ETV Bharat / entertainment

ಹಗಲು ಸೂರ್ಯ, ರಾತ್ರಿ ಚಂದ್ರ ಬರಬೇಕು.. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ: ಕಿಚ್ಚನ ಮಾರ್ಮಿಕ ಉತ್ತರ - Sudeep on Darshan - SUDEEP ON DARSHAN

ನಟ ಸುದೀಪ್ ಸೆಪ್ಟೆಂಬರ್ 2 ರಂದು 51ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವರ್ಷದ ಹುಟ್ಟುಹಬ್ಬಾಚರಣೆ ಬಗ್ಗೆ ಬೆಂಗಳೂರಿನ ಜಯನಗರದ ಖಾಸಗಿ ಹೊಟೇಲ್​​ನಲ್ಲಿ​ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡರು. ಇದೇ ವೇಳೆ ನಟ ದರ್ಶನ್​ ಬಗ್ಗೆಯೂ ಮಾತನಾಡಿದರು.

kiccha sudeep
ನಟ ಸುದೀಪ್​​ (ETV Bharat)
author img

By ETV Bharat Entertainment Team

Published : Aug 31, 2024, 6:06 PM IST

ಬೆಂಗಳೂರು: ನಿಮ್ಮ ಪ್ರಶ್ನೆ ಏನು. ನಾನು ನಟ ದರ್ಶನ್​​ ಅವರನ್ನು ಹೊರಗೆ ಕರೆಸಬೇಕು ಎಂದೋ ಅಥವಾ ನಾನು ಒಳಗೆ ಹೋಗಬೇಕಂತಾನೋ? ಎಂದು ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​ ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು.

ನಟ ಸುದೀಪ್ ಸೆಪ್ಟೆಂಬರ್ 2 ರಂದು 51ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವರ್ಷದ ಹುಟ್ಟುಹಬ್ಬದ ಆಚರಣೆ ಬಗ್ಗೆ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್​​ನಲ್ಲಿ​ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡರು. ಈ ವೇಳೆ ತಮ್ಮ ಮುಂದಿನ ಸಿನಿಮಾಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್​ ಬಗ್ಗೆಯೂ ಮಾತನಾಡಿದ್ದಾರೆ.

ನಟ ಸುದೀಪ್​​ (ETV Bharat)

''ನಾನು ಯಾರ ಮನಸ್ಸನ್ನೂ ನೋಯಿಸಲು ಇಷ್ಟಪಡೋದಿಲ್ಲ. ಅವರಿಗೆ ಫ್ಯಾನ್ಸ್ ಹಾಗೂ ಕುಟುಂಬವಿದೆ. ನಾವು ಮಾತನಾಡಿ ಅವರಿಗೆ ನೋವಾಗುವುದು ಬೇಡ. ನಮ್ಮ ದೇಶದಲ್ಲಿ ಕಾನೂನು, ಸರ್ಕಾರ ಇದೆ. ಅದರ ಮೇಲೆ ನನಗೆ ನಂಬಿಕೆ ಇದೆ. ಮಾಧ್ಯಮ ನೋಡಿ ನಮಗೂ ಎಲ್ಲಾ ಗೊತ್ತಾಗುತ್ತಿದೆ'' ಎಂದು ತಿಳಿಸಿದರು.

ಸುದೀಪ್ ಹಾಗೂ ದರ್ಶನ್ ಆತ್ಮೀಯ ಗೆಳೆಯರು. ಆದ್ರೆ ಏಕಾಏಕಿ ದೂರವಾಗಿದ್ದಾರೆ ಎಂಬ ಮಾತುಗಳಿವೆ. ಈ ಮಧ್ಯೆ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಬೇಕಂದೆನಿಸಿತಾ ಎನ್ನುವ ಪ್ರಶ್ನೆ ಸುದೀಪ್ ಅವರಿಗೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ನಟ, ''ನಾವಿಬ್ಬರು ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ ಖಂಡಿತ ಹೋಗಿ ಭೇಟಿ ಮಾಡಿ ಮಾಡುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲ. ಕೆಲವೊಮ್ಮೆ ಅಂತರ ಏಕೆ ಕಾಯ್ದುಕೊಳ್ಳುತ್ತೇವಂದ್ರೆ. ನಾವು ಸರಿ, ಅವರು ಸರಿಯಿಲ್ಲ ಅಂತೇನಲ್ಲ. ನಾವಿಬ್ಬರು ಒಟ್ಟಿಗೆ ಸರಿಯಿಲ್ಲ ಅಂತಾ. ಸೂರ್ಯ ಹಗಲು, ಚಂದ್ರ ರಾತ್ರಿ ಬರಬೇಕು. ಆಗಲೇ ಚೆಂದ. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ ಆಗುತ್ತದೆ" ಎಂದು ತಿಳಿಸಿದರು.

