆಆರ್​ಜಿ ಸ್ಟುಡಿಯೋಸ್ ಪಾಲಾದ 'ಕೋಟಿ‌' ವಿತರಣಾ ಹಕ್ಕು; ಡಾಲಿ ಸಿನಿಮಾ ಬಿಡುಗಡೆಗೆ ದಿನಗಣನೆ - Kotee

ETV Bharat Logo

Copyright © 2025 Ushodaya Enterprises Pvt. Ltd., All Rights Reserved.