ಬಿಗ್ ಬಾಸ್ ಸೀಸನ್ 11ರ ಈ ವಾರದ ಬೆಳವಣಿಗೆಗಳನ್ನು ನೋಡಿದ ವೀಕ್ಷಕರು, ಈ ವಾರದ ಕಿಚ್ಚನ ಪಂಚಾಯಿತಿಗಾಗಿ ಕಾಯುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಇಂದು ಎರಡು ಪ್ರೋಮೋಗಳು ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದರು.
ಮೊದಲನೇ ಪ್ರೋಮೋದಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ಹೋಗುವಾಗ ಮಾನಸ, ಭವ್ಯ, ತ್ರಿವಿಕ್ರಮ್ ಸೇರಿದಂತೆ ಕೆಲ ಸ್ಪರ್ಧಿಗಳು ಕಣ್ಣೀರಿಡುವ ಸನ್ನಿವೇಶಗಳ ಮಧ್ಯೆ ಕಿಚ್ಚನ ಎಂಟ್ರಿ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ನೋಡಿದ ವೀಕ್ಷಕರು, ಸುದೀಪ್ ಅವರು ಯಾವುದೇ ರಿಯಾಕ್ಷನ್ ನೀಡಲಿಲ್ಲ ಎಂದು ಚರ್ಚೆ ಮಾಡುತ್ತಿದ್ದರು.
ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ!
— Colors Kannada (@ColorsKannada) October 19, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/hlpGSm2BvY
ಇನ್ನೇನು ಕಿಚ್ಚನ ಪಂಚಾಯಿತಿಗೆ ಕೇವಲ ಗಂಟೆ ಮಾತ್ರ ಬಾಕಿ ಇದ್ದು, ಅಷ್ಟರಲ್ಲಿ ಬಿಗ್ ಬಾಸ್ ಮನೆಯಿಂದ ಬೆಂಕಿಯಂಥ ಮತ್ತೊಂದು ಪ್ರೋಮೋ ಹೊರ ಬಿದ್ದಿದೆ. ಈ ಶೋ ನೋಡುವ ವೀಕ್ಷಕರು ಇದು ಕಿಚ್ಚನ ಖಡಕ್ ನಡೆ, ಈ ವಾರದ ಪಂಚಾಯಿತಿ ಅಂತಾ ಹೇಳುತ್ತಿದ್ದಾರೆ.
ಹೌದು, ಈ ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಕೌಂಟರ್ ಮಾತುಗಳಿಗೆ ಬೇಸತ್ತಿದ್ದ ಎಲ್ಲ ಸ್ಪರ್ಧಿಗಳು, ಜಗದೀಶ್ ಇಲ್ಲದೆ ಇರುವ ಸ್ಪರ್ಧಿಗಳ ಮಧ್ಯೆ ಹೊಸ ಮನಸ್ತಾಪ ಶುರುವಾಗಿತ್ತು. ಇದರ ಜೊತಗೆ ಸುದೀಪ್ ವಾರದ ಪಂಚಾಯಿತಿಯಲ್ಲಿ ಸಿಂಗಾರಗೊಂಡಿದ್ದ ಸ್ಪರ್ಧಿಗಳಿಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದ್ದಾರೆ.
ಕೆಲವು ಗಂಟೆಗಳ ಹಿಂದೆ ಬಿಗ್ ಬಾಸ್ ಮನೆಯಿಂದ ಎರಡನೇ ಪ್ರೋಮೋ ಅನಾವರಗೊಂಡಿದ್ದು, ಈ ಪ್ರೋಮೋದಲ್ಲಿ ಉಗ್ರಂ ಮಂಜು, ಮಾನಸ, ಚೈತ್ರಾ ಕುಂದಾಪುರ ಅವರನ್ನು ಸುದೀಪ್ ಅವರು ತಮ್ಮ ಮಾತಿನಿಂದಲೇ ಸಖತ್ ಬೆಂಡೆತ್ತಿರುವುದು ಸೆರೆಯಾಗಿದೆ. ಇದನ್ನು ನೋಡಿದ ವೀಕ್ಷಕರು ಇದು ಕಿಚ್ಚನ ರಿಯಲ್ ಪಂಚಾಯಿತಿ ಅಂತಾ ಕೊಂಡಾಡುತ್ತಿದ್ದಾರೆ.