ನಮ್ ಬಾಸ್ ಜೈಲಿಲ್ಲಿದ್ದಾರೆ. ಬೇರೆ ನಟರ ಸಿನಿಮಾ ನೋಡಲ್ಲ ಎಂದಿದ್ದ ಫ್ಯಾನ್ಸ್​​ಗೆ ಕಿಚ್ಚ ಚಾಟಿ ಬೀಸಿದ್ದಾರೆ. ಚಿತ್ರಮಂದಿರಗಳಿಗೆ ಬರೋದಿಲ್ಲ, ಸಿನಿಮಾ ನೋಡೋಲ್ಲ ಅನ್ನೋವಾಗ್ಲೆ ಗತ್ತು ಗಾಂಭಿರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾಗಳು?. ಯಾರೂ ಬರೋಲ್ಲ, ಬರೋಲ್ಲ ಅಂತಾ ಹೇಳ್ತಿದ್ರಲ್ವಾ, ಈಗೇನ್ ಹೇಳ್ತೀರಾ?. ಗಣೇಶ್, ದುನಿಯಾ ವಿಜಯ್ ಸಿನಿಮಾಗಳು ಸಕ್ಸಸ್ ಆಯ್ತಲ್ವೇ ಎಂದು ತಿಳಿಸಿದ್ದಾರೆ.

ನಟ ಸುದೀಪ್​​ (ETV Bharat)

ಸುದೀಪ್ ಜೊತೆ ಸ್ನೇಹ ಇದ್ದಿದ್ರೆ ದರ್ಶನ್ ಗೆ ಈ ಸ್ಥಿತಿ ಬರ್ತಿರಲಿಲ್ಲ ಅನ್ನೋ ಮಾತಿದೆ? ಎಂಬ ಪ್ರಶ್ನೆಯೂ ಪ್ರತಿಕ್ರಿಯಿಸಿದ ಕಿಚ್ಚ.. ನೋ.. ಅದು ತಪ್ಪು.. ನಾನಿದ್ರೆ ಅನ್ನೋದು ದೊಡ್ಡ ಅಹಂ. ನಾನು ಅಷ್ಟು ದೊಡ್ಡವನಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಚಿತ್ರದುರ್ಗದ ವೀರ ಮದಕರಿಯಾಕ್ತಾರಾ ಸುದೀಪ್ ಎಂಬ ಪ್ರಶ್ನೆಗೂ ಅವರು ಉತ್ತರ ಕೊಟ್ಟಿದ್ದಾರೆ. ನಾನು ಯಾವತ್ತಿದ್ರೂ ಮದಕರಿನೇ. ಈ ಮಾತು ಹೇಳಿದ ತಕ್ಷಣ ಮತ್ತೆ ಜಾತಿ ಬಣ್ಣ ಕಟ್ಟುತ್ತಾರೆ. ನಾನು ಸಿನಿಮಾ ಜಾತಿಯವನು‌ ಅಷ್ಟೇ. ರಾಕ್ ಲೈನ್ ಅವ್ರು ಮದಕರಿ ಸಿನಿಮಾ ಮಾಡ್ತೀನಿ ಅಂದ್ರು ಬಿಟ್ಟುಕೊಟ್ಟೆ. ಈಗ ಅವರು ಅದನ್ನ ಮಾಡ್ತಿಲ್ಲವಂತೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಹೋಗಲ್ಲ ಎಂದರು.

ಕಿಚ್ಚೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸೆಪ್ಟಂಬರ್ 2ಕ್ಕೆ ಸುದೀಪ್ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಇಂದು ಮಾಧ್ಯಮಗೋಷ್ಟಿ ನಡೆಸಿದ ನಟ ಒಂದು ಗಂಟೆ ಮಾಧ್ಯಮದವರೊಟ್ಟಿಗೆ ಮನಬಿಚ್ಚಿ ಮಾತನಾಡಿದರು. ತಮ್ಮ ಬರ್ತ್​​​ಡೇಗೆ ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳಿಗೆ ಸಂದೇಶ ರವಾನಿಸಿದರು. ಮನೆ ಬಳಿ ಬರಬೇಡಿ ಎಂದು ವಿನಂತಿಸಿರುವ ನಟ, ಸೆಪ್ಟೆಂಬರ್ 2ರಂದು ಬೆಳಗ್ಗೆ 10 ಗಂಟೆಯಿಂದ 12ರ ವರಗೆ ಜಯನಗರದ ಎಂಇಎಸ್​​ ಗ್ರೌಂಡ್​ನಲ್ಲಿ ನಿಮ್ಮನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.

ಅಭಿನಯ ಚಕ್ರವರ್ತಿ ನಟನೆಗೆ ಮಾತ್ರವಲ್ಲ, ನಿರೂಪಣೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಅದ್ಭುತವಾಗಿ ಹೋಸ್ಟ್ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಕಿಚ್ಚನ ಬದಲು ಬೇರೆ ನಟ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ''ಬಿಗ್ ಬಾಸ್ ಮಾಡಲು ನಾನೆಷ್ಟು ಕಷ್ಟ ಪಡುತ್ತೇನೆಂಬುದು ಗೊತ್ತೇ?. ಸಿನಿಮಾಗೆ ಟೈಂ ಕೊಡ್ಲಾ? ಬಿಗ್​​ಬಾಸ್​ಗೆ ಸಮಯ ಇಡ್ಲಾ? ಅಥವಾ ನನಗೆ ಅಂತಾ ಟೈಂ ಕೊಡ್ಲಾ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು.

ಇದನ್ನೂ ಓದಿ: 'ಲಾಫಿಂಗ್ ಬುದ್ಧ'ನನ್ನು ಮೆಚ್ಚಿಕೊಂಡ ಬೆಂಗಳೂರು ಪೊಲೀಸ್​ ಕಮಿಷನರ್ ದಯಾನಂದ್: ಚಿತ್ರತಂಡ ಹೇಳಿದ್ದಿಷ್ಟು - LAUGHING BUDDHA FILM

ಮ್ಯಾಕ್ಸ್​​ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದು, ಕಲೈಪುಲಿ ಎಸ್ ಥನು ಮತ್ತು ಸುದೀಪ್ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಮೂಲಗಳ ಪ್ರಕಾರ ಸೆ.27ರಂದು ಮ್ಯಾಕ್ಸ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬರ್ತ್​​​ಡೇ, ಬಿಗ್​​ಬಾಸ್​ ಬಗ್ಗೆ ಮಾಹಿತಿ ಕೊಟ್ಟ ಸುದೀಪ್​​: 'ದರ್ಶನ್ ಬಗ್ಗೆ ಮಾತನಾಡಿ ನೋವು ಕೊಡೋದು ಬೇಡ'ವೆಂದ ಕಿಚ್ಚ - Sudeep

ಮ್ಯಾಕ್ಸ್ ಮೂಲಕ ಮ್ಯಾಕ್ಸಿಮಮ್ ಎಂಟರ್​ಟೈನ್ಮೆಂಟ್ ಕೊಡಲು ರೆಡಿಯಾಗಿರುವ ಸುದೀಪ್ ಆ ನಂತರ ಬಿಲ್ಲ ರಂಗ ಭಾಷ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸಮಾಚಾರ ಹರಿದಾಡ್ತಿದೆ. ಅಸಲಿಗೆ ಕಿಚ್ಚನ ಕೈಯಲ್ಲೀಗ ಮೂರು ಬಹುನಿರೀಕ್ಷಿತ ಪ್ರಾಜೆಕ್ಟ್​​ಗಳಿವೆ. ಒಂದು ಬಿಲ್ಲ ರಂಗ ಭಾಷ, ತಮಿಳಿನ ಚೇರನ್ ನಿರ್ದೇಶನದ ಚಿತ್ರ ಹಾಗೂ ಕಿಂಗ್ ಕಿಚ್ಚ. ಈ ಮೂರು ಚಿತ್ರಗಳಲ್ಲಿ ಹೆಬ್ಬುಲಿ ಮೊದಲು ಅದ್ಯಾವ ಸಿನಿ ಅಖಾಡಕ್ಕೆ ಎಂಟ್ರಿ ಕೊಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಮೂರು ಚಿತ್ರಗಳಲ್ಲಿ ಯಾವ ಸಿನಿಮಾವನ್ನು ಮೊದಲು ಶುರು ಮಾಡುತ್ತೇನೆಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.