'ತಪ್ಪು ಮಾಡಿದವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದ್ರು. ಆದರೆ, ನಿಮ್ಮಗಳಲ್ಲಿ ಎಷ್ಟು ಜನ ಸರಿ ಇದ್ದೀರಾ' ಎಂಬ ಕಿಚ್ಚನ ಮೊದಲನೇ ಖಡಕ್ ಪ್ರಶ್ನೆಗಳಿಗೆ ಎಲ್ಲರೂ ದಂಗಾಗಿದ್ದಾರೆ. 'ಒಬ್ಬ ಚಪ್ಪಲ್ ಎತ್ತಿ ಬಿಸಾಡುತ್ತಿದ್ದಾನೆ ಅಂದ್ರೆ ಅದು ಓಕೆನಾ?' ಎಂದು ತರಾಟೆಗೆ ತೆಗೆದುಕೊಳ್ಳುವ ಸುದೀಪ್, ಹಂಸ ಹೇಳುವ ಪ್ರಾಮಾಣಿಕತೆ ಮಾತಿಗೆ 'ಈ ಮನೆಯಲ್ಲಿ ಪ್ರಾಮಾಣಿಕತೆ ಎಂಬ ಪದವೇ ಸೂಟ್ ಆಗೋಲ್ಲ' ಎಂದು ಕೋಪದಿಂದ ಹೇಳೋದು ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಹಾಗೇ ಮಾನಸ ಅವರನ್ನು ಕಂಡು 'ಮಾತುಗಳಿಂದಲೇ ಓರ್ವ ವ್ಯಕ್ತಿ ಮನೆಯಿಂದ ಹೊರಗಡೆ ಹೋದ್ರು ಅನ್ನೋದಾದರೆ, ಬಿಗ್ ಬಾಸ್ ಮನೆಯಲ್ಲಿ ನೀವು ಮಾತನಾಡಿರೋ ಕೆಲ ತಪ್ಪು ಮಾತುಗಳನ್ನು ನೋಡಿಕೊಂಡು, ಮನೆಯಲ್ಲಿ ನಿಮ್ಮನ್ನ ಯಾಕೆ ಇಟ್ಕೊಕೊಬೇಕು' ಅಂತಾ ಹೇಳುವ ಖಡಕ್ ಮಾತಿಗೆ ಮಾನಸ ಕೂಡ ದಂಗಾಗಿದ್ದಾರೆ.
ಚೈತ್ರಾ ಅವರಿಗೂ ಮಾತಿನಿಂದಲೇ ಸಖತ್ತಾಗಿ ತಿವಿದಿದ್ದಾರೆ. 'ಚೈತ್ರಾ ಅವರೇ ಹೆಣ್ಣುಮಕ್ಕಳ ಬಗ್ಗೆ ಮಾತನಾಡಬೇಡಿ ಅಂತಿರಾ, ಒಬ್ಬ ಅಪ್ಪನಿಗೆ ಹುಟ್ಟಿದಿಯಾ ಅಂತಾ ಅಂದ್ರೆ, ಯಾರೂ ಅಪ್ಪನಿಗೆ ಬೈಯುತ್ತಿಲ್ಲ ಮೇಡಂ, ತಾಯಿಗೆ ಬೈಯುತ್ತಿರೋದು' ಅಂತಾ ಸುದೀಪ್ ಬಹಳ ಕೋಪದಿಂದ ಹೇಳುವ ಮಾತಿನಿಂದ ಎಲ್ಲಾ ಸ್ಪರ್ಧಿಗಳು ಬೆಚ್ಚಿದ್ದಾರೆ.
ಈ ಸಣ್ಣ ಪ್ರೋಮೋದಲ್ಲಿ ಸುದೀಪ್ ತಪ್ಪು ಮಾಡಿದವರ ವಿರುದ್ಧ ಮಾತನಾಡಿರೋದನ್ನು ನೋಡಿದ್ರೆ ಎಪಿಸೋಡ್ನಲ್ಲಿ ಹೇಗೆಲ್ಲ, ಯಾರೆಲ್ಲ ಸ್ಪರ್ಧಿಗಳಿಗೆ ಕ್ಲಾಸ್ ತಗೊಂಡಿದ್ದಾರೆ ಎಂಬ ಕುತೂಹಲ ಈ ಶೋ ನೋಡುವ ಕಾತುರ ಹೆಚ್ಚಾಗಿದೆ.
ಮತ್ತೊಂದು ಕಡೆ ಕಿಚ್ಚ ಸುದೀಪ್ ನಡೆಸಿಕೊಡುವ ಇಂದು ಮತ್ತು ನಾಳೆಯ ಪಂಚಾಯಿತಿಯಲ್ಲಿ ಯಾರಿಗೆಲ್ಲ ಗ್ರಹಚಾರ ಬಿಡಿಸುತ್ತಾರೆ? ಈ ಎಪಿಸೋಡ್ನಲ್ಲಿ ಮತ್ತೆ ಈ ಶೋನ ಟ್ರಂಪ್ ಕಾರ್ಡ್ ಆಗಿರುವ ಲಾಯರ್ ಜಗದೀಶ್ ವಾಪಸ್ ಬರ್ತಾರಾ? ಮತ್ತೆ ಲಾಯರ್ ಜಗದೀಶ್ ಬಿಗ್ ಬಾಸ್ಗೆ ಬರಬೇಕು ಅಂತಿರೋ ಈ ಶೋನ ವೀಕ್ಷಕರ ಆಸೆಯಂತೆ ಅದು ಈಡೇರುತ್ತಾ ಅನ್ನೋದು ಇಂದು ಅಥವಾ ನಾಳೆ ಪ್ರಸಾರ ಆಗುವ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಕಿಚ್ಚನ ಪಂಚಾಯತಿಗೆ ಕೌಂಟ್ ಡೌನ್ ಶುರು; ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಗದೀಶ್-ರಂಜಿತ್ ಎಲ್ಲಿ?